LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೇಶದಲ್ಲಿ ಭಯದ ವಾತಾವರಣ: ರಾಹುಲ್ ಗಾಂಧಿ.!

 

ನವದೆಹಲಿ:  ದೇಶದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದು ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.  ಆ ಚಕ್ರವ್ಯೂಹಕ್ಕೆ ದೇಶ ಸಿಲುಕಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ರೈತರು,  ಭಾರತದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದಾರೆ.  ಚಕ್ರವ್ಯೂಹ 1 ಸಣ್ಣ ವ್ಯಾಪಾರಿಗಳ ಮೇಲೆ ಟ್ಯಾಕ್ಸ್, ಚಕ್ರವ್ಯೂಹ 2 ನೋಟ್ ಬ್ಯಾನ್ ,  ಚಕ್ರವ್ಯೂಹ 3 ಜಿಎಸ್ ಟಿ ಮೂಲಕ ಜನಸಾಮಾನ್ಯರಿಂದ ವಸೂಲಿ. ಚಕ್ರವ್ಯೂಹದಲ್ಲಿ ದೇಶವನ್ನ ದೂಡುತ್ತಿದ್ದಾರೆ. ಉದ್ಯೋಗ ನೀಡುವವರ ಮೇಲೆ ಈ ಚಕ್ರವ್ಯೂಹ ದಾಳಿ ನಡೆಸುತ್ತಿದೆ. ಸಣ್ಣ ಮಧ್ಯಮ ಕೈಗಾರಿಕೆಗಳನ್ನ ಈಗಾಗಲೇ ಮುಚ್ಚಿದ್ದಾರೆ. ಹೊಸ ಚಕ್ರವ್ಯೂಹದಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ  ಎಂದು ಹರಿಹಾಯ್ದರು.

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST