LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದ ಹೆಚ್ ಡಿ ಕೆ ಮಾತು ತಪ್ಪಿದ್ರಾ ?

ಚಿಕ್ಕಮಗಳೂರು: ಜೆಡಿಎಸ್‌-ಬಿಜೆಪಿ ಮೈತ್ರಿ ಖಚಿತವಾದ ಬೆನ್ನಲ್ಲಿಯೇ ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದು ದತ್ತಮಾಲೆ ಧರಿಸಲು ನಾಳೆ ಕೊನೆಯ ದಿನವಾಗಿದ್ದು ಇಲ್ಲಿಯ ವರೆಗೆ ಕುಮಾರಸ್ವಾಮಿ ಆಗಮಿಸಲಿಲ್ಲ ಆದ್ದರಿಂದ ಕುಮಾರಸ್ವಾಮಿ ದತ್ತಮಾಲೆ ಹಾಕುತ್ತಾರಾ ಇಲ್ಲವೇ ಎಂಬ ಪ್ರಶ್ನೆ ಶುರುವಾಗಿದೆ.

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ಜೆಡಿಎಸ್‌ ಪಕ್ಷವನ್ನು ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಖಚಿತಗೊಂಡ ಬೆನ್ನಲ್ಲಿಯೇ ಮಾಜಿ ಸಿಎಂ ಕುಮಾರಸ್ವಾಮಿ ದತ್ತಪೀಠಕ್ಕೆ ಭೇಟಿ ನೀಡಿದಾಗ ತಾವು ದತ್ತಮಾಲೆ ಧರಿಸುವುದಾಗಿ ಬಹಿರಂಗ ಘೋಷಣೆ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಹೇಳಿಕೆಯನ್ನು ಬಜರಂಗದಳ, ವಿಶ್ವಹಿಂದು ಪರಿಷತ್ ಸ್ವಾಗತಿಸಿತ್ತು. ಬಜರಂಗದಳ, ವಿಶ್ವಹಿಂದು ಪರಿಷತ್‌ನಿಂದ ಆಹ್ವಾನವನ್ನೂ ನೀಡಿತ್ತು ಎನ್ನಲಾಗುತ್ತಿದೆ. ವಿಶ್ವಹಿಂದು ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 17 ರಿಂದ 26 ರವರೆಗೂ ನಡೆಯುಲಿರುವ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ನಾಳೆ ದತ್ತಮಾಲಾಧಾರಣೆಗೆ ಕೊನೆಯ ದಿನವಾಗಿದ್ದು ಆದರೂ ಇಲ್ಲಿಯವರೆಗೂ ಕುಮಾರ ಸ್ವಾಮಿ ದತ್ತಮಾಲೆ ಹಾಕದಿರುದರಿಂದ ಜನರಲ್ಲಿ ವಿವಿಧ ರೀತಿಯ ಪ್ರಶ್ನೆಗಳು ಕಾಡಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಯೋಜನೆಯಲ್ಲಿ ರೈತರಿಗೆ 3 ಸಾವಿರ ರೂ. ಪಿಂಚಣಿ"ಬ್ಯೂಟಿ ಕ್ವೀನ್ ಬರ್ಬರ ಹತ್ಯೆ" - ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರುಗಂಡ ಹೆಂಡತಿ ಜಗಳದಲ್ಲಿ ಮೊಸಳೆಗೆ ಆಹಾರವಾದ ಮಗುಆಯ್ಕೆಯಾದರೂ ಪ್ರಜ್ವಲ್ ರೇವಣ್ಣ ಉಚ್ಛಾಟನೆ ; ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಪ್ರಜ್ವಲ್ ರೇವಣ್ಣ ಕೇಸ್: 'ಬ್ಲ್ಯೂ ಕಾರ್ನರ್ ನೊಟೀಸ್ ಜಾರಿ'- ಪರಮೇಶ್ವರ್'ಈ ಬಾರಿ NDA ಅಧಿಕಾರಕ್ಕೆ ಬರುವುದಿಲ್ಲ,BJP 200 ಸ್ಥಾನ ತಲುಪಿದರೆ ಹೆಚ್ಚು' - ಸಿಎಂತೈವಾನ್ ಸುತ್ತ ಚೀನಾದ 7 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆದಳಪತಿಗಳಿಗೆ ಮತ್ತೊಂದು ಶಾಕ್!: ಜೆಡಿಎಸ್ ಶಾಸಕರು‌ ಕೈ ಸಂಪರ್ಕದಲ್ಲಿ..? ಈ ಬಗ್ಗೆ ಡಿಕೆಶಿ ನೀಡಿದ ಪ್ರತಿಕ್ರಿಯೆ ಏನು?ಎಸ್‌ಐಟಿಯಿಂದ ರೇವಣ್ಣ ವಿಚಾರಣೆ - ಶಾಸಕರಿಗೆ ಪ್ರಶ್ನೆಗಳ ಸುರಿಮಳೆಸಹೋದರ ಎಚ್‌.ಡಿ ರೇವಣ್ಣ ಬಂಧನ ಬೆನ್ನಲ್ಲೇ ಆಪ್ತರೊಂದಿಗೆ ರಹಸ್ಯ ಮಾತುಕತೆ ನಡೆಸಿದ ಎಚ್‌ಡಿಕೆ