LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೆಹಲಿ ಮದ್ಯ ನೀತಿ ಪ್ರಕರಣ: ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿಸಿದ ದೇಶದ ಮೊದಲ ಕೇಸ್‌

ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಗರಣವೊಂದರಲ್ಲಿ ಇಡೀ ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ‌ ನಿಲ್ಲಿಸಿರುವ ಘಟನೆಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ.   ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆ ನಡೆಸುತ್ತಿರುವ ಜಾರಿ‌ ನಿರ್ದೇಶನಾಲಯವು(ED) ಎಎಪಿ ಪಕ್ಷವನ್ನು ಆರೋಪಿಯನ್ನಾಗಿ ಪರಿಗಣಿಸಿದ್ದು, ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ.

ಭ್ರಷ್ಟಾಚಾರ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾದ ದೇಶದ ಮೊದಲ ರಾಜಕೀಯ ಪಕ್ಷ ಎಂಬ ಕುಖ್ಯಾತಿಗೆ ಎಎಪಿ ಪಾತ್ರವಾಗಿದೆ. ಇದಲ್ಲದೇ ಭಾರತ ರಾಷ್ಟ್ರ ಸಮಿತಿ(BRS) ಪಕ್ಷದ‌ ಮುಖ್ಯಸ್ಥೆ ಕವಿತಾ ಹೆಸರು ಕೂಡ ದೊಷಾರೋಪ ಪಟ್ಟಿಯಲ್ಲಿದೆ.

ಅಬಕಾರಿ ನೀತಿ ಹಗರಣ ತನಿಖೆ ಆರಂಭಿಸಿದ ಬಳಿಕ ಜಾರಿ‌ನಿರ್ದೇಶನಾಲಯ ಸಲ್ಲಿಸುತ್ತಿರುವ ಏಳನೇ ದೋಷಾರೋಪ ಪಟ್ಟಿ ಇದಾಗಿದೆ.

ಅಬಕಾರಿ ನೀತಿ ಹಗರಣದ ದೋಷಾರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರನ್ನು 'ಕಿಂಗ್‌ಪಿನ್' ಹಾಗೂ ಪ್ರಮುಖ ಸಂಚುಕೋರ ಎಂದು ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪ್ರಕರಣದಲ್ಲಿ 18 ಮಂದಿಯನ್ನು ಇಡಿ ಬಂಧಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SSLC ಪಾಸಾದವರಿಗೆ ಗುಡ್ ನ್ಯೂಸ್: ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ..!545 ಪಿಎಸ್ಐ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ.!ಬೈ ಎಲೆಕ್ಷನ್, ಸಿಪಿ ಯೋಗೇಶ್ವರ ಕಾಂಗ್ರೆಸ್ ಸಂಪರ್ಕದಲ್ಲಿ ಇಲ್ಲ.! ಡಿ.ಕೆ.ಶಿಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಅರ್ಧವಾರ್ಷಿಕ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ತಡೆಅರಣ್ಯ ಭೂಮಿ ಒತ್ತುವರಿ: ಸಚಿವ ಎನ್ಎಸ್ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು.!ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ: ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ.!MLC ಸ್ಥಾನಕ್ಕೆ ಸಿ ಪಿ ಯೋಗೇಶ್ವರ್ ರಾಜೀನಾಮೆಗಡಿಯಲ್ಲಿ ಗಸ್ತು ತಿರುಗಲು ಭಾರತ, ಚೀನಾ ಗ್ರೀನ್ ಸಿಗ್ನಲ್ಪೊಲೀಸರ ತ್ಯಾಗ ಹಾಗೂ ಬಲಿದಾನ ಸ್ಮರಣೀಯ-ಜಿಲ್ಲಾಧಿಕಾರಿ ಟಿ.ವೆಂಕಟೇಶ್