LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೀಪಾವಳಿ ಹಬ್ಬ; ಒಳ ಮೀಸಲಾತಿ ಸಿಗಬೇಕಿತ್ತು.! ಎಂ.ಆರ್.ಶಿವರಾಜ್ .!

ನಮಸ್ಕಾರ ಬಂಧುಗಳೇ..... ಬಾರಿಯ ದೀಪಾವಳಿ ಮಾದಿಗ ರ ಮನೆಗಳಲ್ಲಿ ಬೆಳಕು ಹರ್ಷ ತುಂಬಿದ ಹಬ್ಬವಾಗಬಹುದು ಎಂದು ಆಶಿಸಿದ್ದೇವು.

ಕಾರಣ ಆಗಷ್ಟ 1 ನೇ ತಾರೀಖು ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳ್ಳುತ್ತದೆ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರದಲ್ಲಿಯೆ ಮುಂಚೂಣಿಯಲ್ಲಿ ಇರುವುದು ಎಂದು ಶೋಷಿತ ಸಮುದಾಯಗಳು ಎಣಿಸಿದ್ದವು.

ಆದರೆ ಆಗಿದ್ದೇ ಬೇರೆ ಸತತ 45 ದಿನಗಳ ಹೋರಾಟ ನಗರ ಹಳ್ಳಿಗಳಿಂದ ಪಾದಯಾತ್ರೆ ಧರಣಿ, ಘೇರಾವ್, ಮನವಿ ನೀಡುವುದು ಹೀಗೆ ಸಂಘಟನೆಯ ಕಾರ್ಯಕರ್ತರು ಮುಖಂಡರು ಮಾದಿಗ ಸಮುದಾಯ ದ ಸಾಮಾನ್ಯರು ರಾಜ್ಯಾದ್ಯಂತ ಹೋರಾಟ ಕ್ಕೆ ಇಳಿದ ಪರಿಣಾಮ ಸರ್ಕಾರ ದ ಕಣ್ಣು ಕಿವಿ ತೆರದವು.

ಎಚ್ಚೆತ್ತ ಸರಕಾರ ಕೊನೆಗೂ ಮೌನ ಮುರಿದು ಒಳ ಮೀಸಲಾತಿ ಜಾರಿಗೊಳಿಸಲು ಬದ್ದ ಎಂದು ಸಚಿವ ಸಂಪುಟ ದ ನಿರ್ಣಯ ಅಂಗೀಕರಿಸಿತು ಮೂರು ತಿಂಗಳ ಅವಧಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರ ಏಕ ಸದಸ್ಯ ಆಯೋಗ ರಚನೆ ಮಾಡಿ ವರದಿ ಸಿದ್ಧಪಡಿಸಿ ವೈಜ್ಞಾನಿಕವಾಗಿ ಜಾರಿಗೊಳಿಸುತ್ತೇವೆ ಎಂದು ಸ್ವತಃಹ ಮುಖ್ಯ ಮಂತ್ರಿಗಳೆ ಪ್ರಕಟಣೆ ಯ ಮೂಲಕ ತಿಳಿಸಿದ್ದಾರೆ.

ಈ ಮಧ್ಯೆದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಬೆಂಗಳೂರಿನ ಪತ್ರಿಕಾ ಗೋಷ್ಠಿ ಯಲ್ಲಿ ಹೋರಾಟಗಾರರಿಗೆ ಬೆದರಿಕೆ ರೂಪದಲ್ಲಿ ಎಚ್ಚರಿಕೆ ನೀಡಿದ್ದಾರೆ ಇದು ಮಾದಿಗ ಸಮುದಾಯ ದ ಹೋರಾಟಗಾರರಿಗೆ ಸಾಮಾನ್ಯರಿಗೆ ಮಾಡಿದ ಅವಮಾನ.

ಒಳ ಮೀಸಲಾತಿ ಜಾರಿಗೊಳ್ಳುವುದಕ್ಕು ಮುನ್ನ ಅಭಿನಂದನೆಗಳು ಸಂಭ್ರಮಾಚರಣೆ ಮಾಡುವುದು ಎಷ್ಟು ಸರಿ . ಬೀದಿ ಹೋರಾಟ ಮಾಡಿದ್ದರಿಂದಲೇ ಆಯೋಗ ರಚನೆ ಮಾಡಲು ಸಾಧ್ಯವಾಯಿತು. ಸಮುದಾಯದ ಸಾಮಾನ್ಯರು ಎಚ್ಚೆತ್ತಿದ್ದಾರೆ ಯಾವುದೇ ಪಕ್ಷದ ಗುಲಾಮರಲ್ಲ ನೀವುಗಳು ಪಕ್ಷದ ನಾಯಕರು ಸಮುದಾಯದ ನಾಯಕರಲ್ಲ ಎಂಬುದು ನೆನಪಿರಲಿ.

ಮಾದಿಗ ಬಂಧುಗಳೇ ಸಹನೆಗೂ ಒಂದು ಮೀತಿ ಇದೆ ಹೋರಾಟಗಾರರಿಗೆ ಸಮುದಾಯದ ಸಾಮಾನ್ಯರಿಗೆ ಗೌರವ ಕೃತಜ್ಞತೆ ಸಲ್ಲಿಸದ ಯಾರೆ ಆಗಿರಲಿ ಅಂತವರನ್ನು ಖಂಡಿಸಿ......ಜೈ ಭೀಮ್.

ಎಂ.ಆರ್.ಶಿವರಾಜ್
ಒಳ ಮೀಸಲಾತಿ ಹೋರಾಟಗಾರ
ಚಿತ್ರದುರ್ಗ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕ್ ಖರ್ಗೆನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವುಉಡುಪಿ: ಸ್ನೇಹಿತರೇ ರಾತ್ರೋರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯ ಬರ್ಬರ ಹತ್ಯೆಚಾರ್ಮಾಡಿ ಘಾಟ್‌ನಲ್ಲಿ ಅಪಘಾತ: ಪ್ರಪಾತಕ್ಕೆ ಬಿದ್ದು ಯುವಕಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ: ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋನಿಲ್ಲಿಸಿದ್ದ ಶಾಲಾ ಬಸ್ಸಿನ ಒಳಗೆ ಬೆಂಕಿ ಅವಘಡ : ವ್ಯಕ್ತಿ ಸಜೀವ ದಹನಆ.15ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ!!ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ..!1990ರ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಶ್ನಾ ಚೌಧರಿ