LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೆಹಲಿಯ ಸಿಆರ್‌ಪಿಎಫ್ ಶಾಲೆ ಬಳಿ ಭಾರೀ ಸ್ಪೋಟ; ಸ್ಥಳಕ್ಕೆ ಧಾವಿಸಿದ ಫೋರೆನ್ಸಿಕ್ ತಂಡ

ಹೊಸದಿಲ್ಲಿ: ದೆಹಲಿಯ ರೋಹಿಣಿಯಲ್ಲಿರುವ ಸಿಆರ್‌ಪಿಎಫ್ ಶಾಲೆಯಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದೆ. ಶಾಲೆಯ ಗೋಡೆಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ತಿಳಿದುಬಂದಿದೆ. ಫೋರೆನ್ಸಿಕ್ ತಂಡಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ ವೀಡಿಯೊವು ಸ್ಫೋಟದ ಸ್ಥಳದ ಸಮೀಪದಿಂದ ಹೊಗೆಯ ಮೋಡವನ್ನು ತೋರಿಸುತ್ತದೆ. “ನಾನು ಮನೆಯಲ್ಲಿದ್ದೆ, ನಾನು ದೊಡ್ಡ ಶಬ್ದವನ್ನು ಕೇಳಿದೆ, ಹೊಗೆಯನ್ನು ನೋಡಿದೆ ಬಳಿಕ ವೀಡಿಯೊವನ್ನು ರೆಕಾರ್ಡ್ ಮಾಡಿದೆ. ನನಗೆ ಏನೂ ತಿಳಿದಿಲ್ಲ, ಪೊಲೀಸ್ ತಂಡ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಪ್ರಶಾಂತ್‌ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳಗ್ಗೆ ಸ್ಫೋಟ ಸಂಭವಿಸಿದೆ.

ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲು ತಜ್ಞರನ್ನು ಕರೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಗೋಯೆಲ್ ಹೇಳಿದ್ದಾರೆ. ಪೊಲೀಸರು ಇನ್ನೂ ಅನುಮಾನಾಸ್ಪದವಾಗಿ ಏನನ್ನೂ ಕಂಡುಕೊಂಡಿಲ್ಲ. ತನಿಖೆಯ ಭಾಗವಾಗಿ ಒಳಚರಂಡಿ ಮಾರ್ಗವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ'- ಸಿಎಂ ಅಸಮಾಧಾನಶಾಲಾ ಆವರಣದೊಳಗೆ ಮದ್ಯ ಸೇವನೆ - ಇಬ್ಬರು ಶಿಕ್ಷಕರು ಅಮಾನತುಮಿಯಾಝಾಕಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು - ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!ಸರ್ಕಾರವೇ ಇನ್ನು ಮೇಲೆ 108 ಆ್ಯಂಬುಲೆನ್ಸ್ ಸೇವೆ ನೀಡಲಿದೆಸೋಫಿಯಾ ಖುರೇಷಿ ಕುಟುಂಬಸ್ಥರ ಮೇಲೆ ದಾಳಿ ಎಂದು ಫೇಕ್ ಪೋಸ್ಟ್ಸುಪ್ರೀಂ ಕೋರ್ಟ್‌ನ 52ನೇ ಸಿಜೆಐ ಆಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕಾರಉಡುಪಿ: ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ, ಐವರು ಗಂಭೀರ..!ಆಕಸ್ಮಿಕವಾಗಿ ಗಡಿರೇಖೆ ದಾಟಿ ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಭಾರತಕ್ಕೆ ವಾಪಾಸ್'ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ'- ಯೋಗಿ ಆದಿತ್ಯನಾಥ್‌ಪಾಕ್ ಪರ ಘೋಷಣೆ - ಟೆಕ್ಕಿ ಅರೆಸ್ಟ್‌