LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೇಶದ ಜನರು ಇನ್ಮುಂದೆ 'ಇಂಡಿಯಾ' ಬದಲಾಗಿ 'ಭಾರತ' ಅಂತಾ ಉಲ್ಲೇಖಿಸಿ - RSS ಮುಖ್ಯಸ್ಥ ಮೋಹನ್ ಭಾಗವತ್

ನಮ್ಮ ದೇಶದ ಹೆಸರು ಭಾರತ ಅಂತ ಹಿಂದಿನಿಂದಲೂ ಇದೆ. ಭಾಷೆ ಯಾವುದೇ ಆಗಿರಲಿ, ಹೆಸರು ಒಂದೇ ಆಗಿರುತ್ತದೆ. ಹೀಗಾಗಿ, ಭಾಷೆಗಳ ವ್ಯತ್ಯಾಸವನ್ನ ಲೆಕ್ಕಿಸದೆ ಜನರು ಇನ್ಮುಂದೆ ಇಂಡಿಯಾ ಬದಲಾಗಿ 'ಭಾರತ' ಅಂತ ಕರೆಯೋಕೆ ಶುರು ಮಾಡಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

'ಭಾರತ' ಅನ್ನೋ ಹೆಸರು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲೂ 'ಇಂಡಿಯಾ' ಹೆಸರನ್ನ ಬದಲಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋದು ಮುಖ್ಯವಾಗಿದೆ ಅಂತ ಭಾಗವತ್ ಹೇಳಿದ್ದಾರೆ. ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ನಮ್ಮ ದೇಶದ ಹೆಸರು ಭಾರತ ಅಂತ ಹಿಂದಿನಿಂದಲೂ ಇದೆ. ಆದ್ದರಿಂದ ಇನ್ಮುಂದೆ ಭಾರತ ಅಂತ ಕರೆಯೋಕೆ ಶುರು ಮಾಡಬೇಕು ಎಂದು ಭಾಗವತ್ ಹೇಳಿದ್ದಾರೆ. ಇನ್ನು, ಭಾರತ ಹಿಂದೂ ರಾಷ್ಟ್ರ ಅಂತ ಭಾಗವತ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಭಾರತ ಎಂದಿಗೂ ಹಿಂದು ರಾಷ್ಟ್ರವಲ್ಲ. ನಮ್ಮ ಸಂವಿಧಾನ ಜಾತ್ಯಾತೀತ ರಾಜ್ಯದ ಕಲ್ಪನೆಯನ್ನು ಆಧರಿಸಿದೆ. ಭಾರತದಲ್ಲಿರುವ ಎಲ್ಲಾ ಜನರು ಭಾರತೀಯರು. ನಮ್ಮ ಭಾರತೀಯ ಸಂವಿಧಾನ ಎಲ್ಲಾ ಧರ್ಮಗಳು, ನಂಬಿಕೆಗಳು, ಪಂಗಡಗಳು ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ ಅಂತ ಹೇಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆಕೇಬಲ್ ಟೆವಿಲಿಷನ್ ಮೇಲ್ವಿಚಾರಣಾ ಸಮಿತಿ ಸಭೆ : ಜಾಹಿರಾತು ಸಂಹಿತೆ ಪಾಲನೆ ಮಾಡುವುದು ಕಡ್ಡಾಯ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ-----ಬಿಬ್ಬಿ ಬಾಚಯ್ಯ  ಅವರ ವಚನ …!ತ್ರಿಶೂರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋಕಂಟಕವಾದ ಹೊಸ ಮೊಬೈಲ್‌- ಬ್ಲಾಸ್ಟ್‌ ಆಗಿ ಯುವಕ ಸೇರಿದ ಆಸ್ಪತ್ರೆ!'ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ, ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ'-ಡಿಸಿಎಂಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮನಿರ್ಮಲಾ ಸೀತಾರಾಮನ್​​ರನ್ನು ವಜಾಗೊಳಿಸಿ - ರಾಷ್ಟ್ರಪತಿಗೆ ತಮಿಳುನಾಡು IRS ಅಧಿಕಾರಿ ಪತ್ರ'ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ತಂದಿರುವ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೆ ಎರವಾಗಿದೆ' - ಹೆಚ್​ಡಿಕೆJOB NEWS : 2250 ಕಾನ್ಸ್ ಟೇಬಲ್, SI ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ