ನಟ ಶ್ರೀಮುರುಳಿ ಕಾಲಿಗೆ ಪೆಟ್ಟು ಮಣಿಪಾಲ್ ಆಸ್ಪತ್ರೆಗೆ ದಾಖಲು.!
ಬೆಂಗಳೂರು: ಚಿತ್ರೀಕರಣ ವೇಳೆ ನಟ ಶ್ರೀಮುರುಳಿ ಕಾಲಿಗೆ ಪೆಟ್ಟಾಗಿದೆ. ಮೈಸೂರಿನಲ್ಲಿ ಡಾ. ಸೂರಿ ನಿರ್ದೇಶನದ ‘ಭಘೀರ’ ಚಿತ್ರೀಕರಣ ನಡೆಯುತ್ತಿತ್ತು. ಶನಿವಾರ ಸಾಹಸ ದೃಶ್ಯದ ಚಿತ್ರೀಕರಣ ಮಾಡುವಾಗ ಶ್ರೀಮುರುಳಿ ಅವರ ಎಡಗಾಲಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಒಂದು ವಾರ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಈ ಹಿಂದೆ 2019ರಲ್ಲಿ ಮದಗಜ ಚಿತ್ರದ ಶೂಟಿಂಗ್ ವೇಳೆ ಅವರ ಎಡ ಮೊಣಕಾಲಿಗೆ ಪೆಟ್ಟಾಗಿತ್ತು. 2023ರ ಜನವರಿಯಲ್ಲಿ ‘ಭಘೀರ’ ಚಿತ್ರೀಕರಣ ವೇಳೆ ಪೆಟ್ಟು ಮಾಡಿಕೊಂಡಿದ್ದರು. ಈಗ ಮೂರನೇ ಬಾರಿಗೆ ಅವರ ಕಾಲಿಗೆ ಪೆಟ್ಟಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.