LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಟ ಕಮಲ್ ಹಾಸನ್ ಅವರ ಮಾಜಿ ಪ್ರೇಯಸಿ ಗೌತಮಿಗೆ ವಂಚನೆ – 25 ಕೋಟಿ ವಂಚನೆ ವಿರುದ್ಧ ಪೋಲಿಸರಿಗೆ‌ ದೂರು

ಖ್ಯಾತ ತಮಿಳು ಚಿತ್ರ ನಟ ಕಮಲ್ ಹಾಸನ್ ಅವರ ಮಾಜಿ ಪ್ರೇಯಸಿ, ನಟಿ ಗೌತಮಿ ತಮಗೆ 25 ಕೋಟಿ ರೂ. ವಂಚನೆಯಾಗಿದೆ ಎಂದು ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ.

ಅಳಗಪ್ಪನ್ ಕಂಪೆನಿಯ ಮುಖ್ಯಸ್ಥರು ತಮಗೆ ಮೋಸ ಮಾಡಿದ್ದೂ, ನ್ಯಾಯ ಕೊಡಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪೆನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಇದನ್ನು ಕಂಪೆನಿ ಮುಖ್ಯಸ್ಥರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗೌತಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ, ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿ ಕಂಪೆನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕೇವಲ ಹಣದಲ್ಲಿ ವಂಚನೆ ಮಾಡಿರುವುದು ಮಾತ್ರವಲ್ಲ ತಮ್ಮ ಸಹಿಯನ್ನೂ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯನ್ನು ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊರೊನಾ ಉಪತಳಿ ಪತ್ತೆ: ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ - ದಿನೇಶ್ ಗುಂಡುರಾವ್ಕಾಶ್ಮೀರದ ಸ್ಥಿತಿಯು ಗಾಜಾ, ಪ್ಯಾಲೆಸ್ತೀನ್ ಸ್ಥಿತಿಯಂತಾಗುತ್ತದೆ- ಫಾರೂಕ್ ಅಬ್ದುಲ್ಲಾ ಎಚ್ಚರಿಕೆದೇವಾಲಯಗಳ ಬಳಿ ಬಹುಮಹಡಿ ಕಟ್ಟಡ ನಿರ್ಮಿಸದಂತೆ ಸೂಚನೆ- ಯೋಗಿ'ಯುವನಿಧಿ ಯೋಜನೆʼ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂಟ್ರಾಫಿಕ್ ಜಾಮ್‌ ನಿಂದ ತಲೆಕೆಡಿಸಿಕೊಂಡು ನದಿಯಲ್ಲಿ ಥಾರ್ ಓಡಿಸಿದ ಚಾಲಕನಿಗೆ ದಂಡಲಡಾಖ್ ನಲ್ಲಿ 4.5 ತೀವ್ರತೆಯ ಭೂಕಂಪ'ವಿಶ್ವವಿಖ್ಯಾತ ಹಂಪಿ ಉತ್ಸವ-ಫೆ.2 ರಿಂದ ಮೂರು ದಿನಗಳ ಕಾಲ ನಡೆಯಲಿದೆ' - ಜಮೀರ್‌ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬಸ್ ಗಳು ನಗರ ಸಾರಿಗೆಗೆ ಸೇರ್ಪಡೆಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ..!ದೆಹಲಿಯಲ್ಲಿ ದಟ್ಟ ಮಂಜು- ವಿಮಾನಗಳು ವಿಳಂಬ, ಮಾರ್ಗ ಬದಲಾವಣೆ