Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!

ಕೋಲಾರ: "ಆರ್.ಎಲ್. ಜಾಲಪ್ಪ ಡೀಮ್ಡ್ ವಿಶ್ವವಿದ್ಯಾಲಯದವರು ನನಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಆದರೆ ಇದು ನನಗೆ ಮೊದಲೇ ತಿಳಿದಿರಲಿಲ್ಲ. ನಾನು ಬೇಡ ಎಂದಿದ್ದರೂ ನೀಡಿದ್ದಾರೆ. ದಯವಿಟ್ಟು ನನ್ನನ್ನು ಡಾಕ್ಟರ್ ಸಿದ್ದರಾಮಯ್ಯ ಎಂದು ಕರೆಯಬೇಡಿ, ಸಿದ್ದರಾಮಯ್ಯ ಎಂದೇ ಕರೆಯಿರಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೋಲಾರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಭೆಗೆ ಬಾರದಿದ್ದಕ್ಕೆ ಟ್ರಸ್ಟಿ ಸ್ಥಾನದಿಂದಲೇ ತೆಗೆದಿದ್ದರು!

ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಹಾಸ್ಯ ಚಟಾಕಿ ಹಾರಿಸಿದ ಅವರು, "ದೇವರಾಜ್ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ನಾನೂ ಕೂಡ ಆರಂಭದಲ್ಲಿ ಸಂಸ್ಥಾಪಕ ಟ್ರಸ್ಟಿ ಆಗಿದ್ದೆ. ಆದರೆ ನಾನು ಒಮ್ಮೆಯೂ ಟ್ರಸ್ಟ್ ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಜಾಲಪ್ಪನವರು, 'ಮೀಟಿಂಗ್‌ಗೆ ಬರದಿದ್ದರೆ ನಿನ್ನನ್ನು ಟ್ರಸ್ಟಿ ಸ್ಥಾನದಿಂದ ತೆಗೆದುಹಾಕುತ್ತೇನೆ' ಎಂದು ಫೋನ್‌ನಲ್ಲೇ ಎಚ್ಚರಿಕೆ ನೀಡಿ, ಕೊನೆಗೆ ತೆಗೆದೇಬಿಟ್ಟರು. ಸದ್ಯ ನಾನು ಟ್ರಸ್ಟಿ ಅಲ್ಲ, ಈಗ ಜಿ.ಎಚ್. ನಾಗರಾಜ್ ಅವರು ನನ್ನ ಮಗನನ್ನು ಟ್ರಸ್ಟಿ ಮಾಡಿಕೊಂಡಿದ್ದಾರೆ, ಆದರೆ ಆತನೂ ಸಭೆಗೆ ಹೋಗುತ್ತಿಲ್ಲ" ಎಂದು ವೇದಿಕೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.

ನಾನು ಡಾಕ್ಟರ್ ಅಲ್ಲ, ಲಾಯರ್ ಅಷ್ಟೇ!

ತಮಗೆ ಗೌರವ ಡಾಕ್ಟರೇಟ್ ಸಂದಿರುವ ಕುರಿತು ಮುಂದುವರಿದು ಮಾತನಾಡಿದ ಅವರು, "ನಾನು ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡಿಸಿದ್ದೇನೆ. ಜೊತೆಗೆ 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಡಿ. ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನೂ ಮುರಿದಿದ್ದೇನೆ. ಬಹುಶಃ ಇದೇ ಕಾರಣಕ್ಕೆ ನನಗೆ ಈ ಗೌರವ ಡಾಕ್ಟರೇಟ್ ಕೊಟ್ಟಿರಬಹುದು ಅನಿಸುತ್ತದೆ. ಆದರೆ ನಾನು ವೈದ್ಯನಲ್ಲ (ಡಾಕ್ಟರ್ ಅಲ್ಲ), ವೃತ್ತಿಯಲ್ಲಿ ವಕೀಲ (ಲಾಯರ್). ಜಿ.ಎಚ್. ನಾಗರಾಜ್ ಅವರ ಒತ್ತಾಯಕ್ಕೆ ಮಣಿದು ಈ ಡಾಕ್ಟರೇಟ್ ಬಂದಿದೆ ಅಷ್ಟೇ. ಹಾಗಾಗಿ ಇನ್ಮುಂದೆ ಯಾರೂ ನನ್ನನ್ನು 'ಡಾಕ್ಟರ್ ಸಿದ್ದರಾಮಯ್ಯ' ಎಂದು ಕರೆಯುವುದು ಬೇಡ, ಎಂದಿನಂತೆ 'ಸಿದ್ದರಾಮಯ್ಯ' ಎಂದೇ ಕರೆಯಿರಿ" ಎಂದು ನಗುತ್ತಲೇ ಸ್ಪಷ್ಟಪಡಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೋರ್ ಇದೆ, ಕರೆಂಟ್ ಇದೆ, ಆದ್ರೂ ನೀರಿಲ್ಲ: ಸಾಗರದ 'ಕಲ್ಮನೆ ಗ್ರಾಮ ಪಂಚಾಯ್ತಿ' ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾರದ ನೀರು!BIG NEWS: ಸ್ಟಿಂಗ್ ಆಪರೇಷನ್‌ನ ಅಸಲಿ ಪಿತಾಮಹ ಮಧು ಬಂಗಾರಪ್ಪ, ಮೊದಲು ಬಲಿ ಆಗಿದ್ದೇ ನಾನು: ಮಾಜಿ ಸಚಿವ ಹಾಲಪ್ಪನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!BREAKING: ಕೆಂಪು ಕೋಟೆಯ ಮ್ಯಾಲತಲೇ ಕೆರೆ, ಮುತ್ತು ಚಲ್ಲಿತಲೇ ಪರಾಕ್: ವರ್ಷದ ಭವಿಷ್ಯವಾಣಿ ದೇವರಗುಡ್ಡದ ಗೊರವಯ್ಯ ಕಾರ್ಣಿಕ ನುಡಿನಿಗಮ-ಮಂಡಳಿ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಗುಡ್ ನ್ಯೂಸ್ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ? ಅದರಿಂದಾಗುವ ಸಮಸ್ಯೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆಖಾಸಗಿ ವಾಹಿನಿ ಮುಖ್ಯಸ್ಥನ ಆರೋಪ ಸತ್ಯಕ್ಕೆ ದೂರ, ದುರುದ್ದೇಶಪೂರಿತ ಸೃಷ್ಟಿ: ಅನಿತಾ ಕುಮಾರಸ್ವಾಮಿTB ಡ್ಯಾಂನಿಂದ ನ.20ರವರೆಗೆ ಕಾಲುವೆಗೆ ನೀರು‌ ಹರಿಸಲು ನಿರ್ಧಾರ: ಸಚಿವ ಶಿವರಾಜ್ ತಂಗಡಗಿCRIME: ಪ್ರಿಯಕರನ ಜೊತೆ ಸೇರಿ ಪತ್ನಿ ಹತ್ಯೆಗೈದಿದ್ದ ಪತ್ನಿ ಸೇರಿ ನಾಲ್ವರು ಅರೆಸ್ಟ್ಅ.23ಕ್ಕೆ ವಿಧಾನ ಪರಿಷತ್ ಚುನಾವಣೆ: ಶಿಕ್ಷಕ ಹಾಗೂ ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು