LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ನಗರ ನಕ್ಸಲರ ಮುಖವಾಡ ಕಳಚಬೇಕು'- ಪ್ರಧಾನಿ ನರೇಂದ್ರ ಮೋದಿ

ಏಕತಾನಗರ : ಕಾಡುಗಳಲ್ಲಿ ನಕ್ಸಲಿಸಂ ಕೊನೆಯಾಗುತ್ತಿದೆ, ಆದರೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ. ಒಗ್ಗಟ್ಟಾಗಿರುವುದರಿಂದ ನಾವೆಲ್ಲಾ ಸುರಕ್ಷಿತವಾಗಿರುತ್ತೇವೆ ಎಂದು ಹೇಳುವವರನ್ನು ನಗರ ನಕ್ಸಲರು ಗುರಿಯಾಗಿಸುತ್ತಾರೆ. ಅವರ ಮುಖವಾಡವನ್ನು ಕಳಚಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ದೇಶವನ್ನು ಅಸ್ಥಿತಗೊಳಿಸುವ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ದೇಶದ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಲು ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತಕ್ಕೆ ವಿರುದ್ಧವಾಗಿ ಅವರು, ದೇಶವನ್ನು ಜಾತಿ ಆಧಾರದಲ್ಲಿ ಒಡೆಯುತ್ತಿದ್ದಾರೆ. ದೇಶವನ್ನು ಒಡೆಯಲು ಯತ್ನಿಸುತ್ತಿರುವ ನಗರ ನಕ್ಸಲರ ಈ ಸಂಬಂಧವನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.

ಭಾರತದ ಏಕೀಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜನರಿದ್ದರೂ, ಸರ್ದಾರ್ ಪಟೇಲ್ ಅದನ್ನು ಸಾಧ್ಯವಾಗಿಸಿದ್ದರು. ಮುಂದಿನ ಎರಡು ವರ್ಷಗಳ ಕಾಲ ದೇಶವು ಪಟೇಲ್ ಅವರ 150 ನೇ ಜಯಂತಿಯನ್ನು ಆಚರಿಸಲಿದೆ ಎಮದು ತಿಳಿಸಿದರು.

ನಮ್ಮ ದೇಶವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಜಾತ್ಯತೀತ ನಾಗರಿಕ ಸಂಹಿತೆ' ಅನುಷ್ಠಾನದತ್ತ ದೇಶ ಸಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ 'ಒಂದು ರಾಷ್ಟ್ರ, ಒಂದು ಚುನಾವಣೆ' ಉಪಕ್ರಮವನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ: -ಮೋಳಿಗೆ ಮಾರಯ್ಯ .!ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕಾ.? ಹಾಗಾದ್ರೆ ವಿದೇಶ ವ್ಯಾಸಂಗದ ವಿಶೇಷ ಮೇಳದಲ್ಲಿ ಭಾಗವಹಿಸಿ.!ರುದ್ರ ಭೂಮಿ ಸಂರಕ್ಷಣೆ: ಜನ ಪ್ರತಿನಿಧಿಯ ಮೊದಲ ಕೆಲಸ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ.!ಒಳಮೀಸಲಾತಿ:  ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ನಮ್ಮ ಬೆಂಬಲವಿಲ್ಲ.!ನಾಗಮೋಹನದಾಸರವರ ಜನಗಣತಿ ಲೋಪ ಸರಿಪಡಿಸಿ: ಶ್ರೀ ಇಮ್ಮಡಿಸಿದ್ಧರಾಮೇಶ್ವರ ಸ್ವಾಮೀಜಿ.!ನಟ ದರ್ಶನ್- ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳಿಗೆ ಜೈಲು.!ಶಾಲಾ ಶಿಕ್ಷಕರಿಗೆ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಪದೋನ್ನತಿ.!ಇಂದಿನಿಂದ ಭಾರೀ ಮಳೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್.!ಜರ್ಮನಿಯಲ್ಲಿ ಕೈತುಂಬ ಸಂಬಳ ನೀಡುವ ಎಂಎನ್‌ಸಿ ಕಂಪನಿ ಬಿಟ್ಟು . ಐಪಿಎಸ್‌ ಅಧಿಕಾರಿ ಆದ ಕತೆ.!ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್​ಐಆರ್ .!