LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು'- ಪ್ರಜ್ವಲ್‌ಗೆ ಹೆಚ್‌ಡಿಕೆ ಮನವಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೇಲೆ ಹಾಗೂ ನನ್ನ ಮೇಲೆ ಗೌರವ ಇದ್ದರೆ 24 ರಿಂದ 48 ಗಂಟೆಗಳಲ್ಲಿ ಬಂದು ಶರಣಾಗು. ಬಂದು ತನಿಖೆ ಎದುರಿಸು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ನಗರದ ಜೆಡಿಎಸ್ ಕಛೇರಿಯ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾಕೆ ಹೆದರಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಮೇಲೆ ಪಕ್ಷ ಬೆಳೆದಿದೆ. ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಎಷ್ಟು ದಿನ ಕಳ್ಳ ಪೊಲೀಸ್ ಆಟ. ದೇವೇಗೌಡರಿಗೆ ಮನವಿ ಮಾಡಿ ಅಂತ ಹೇಳಿದ್ದೆ. ಆದರೆ ಈಗ ನಾನೇ ಮನವಿ ಮಾಡ್ತೀನಿ. ಎಲ್ಲೇ ಇದ್ದರೂ ವಾಪಸ್ ಬಂದು ತನಿಖೆಗೆ ಸಹಕಾರ ನೀಡುವಂತೆ ಪ್ರಜ್ವಲ್ ಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಪದ್ಮನಾಭ ನಗರಕ್ಕೆ ನಾನು ಪ್ರಜ್ವಲ್ ನನ್ನು ಬಿಡಿಸಲು ತಂದೆಯೊಂದಿಗೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ತೆರಳಿದ್ದೆ. ಇನ್ನು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ತಲೆ ತಗ್ಗಿಸುವಂತದ್ದು. ಹೀಗಾಗಿ ನಾನು ಬಹಿರಂಗವಾಗಿ ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ. ಎಲ್ಲರೂ ಅಸಹ್ಯ ಪಡುವಂತಹ ಪ್ರಕರಣ ಇದಾಗಿದ್ದು, ಇದರಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಲೆ ಹಾಕಿದ್ದಾರೆ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆ ಉಸಿರುಗಟ್ಟಲಿದೆ'- ಜೈರಾಮ್ ರಮೇಶ್'ವಕ್ಫ್ ವಿಚಾರದಲ್ಲಿ ಬಿಜೆಪಿ ಅವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ'- ಡಿಕೆಶಿಇಂದೇ ನಟ ದರ್ಶನ್ ಜೈಲಿನಿಂದ ಬಿಡುಗಡೆ ಆಗುತ್ತಾ.?ಬೆಳೆ ವಿಮೆ ಕಟ್ಟಿರುವಂತಹ ರೈತರಿಗೆ ತಕ್ಷಣಕ್ಕೆ ಸ್ಥಳ ಸಮೀಕ್ಷೆ ಮಾಡಿ: ರೈತಸಂಘ ಆಗ್ರಹ.!ಮೋದಿ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್.! ಅಕ್ಕಿ ಜೊತೆಗೆ ಈ ಎಲ್ಲಾ ಕಾಳುಗಳು ಸಿಗುತ್ತೆ.!ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ: ಸಿಇಓ ಎಸ್.ಜೆ.ಸೋಮಶೇಖರ್.!ಹಿಜ್ಬುಲ್ಲಾ ಹೊಸ ನಾಯಕನಾಗಿ ನೈಮ್ ಕಾಸ್ಸೆಮ್ ಆಯ್ಕೆ..!ಕರ್ನಾಟಕ ವಿಧಾನಸಭೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಈರುಳ್ಳಿ ಬೆಲೆ ದಿಢೀರ್ ಕುಸಿತ; ರೈತರಿಗೆ ಲಕ್ಷಾಂತರ ರೂ. ನಷ್ಟಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ