LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ತೈವಾನ್ ಸುತ್ತ ಚೀನಾದ 7 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆ

ತೈಪೆ: ಚೀನಾದ 7 ಮಿಲಿಟರಿ ವಿಮಾನಗಳು ಮತ್ತು 5 ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ (ಎಂಎನ್‌ಡಿ) ಪತ್ತೆ ಹಚ್ಚಿದೆ.

7 ಮಿಲಿಟರಿ ವಿಮಾನಗಳ ಪೈಕಿ ಒಂದು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ. ಚೀನಾದ ಆಕ್ರಮಣಕಾರಿ ವರ್ತನೆಯನ್ನು ತೈವಾನ್‌ನ ಸಶಸ್ತ್ರ ಪಡೆಗಳು ಮೇಲ್ವಿಚಾರಣೆ ನಡೆಸಿವೆ. ಬಳಿಕ, ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ನ ಎಂಎನ್‌ಡಿ ತಿಳಿಸಿದೆ.

ಇನ್ನು ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಮತ್ತು ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎನ್ನಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು, ನಿಮಗೂ ಭಯವಿದೆ ಎಂದು ಸಿಎಂ ಕಾಲೆಳೆದ HDKಬೆಂಗಳೂರು: ಕೊಲೆಮಾಡಿ 1550 ಕಿ.ಮೀ ಬೈಕ್ ರೈಡ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ ಮುಕ್ತಿತಿರುಪತಿ ಲಡ್ಡು ವಿವಾದ: ಪ್ರಸಾದ ತಯಾರಿಕೆ ಕುರಿತು ಅಯೋಧ್ಯೆಯ ರಾಮ ಮಂದಿರದಿಂದ ಮಹತ್ವದ ನಿರ್ಧಾರಬೈಂದೂರು ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ ನಿಧನಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು ಸಾಧ್ಯತೆ..!ಮಜ್ಜಿಗೆ ಸೇವಿಸೋದರಿಂದ ದೇಹಕ್ಕೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ..!?ಅಡಿಕೆ ರಸಂ ತಯಾರಿಸುವ ವಿಧಾನ: ಬಾಯಿ ಚಪ್ಪರಿಸಿ ಸವಿಯಿರಿಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸಮಾನವಾಗಿ ಸ್ವೀಕರಿಸಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ