LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ ರಿಲಾಯನ್ಸ್ ಪವರ್ 3 ವರ್ಷ ನಿಷೇಧ..!

ನವದೆಹಲಿ : ಪವರ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಗೌತಮ್ ಅದಾನಿ ಪವರ್ ಎನರ್ಜಿಗೆ ಸೋಲಾರ್ ಪವರ್ ಎನರ್ಜಿ ಮೂಲಕ ಸೆಡ್ಡು ಹೊಡೆಯಲು ಉದ್ಯಮಿ ಅನಿಲ್ ಅಂಬಾನಿ ಮುಂದಾಗಿದ್ದರು. ಸಾಲ ಸುಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಅನಿಲ್ ಅಂಬಾನಿಗೆ ಇದೀಗ ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ(SECI) ಶಾಕ್ ನೀಡಿದೆ. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ ಸೋಲಾರ್ ಎನರ್ಜಿಯನ್ನು 3 ವರ್ಷಗಳ ಕಾಲ ಬ್ಯಾನ್ ಮಾಡಿದೆ.

ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಅನಿಲ್ ಅಂಬಾನಿ ಕಂಪನಿಗಳು ಮುಳುಗುತ್ತಿದ್ದಂತೆ ಮತ್ತೆ ಪುಟಿದೇಳಲು ಹಲವು ಪ್ರಯತ್ನ ನಡೆಸಿದ್ದರು. ಇದರ ನಡುವೆ ನಡೆಸಿದ ಒಂದು ಪ್ರಯತ್ನ ರಿಲಯನ್ಸ್ ಪವರ್. ಸೋಲಾರ್ ಎನರ್ಜಿ ಕ್ಷೇತ್ರದಲ್ಲಿ ಹೂಡಿಕೆ ಮೂಲಕ ವಿಶ್ವದಲ್ಲೇ ಬಹು ಬೇಡಿಕೆ ಕಂಪನಿಯಾಗಿ ಮಾರ್ಪಡಿಸಲು ಅನಿಲ್ ಅಂಬಾನಿ ಎಲ್ಲಾ ಪ್ರಯತ್ನ ಮಾಡಿದ್ದರು. ಈ ವೇಳೆ SECI ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ರಿಲಯನ್ಸ್ ಪವರ್ ಪಾಲ್ಗೊಂಡಿತ್ತು. ಈ ವೇಳೆ ನೀಡಿದ ಬ್ಯಾಂಕ್ ಗ್ಯಾರೆಂಟಿ ನಕಲಿ ಎಂದು ಸಾಬೀತಾಗಿದೆ. ಅನಿಲ್ ಅಂಬಾನಿ ಸಾಲದಿಂದ ಹಲವು ಬ್ಯಾಂಕ್ ಖಾತೆಗಳು, ವಹಿವಾಟುಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಕೆಲ ಖಾತೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಈ ವೇಳೆ ರಿಲಯನ್ಸ್ ಪವರ್ ನಕಲಿ ಬ್ಯಾಂಕ್ ಗ್ಯಾರೆಂಟಿಯನ್ನು SECIಗೆ ಸಲ್ಲಿಕೆ ಮಾಡಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಸೋಲಾರ್ ಎನರ್ಜಿಯ ಟೆಂಡರ್ ರಿಲಯನ್ಸ್ ಪವರ್ ಬಾಚಿಕೊಳ್ಳುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಅಂತಿಮ ಹಂತದ ಟೆಂಡರ್ ಪ್ರಕ್ರಿಯೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಈ ವೇಳೆ ರಿಲಯನ್ಸ್ ಪವರ್ ನೀಡಿದ ಬ್ಯಾಂಕ್ ಗ್ಯಾರೆಂಟಿ ನಕಲಿ ಅನ್ನೋದು ಪತ್ತೆಯಾಗಿದೆ. ರಿಲಯನ್ಸ್ ಪವರ್ ನಕಲಿ ಬ್ಯಾಂಕ್ ಗ್ಯಾರೆಂಟಿ ನೀಡಿದ ಕಾರಣ, ಸೋಲಾರ್ ಎನರ್ಜಿ ಟೆಂಡರ್ ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಇಷ್ಟೇ ಅಲ್ಲ ಮುಂದಿನ ಮೂರು ವರ್ಷ ಸರ್ಕಾರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ರಿಲಯನ್ಸ್ ಪವರ್‌ಗೆ ನಿರ್ಬಂಧ ವಿಧಿಸಿದೆ. ಅನಿಲ್ ಅಂಬಾನಿ ಎಡವಟ್ಟು ಇದೊಂದೆ ಅಲ್ಲ, ಇತ್ತೀಚೆಗೆ ಸೆಬಿ ಕೂಡ ಅನಿಲ್ ಅಂಬಾನಿ ಮೇಲೆ ನಿಷೇಧ ಹೇರಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಿಂದ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಅನಿಲ್ ಅಂಬಾನಿ ಷೇರು ಮಾರ್ಕೆಟ್ ನಿಯಂತ್ರ ಸೆಬಿ 5 ವರ್ಷಗಳ ಕಾಲ ಟ್ರೇಡಿಂಗ್ ಮಾಡದಂತೆ ನಿರ್ಬಂಧಿಸಿತ್ತು. ಪ್ರಮುಖ ಉದ್ಯೋಗಿಗಳ ನೆರವಿನಿಂದ ಅನಿಲ್ ಅಂಬಾನಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ ಕಂಪನಿ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪ ಕೇಳಿಬಂದಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
9ನೇ ತರಗತಿ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!ಇಂದಿನಿಂದ ವಿಧಾನ ಮಂಡಲ ಕಲಾಪ ಹಲವು ವಿಷಯಗಳ ಬಗ್ಗೆ ಚರ್ಚೆ.!ವಾಹನ ಸಾವರಾರು ಗಮನಿಸ ಬೇಕಾದ ಸುದ್ದಿ.! ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಬಗ್ಗೆ ಹೆಚ್ಚಿನ ಮಾಹಿತಿ.!ವಚನ: --ಚೆನ್ನಬಸವಣ್ಣ .!ಬಸವ ನಾಡಿನಲ್ಲಿ ಬುದ್ದ ಸ್ಮರಣೆ: ಟಿಬೆಟ್ ಯನ್ನರ ಪಾದಾಯಾತ್ರೆ.!ವಂದೇ ಭಾರತ್ ಎಕ್ಸ್‍ಪ್ರೆಸ್‍ನಿಂದ ಶಿಕ್ಷಣ, ಅರೋಗ್ಯ, ವ್ಯಾಪಾರ ವಹಿವಾಟಿಗೆ ಅನುಕೂಲ; ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ: ಸಚಿವ ಎಂ ಬಿ ಪಾಟೀಲ್.!ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ : ಸಂತೋಷ್ ಲಾಡ್.!ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ.!