LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಟಿ ಜಾಕ್‌ಲೀನ್ ಫೆರ್ನಾಂಡಿಸ್ ಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ಸುಕೇಶ್ !

ಮುಂಬೈ: ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್‌ಲೀನ್ ಫೆರ್ನಾಂಡಿಸ್ ಇತ್ತೀಚಿನ ವರ್ಷಗಳಲ್ಲಿ ಅವರು ನಟನೆ, ಸಿನಿಮಾಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ. ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ, ಹಣಸಹಾಯ ಪಡೆದಿದ್ದಾರೆ ಎಂಬ ಆರೋಪ ಜಾಕಿ ಮೇಲಿದೆ.

200 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಸದ್ಯ ತಿಹಾರ್ ಜೈಲಿನಲ್ಲಿದ್ದು, ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಸುಕೇಶ್‌ನಿಂದ ಹಣ ಪಡೆದಿರುವ ಕಾರಣ ಜಾಕ್‌ಲೀನ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಆ ತಲೆಬಿಸಿಯ ನಡುವೆ ಸುಕೇಶ್ ಜೈಲಿನಿಂದಲೇ ಜಾಕ್‌ಲೀನ್‌ಗೆ ಪ್ರೇಮಪತ್ರಗಳನ್ನು ಬರೆಯುತ್ತಿದ್ದು, ಅದು ಮತ್ತಷ್ಟು ತಲೆನೋವು ತಂದೊಡ್ಡಿದೆ. ಹೀಗಾಗಿಯೇ ಜಾಕ್‌ಲೀನ್ ಸುಕೇಶ್ ಅವರಿಂದ ಪತ್ರಗಳನ್ನು ಕಳುಹಿಸಬೇಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರಂತೆ.

ಇದರಿಂದ ಸಿಟ್ಟಿಗೆದ್ದಿರುವ ಸುಕೇಶ್ ಪತ್ರಮುಖೇನ ಜಾಕ್‌ಲೀನ್‌ಗೆ ಬೆದರಿಕೆ ಹಾಕಿದ್ದಾನಂತೆ. ‘ನೀವು ಯಾರನ್ನು ರಕ್ಷಣೆ ಮಾಡುತ್ತಿದ್ದೀರೋ, ಅವರೇ ನಿಮ್ಮ ಬೆನ್ನ ಹಿಂದೆ ಚಾಕು ಹಾಕುತ್ತಾರೆಂದರೆ ಹೇಗೆ? ನಾನು ಹೀಗಾಗುತ್ತೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ. ಅವರೇ ಬಲಿಪಶುವಿನಂತೆ ಬಿಂಬಿಸಿಕೊಂಡು ನನ್ನನ್ನು ಕೆಟ್ಟವನನ್ನಾಗಿ ಮಾಡುತ್ತಿದ್ದಾರೆ.

ಇದರಿಂದ ನನಗೆ ಅತೀವ ನೋವಾಗಿದೆ. ಹಾಗಂತ ನಾನು ಸುಮ್ಮನೆ ಕೂರುವುದಿಲ್ಲ. ನಾನು ಅವರಿಗಾಗಿ ಹಣಸಂದಾಯ ಮಾಡಿರುವ ಮಾಹಿತಿಯನ್ನು ಬಹಿರಂಗಗೊಳಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾನೆ. ಸದ್ಯ ಜಾಕ್‌ಲೀನ್ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೀಳ್ಯದೆಲೆಯ ಮೇಲೆ ಹೆಸರು ಬರೆದು ಈ ಶಕ್ತಿಶಾಲಿಯಾದ ವಶೀಕರಣ ತಂತ್ರ ಮಾಡಿಮೋಳಿಗೆ ಮಹಾದೇವಿ ಅವರ ವಚನ .!ನಾಳೆ ಮೇ 1ರಂದು ಈ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ.!ಭಾರತ ಜಾಗತಿಕವಾಗಿ ಸೂಪರ್ ಪವರ್ ಆಗುತ್ತಿದ್ದರೆ ನಾವು ಭಿಕ್ಷೆ ಬೇಡುತ್ತಿದ್ದೆವೆ – ಪಾಕಿಸ್ತಾನದ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ದೆಹಲಿ ಕಾಂಗ್ರೆಸ್ ಗೆ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ದೇವೇಂದ್ರ ಯಾದವ್ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ - ಕನ್ನಡಿಗ ಕೆಎಲ್ ರಾಹುಲ್‌ಗೆ ಸಿಗದ ಅವಕಾಶಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ, ಭೂಕುಸಿತ: 5 ಸಾವು, ಹಲವರಿಗೆ ಗಾಯ2030ರ ವೇಳೆಗೆ ಭಾರತದ ಸೇವೆಗಳ ರಫ್ತು 800 ಬಿಲಿಯನ್ ಡಾಲರ್ ಗೆ ಏರಿಕೆ : ಗೋಲ್ಡ್ಮನ್ ಸ್ಯಾಚ್ಸ್ ವರದಿ'ನೇಹಾ ಹತ್ಯೆ ಪ್ರಕರಣ ಮುಚ್ಚಿಹಾಕುವ ಯತ್ನ'- ಆರ್.ಅಶೋಕ್ಬೇಸಿಗೆಯಲ್ಲಿ ಗ್ಯಾಸ್ಟ್ರಿಕ್‌ನಿಂದಾಗುವ ಸಮಸ್ಯೆಯನ್ನು ನಿವಾರಿಸುವ ಆಹಾರಗಳಿವು