LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಸರಾ ರಜೆಗೆ ಈ ಬಾರಿಯೂ ಕತ್ತರಿ| ವಿದ್ಯಾರ್ಥಿ, ಶಿಕ್ಷಕರಿಗೆ ನಿರಾಸೆ

ಅಕ್ಟೋಬರ್ ತಿಂಗಳಿನಲ್ಲಿ ಶಾಲೆಗಳಿಗೆ ದಸರಾ ರಜೆ ಸಿಗಲಿದೆ ಎಂದು ಖುಷಿಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ದಸರಾ ರಜೆ ನೀಡುವ ಕುರಿತು ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ರಜೆಯಲ್ಲಿ ಕಡಿತ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಸಮಯದಲ್ಲಿ ನಡೆಯದ ತರಗತಿ ಸರಿದೂಗಿಸಲು ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ ಬಾರಿ ಜನ ಜೀವನ ಸಾಮಾನ್ಯವಾಗಿದ್ದರೂ ಸಹ ರಜೆ ಕಡಿತ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.

ಈ ಬಾರಿ ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 8 ರಿಂದ 24ರ ತನಕ ದಸರಾ ರಜೆ ನೀಡಲಾಗಿದೆ. ವಿಶೇಷ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಶಿಕ್ಷಕರು ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಿದೆ.

ಸರ್ಕಾರ 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದಾಗಲೇ ದಸರಾ ರಜೆ ಕಡಿತಗೊಳ್ಳುವ ಸೂಚನೆ ಸಿಕ್ಕಿತ್ತು. ಈ ವರ್ಷ ಒಟ್ಟು ಲಭ್ಯವಾಗುವ ಶಾಲಾ ಕರ್ತವ್ಯದ ದಿನಗಳು 244. ಪರೀಕ್ಷೆ, ಮೌಲ್ಯಾಂಕನ ಕಾರ್ಯಗಳಿಗೆ 26 ದಿನಗಳು. ಪಠ್ಯೇತರ ಚಟುವಟಿಕೆ/ ಪಠ್ಯ ಚಟುವಿಕೆ/ ಸ್ಪರ್ಧೆಗಳ ನಿರ್ವಹಣೆಗಾಗಿ 24 ದಿನಗಳು. ಬೋಧನಾ-ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯದ ದಿನಗಳು 180 ಎಂದು ಪಟ್ಟಿ ಮಾಡಲಾಗಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿಯಲ್ಲಿ ದಟ್ಟ ಮಂಜು- ವಿಮಾನಗಳು ವಿಳಂಬ, ಮಾರ್ಗ ಬದಲಾವಣೆಶೀಘ್ರವೇ 7500 ಶಿಕ್ಷಕರನ್ನು ನೇಮಿಸಿಕೊಳ್ಳಲಿರುವ ಶಿಕ್ಷಣ ಇಲಾಖೆ..!'ಸರ್ಕಾರಕ್ಕೆ ಹಿಜಬ್‌ ವಾಪಸ್‌ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು'- ಓವೈಸಿಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆ