LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತಾಯಿ, ಮಗಳ ಶವ ಬಾವಿಯಲ್ಲಿ ಪತ್ತೆ- ಕಾರಣ ನಿಗೂಢ..!

ತಾಯಿ ಮತ್ತು ಐದು ವರ್ಷದ ಮಗುವಿನ ಮೃತದೇಹಗಳು ಬಾವಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಉದುಮ ಸಮೀಪದ ಕಳ್ನಾಡ್ ನಿಂದ ವರದಿಯಾಗಿದೆ.

ಕಾಸರಗೋಡು : ತಾಯಿ ಮತ್ತು ಐದು ವರ್ಷದ ಮಗುವಿನ ಮೃತದೇಹಗಳು ಬಾವಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಉದುಮ ಸಮೀಪದ ಕಳ್ನಾಡ್ ನಿಂದ ವರದಿಯಾಗಿದೆ.

ಕಳ್ನಾಡ್ ಅರಮಂಗಾನ ನಿವಾಸಿ ತಾಜುದ್ದೀನ್ ಎಂಬವರ ಪತ್ನಿ ರುಬೀನಾ(33) ಮತ್ತು ಅವರ ಐದು ವರ್ಷದ ಪುತ್ರಿ ಹನಾನ್ ಮರಿಯ ಮೃತ ದುರ್ದೈವಿಗಳಾಗಿದ್ದಾರೆ.

ಶುಕ್ರವಾರ ಅಪರಾಹ್ನದಿಂದ ತಾಯಿ-ಮಗಳು ನಾಪತ್ತೆಯಾಗಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮನೆ ಸಮೀಪದ ಬಾವಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಮಗುವನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ

ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪರಿಸರವಾಸಿಗಳ ನೆರವಿನಿಂದ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.

ರುಬೀನಾರ ಪತಿ ತಾಜುದ್ದೀನ್ ಗಲ್ಫ್ ಉದ್ಯೋಗಿಯಾಗಿದ್ದು  ಮೇಲ್ಪರಂಬ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST