E-PAPER
17 Nov 2026, 12:21:08 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ತ್ರಿಪದಿ ಕವಿ ಸರ್ವಜ್ಞ ಜಯಂತಿ ಉತ್ಸವ-೨೦೨೪------------------------------------------ಯುವ ಪೀಳಿಗೆ ಸಮಗ್ರ ಅಭಿವೃದ್ದಿ ಹೊಂದಲು ಶಿಕ್ಷಣ ಅವಶ್ಯಕ : ಡಾ. ನಿರ್ಮಲ ಬಟ್ಟಲ

ಬೆಳಗಾವಿ-21: ಸಮಾಜದಲ್ಲಿ ಗೌರವಯುತವಾಗಿ ಬಾಳಲು ಶಿಕ್ಷಣ ಮುಖ್ಯ. ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಹೆಚ್ಚು ಒತ್ತು ನೀಡಬೇಕು. ಮುಂದಿನ ಪೀಳಿಗೆ ಸಮಗ್ರ ಅಭಿವೃದ್ಧಿ ಹೊಂದಲು ಶಿಕ್ಷಣದ ಪಾತ್ರ ಬಹಳಷ್ಟಿದೆ ಎಂದು ಬೆಳಗಾವಿ ಎಂ.ಎನ್.ಆರ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ನಿರ್ಮಲ ಬಟ್ಟಲ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ  ನಡೆದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.16ನೇ ಶತಮಾನದಲ್ಲಿ ತ್ರಿಪದಿ ಕವಿ ಸರ್ವಜ್ಞ ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ಅನೇಕ ಮಾಹಿತಿ ನೀಡಿದ್ದಾರೆ. ಜಾತಿ, ಮತ, ಪಂಥಗಳ ಬಗ್ಗೆ ಸಮಾಜದ ಅಂಕು-ಡೊಂಕು ತಿದ್ದುವ ಮೂ­ಕ ಮನುಷ್ಯರಾಗಿ ಬಾಳುವುದು ಮುಖ್ಯ ಎಂದು ಕವಿ ಸರ್ವಜ್ಞರು ಮನುಕುಲಕ್ಕೆ ಸಂದೇಶ ಸಾರಿದ್ದಾರೆ. ಸರ್ವಜ್ಞ ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿ, ತಮ್ಮ ಅಲೋಚನೆ ಮೂಲಕ ವಚನಗಳನ್ನು ನೀಡಿದ್ದಾರೆ. ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕಿದ್ದ ಸರ್ವಜ್ಞರ ತ್ರಿಪದಿ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಎಲ್ಲ ಸಮುದಾಯದ ಜ್ಞಾನದ ದಿಕ್ಕನ್ನೇ ಬದಲಾಯಿಸಿದ ಕೀರ್ತಿ ಸರ್ವಜ್ಞರಿಗೆ ಸಲ್ಲುತ್ತದೆ. ಜನಸಾಮಾನ್ಯರು ಅರ್ಥೈಸಿಕೊಳ್ಳುವಂತಹ ಬದುಕಿನ ನೈಜ್ಯ ಸ್ಥಿತಿಯನ್ನು ತಮ್ಮದೇಯಾದ ಸಾಲುಗಳಲ್ಲಿ ರಚಿಸಿ ಸಮಾಜದಲ್ಲಿ ಸಾಮರಸ್ಯ ಮತ್ತು ಧಾರ್ಮಿಕ ಜಾಗೃತಿಯನ್ನು ಉಂಟು ಮಾಡಿದವರು ಕವಿ ಸರ್ವಜ್ಞರು ಎಂದು ಹೇಳಿದರು.ತಮ್ಮ ತ್ರಿಪದಿಗಳ ಅತ್ಯಂತ ಸರಳವಾದ ಕನ್ನಡ ಭಾಷೆಯ ಮೂ­ಕ ಜೀವನ, ಆದರ್ಶ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿದ್ದಾರೆ. ಇವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಬದುಕು ರೂಪಿಸಿಕೊಳ್ಳಬೇಕು ಎಂದರು.ಕುAಬಾರಿಕೆ ಕಲೆಯು ಕುಂಬಾರರಿಗೆ ವರವಾಗಿ ಬಂದಿದೆ. ಈ ಕಲೆ ಉಳಿಸಿಕೊಳ್ಳಲು ಅದಕ್ಕೆ ಆಧುನಿಕ ಸ್ಪರ್ಶ ನೀಡಬೇಕು. ಅದಕ್ಕಾಗಿ ಕೌಶಲ್ಯಾಧಾರಿತ ತರಬೇತಿ ಪಡೆಯಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಡಾ. ನಿರ್ಮಲ ಬಟ್ಟಲ ಅವರು ಸಲಹೆ ಹೇಳಿದರು.ವಿದ್ಯಾರ್ಥಿಗಳಿಗೆ ಸನ್ಮಾನ:ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕುಂಬಾರ ಸಮಾಜದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ಬೆಳಗಾವಿ ತಹಸೀಲ್ದಾರರಾದ ಸಿದ್ದು ಬೋಸಗಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳಾದ ರಾಹುಲ್ ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಡಾ. ಆಯ್. ಎಸ್. ಕುಂಬಾರ, ಸುರೇಶ, ಚಂದ್ರಶೇಖರ ಯಡೂರ್, ನಿಂಗಪ್ಪ ಕುಂಬಾರ, ಜ್ಯೋತಿ ಬದಾಮಿ ಸೇರಿದಂತೆ ಮತ್ತಿತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.