LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಾಖಲೆಗೆ ವೈಟ್ನರ್ ಹಚ್ಚಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ - ರವಿಕುಮಾರ್ ಸವಾಲ್

ಬೆಂಗಳೂರು: ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ಹಾಗೇ ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ಕೊಡಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ರವಿಕುಮಾರ್, ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು. ದಾಖಲೆಗೆ ವೈಟ್ನರ್ ಹಚ್ಚಿಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ. ಧಮ್ ಇದ್ದರೆ ಸಿದ್ದರಾಮಯ್ಯನವರು ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಬರಲಿ. ಪಾರ್ವತಿ ಅವರ ಪತ್ರದಲ್ಲಿ ವೈಟ್ನರ್ ಹಚ್ಚಿದ್ದು ನಮ್ಮ ಸರ್ಕಾರದಲ್ಲಿ ಅಲ್ಲ ಅಂತ ಸಿದ್ದರಾಮಯ್ಯ ಆಣೆ ಮಾಡಲಿ ಎಂದು ಸವಾಲ್ ಹಾಕಿದರು. ಸರ್ಕಾರಕ್ಕೆ ಧಮ್ ತಾಕತ್ ಇದ್ದರೆ ಮುಡಾ ಕೇಸ್ ಸಿಬಿಐಗೆ ಕೊಡಲಿ. ಸಿದ್ದರಾಮಯ್ಯ ಸುಳ್ಳು ರಾಮಯ್ಯ, ಅಶುದ್ಧ ರಾಮಯ್ಯ ಎಂದು ಸಿಎಂ‌ ವಿರುದ್ಧ ಕಿಡಿಕಾರಿದ ರವಿಕುಮಾರ್, ಈ ಸರ್ಕಾರ ಬಂದ ನಂತರ ಮುಡಾದಲ್ಲಿ 1950 ನಿವೇಶನಗಳ ಅಕ್ರಮ ಹಂಚಿಕೆ ಆಗಿದೆ. ಮರಿಗೌಡ, ಬೈರತಿ ಸುರೇಶ್, ಭ್ರಷ್ಟರಾಮಯ್ಯ ಸೇರಿಕೊಂಡು ಅಕ್ರಮ ಮಾಡಿದ್ದಾರೆ. ಸೈಟ್‌ಗಳನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು..

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವುಮಹಾಕುಂಭಮೇಳ ಮಾಘೀ ಪೂರ್ಣಿಮೆಗೆ 'ವಾಹನ ರಹಿತ ವಲಯ' ವಿಶೇಷ ಸಂಚಾರ ಯೋಜನೆದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಕೃಷಿಗೂ ಬಂತು AI ತಂತ್ರಜ್ಞಾನ- ಬೆಳೆ ನಿರ್ವಹಣೆಗೆ ಬಗ್ಗೆ ನೀಡಲಿದೆ ಮಾಹಿತಿಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರ ಬಂಧನಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್: ಠಾಣೆಗೆ ಕಲ್ಲು ತೂರಾಟ, ಲಾಠಿಚಾರ್ಜ್ – ಓರ್ವನ ಬಂಧನಮೊಡವೆ ಕಾಟ ನಿವಾರಿಸಲು ಬಾಳೆಹಣ್ಣು ಸಿಪ್ಪೆಯನ್ನು ಹೀಗೆ ಬಳಸಿ..!ಆಧಾರ್‌ ಇದ್ರೆ ಸಾಕು 50,000 ರೂ.ಗಳವರೆಗೆ ತ್ವರಿತ ಸಾಲರಾಜ್ಯದಲ್ಲಿ ಭರ್ಜರಿ ಉದ್ಯೋಗ: 40,000 ರೂ. ವೇತನದೆಹಲಿ : ಚುನಾವಣೆಯಲ್ಲಿ ಸೋಲು, INDIA blocನಲ್ಲಿ ಬಿರುಕು ವದಂತಿ…!