LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದುಬೈನಲ್ಲಿ ವರುಣನ ಅರ್ಭಟ- ವಿಮಾನ ನಿಲ್ದಾಣ ಜಲಾವೃತ,ಜನಜೀನ ಅಸ್ತವ್ಯಸ್ಥ

ದುಬೈ: ದುಬೈನಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಯಾಗುತ್ತಿದ್ದು ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಕೆಲವು ವಿಮಾನ ಗಳ ಹಾರಾಟ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಯುಎಇಯ ಪ್ರಮುಖ ಹೆದ್ದಾರಿಗಳ ಭಾಗಗಳು ಜಲಾವೃತಗೊಂಡಿದ್ದು ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ.

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DXB) ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು, ಹಲವು ವಿಮಾನಗಳು ವಿಳಂಬಗೊಂಡಿವೆ.

ಭಾರೀ ಮಳೆಯಿಂದಾಗಿ, ಯುಎಇ ಆಡಳಿತವು ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ಮನವಿ ಮಾಡಿದೆ. ಶಾಲೆಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿದ್ದ. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಹವಾಮಾನ ಕೇಂದ್ರವು ದುಬೈ, ಅಬುಧಾಬಿ, ಶಾರ್ಜಾ ಮತ್ತು ಇತರ ಕೆಲವು ಎಮಿರೇಟ್‌ಗಳ ನಿವಾಸಿಗಳಿಗೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಯುಎಇಯ ನೆರೆಯ ದೇಶಗಳಾದ ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಭಾರೀ ಮಳೆಯಾಗಿದೆ.

ಒಮಾನ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 18 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 10 ಶಾಲಾ ಮಕ್ಕಳ ವಾಹನ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಬಹ್ರೇನ್‌ನ ರಾಜಧಾನಿ ಮನಾಮದಲ್ಲಿ ಬೀದಿಗಳು ಜಲಾವೃತಗೊಂಡಿವೆ. ಬುಧವಾರ ಕುವೈತ್, ಸೌದಿ ಅರೇಬಿಯಾ ಮತ್ತು ಒಮಾನ್‌ನಲ್ಲಿ ಚಂಡಮಾರುತದ ಸಾಧ್ಯತೆ ಇದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BPL ರೇಷನ್ ಕಾರ್ಡ್ ಇದ್ದರೆ ಸಾಕು ₹15,000 ಉಚಿತ ಹಣ ಸಿಗುತ್ತೆ- ಈಗಲೇ ಅರ್ಜಿ ಸಲ್ಲಿಸಿ... ಲಿಂಕ್ ಇಲ್ಲಿದೆಗ್ರಾಹಕರೇ ಎಚ್ಚರ...! ಎಚ್ಚರ..! ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ- ಖರೀದಿ ವೇಳೆ ಎಚ್ಚರಮಂಗಳೂರಿನಲ್ಲಿ ಹಿಂಸಾರೂಪ ಕಾಂಗ್ರೆಸ್ ಪ್ರತಿಭಟನೆ: ಬಸ್ ಗೆ ಕಲ್ಲು ತೂರಾಟ,ಮೂವರು ಅರೆಸ್ಟ್- ಹಲವರ ವಿರುದ್ಧ ಪ್ರಕರಣ ದಾಖಲುಮಂಗಳೂರಿನಲ್ಲಿ ಹಿಂಸಾರೂಪ ಪಡೆದ ರಾಜ್ಯಪಾಲರ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆ- *ಬಸ್‌ಗೆ ಕಲ್ಲು ತೂರಾಟ, ಟೈರಿಗೆ ಬೆಂಕಿ..!Indian Bank Recruitment 2024: ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!ಬೆಂಗಳೂರು: ತೆರಿಗೆ ವಿನಾಯಿತಿ ಕೇಳಿ ಬಿಬಿಎಂಪಿಗೆ ಸಾರಿಗೆ ಇಲಾಖೆ ಪತ್ರ - ಮನವಿ ತಿರಸ್ಕರಿಸಿದ ಬಿಬಿಎಂಪಿಮಹಡಿ ಮೇಲಿಂದ ಎಸಿ ಬಾಕ್ಸ್​ ಬಿದ್ದು ಯುವಕ ಸಾವುನಕಲಿ ಎನ್‌ಸಿಸಿ ಶಿಬಿರದಲ್ಲಿ 13 ಬಾಲಕಿಯರಿಗೆ ಲೈಂಗಿಕ ಕಿರುಕುಳ; 11 ಮಂದಿ ಅರೆಸ್ಟ್ಮುಡಾ ಹಗರಣ ಕೇಸ್: ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯನಲಪಾಡ್ ಹೆಸರು ಹೇಳಿ ವಿದ್ಯಾರ್ಥಿಯ ಕಿಡ್ನಾಪ್.! - ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಗಳು