LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

 ನನ್ನ ಮೇಲೆ ಸುಳ್ಳು ಕಮಿಷನ್ ಆರೋಪ ಗಾಣಿಗ ಸಮುದಾಯ ಸ್ವಾಮಿಯ ಮೇಲೆ ಕ್ರಿಮಿನಲ್ ಮೊಕದ್ದಮೆ.!

 

ಚಿತ್ರದುರ್ಗ: ನನ್ನ ಮೇಲೆ ಸುಳ್ಳು ಕಮಿಷನ್ ಆರೋಪವನ್ನು ಹೊರಸಿರುವ ಗಾಣಿಗ ಸಮುದಾಯ ಸ್ವಾಮಿಯ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಶಿವರಾಜ್ ತಗಂಡಗಿ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಣಿಗ ಪೀಠಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಬೊಮ್ಮಾಯಿಯವರು ತಮ್ಮ ಅಧಿಕಾರದಲ್ಲಿ 3.5 ಕೋಟಿ ಅನುದಾನ ಮಂಜೂರಾಗಿತ್ತು ಅದರಲ್ಲಿ ಅವರ ಸರ್ಕಾರದ ಅವಧಿಯಲ್ಲಿಯೇ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು ಉಳಿದ 1.50 ಕೋಟಿ ರೂ.ಗಳನ್ನು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೇ ಬಿಡುಗಡೆ ಮಾಡಬೇಡಿ ಎಂದು ಅರ್ಥಿಕ ಇಲಾಖೆಗೆ ಸೂಚಿಸಿದ್ದರು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸ್ವಾಮಿಗಳು ಹಿಂದಿನ  ಆದೇಶವನ್ನು ಮರೆ ಮಾಚಿ ನಮಗೆ ಇನ್ನೂ 1.50 ಕೋಟಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದರು. ನಾನು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಅವರು ಈ ವಿಷಯವನ್ನು ತಿಳಿಸಿದರು.

ಈ ಬಗ್ಗೆ ಸ್ವಾಮಿಗಳು ನ್ಯಾಯಾಲಯಕ್ಕೆ ಹಿಂದಿನ ಸರ್ಕಾರ ನೀಡಿದ ಆದೇಶವನ್ನು ಮರೆ ಮಾಚಿ ನಮಗೆ 3.5 ಕೋಟಿಯಲ್ಲಿ 2 ಕೋಟಿಯನ್ನು ಮಾತ್ರ ನೀಡಲಾಗಿದೆ ಇದರಲ್ಲಿ ನಮಗೆ ಇನ್ನೂ 1.50 ಕೋಟಿ ಬರಬೇಕೆಂದು ತಿಳಿಸಿದ್ದಾರೆ. ಇದರ ಬಗ್ಗೆ ನಮ್ಮ ಸರ್ಕಾರ ಹಿಂದಿನ ಸರ್ಕಾರ ಮಾಡಿದ ಆದೇಶವನ್ನು ನ್ಯಾಯಾಲಯಕ್ಕೆ ನೀಡಲಾಗುವುದು, ಇದ್ದಲ್ಲದೆ ಗಾಣಿಗ ಸಮುದಾಯದ ಶ್ರೀಗಳು ಮಠಕ್ಕೆ ಅನುದಾನ ಪಡೆಯಲು ನಾನು ಕಮಿಷನ್ ಕೇಳಿದ್ದೇನೆ ಎಂದು ಆರೋಪ ಮಾಡಿದ್ದಾರೆ ಅವರು ಇದಕ್ಕೆ ಸಾಕ್ಷಿಯನ್ನು ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಅಲ್ಲ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ, ಇಲ್ಲವಾದಲ್ಲಿ ಅವರು ಗಾಣಿಗ ಪೀಠದ ಸ್ವಾಮಿ ಸ್ಥಾನದಿಂದಲೇ ಹೊರಗಬೇಕು ಎಂದು ಸಚಿವರಾದ ಶಿವರಾಜ್ ತಗಂಡಗಿ ಸ್ವಾಮಿಗಳಿಗೆ ಸವಾಲ್ ಹಾಕಿದ್ದಾರೆ.

ಈಗ ಗಾಣಿಗ ಸಮುದಾಯದಲ್ಲಿ ಸ್ವಾಮಿಗಳಾದವರು ಹಿಂದಿನ ಪೂರ್ವಾಶ್ರಮದಲ್ಲಿ ರಾಜಕಾರಣೀಯಾದವರು ಅವರು ಸಹಾ ತಮ್ಮ ಅಧಿಕಾರದ ಅವಧಿಯಲ್ಲಿ ಇದೇ ರೀತಿ ಅನುದಾನ ಪಡೆಯಲು ಕಮಿಷನ್ ಪಡೆದಿರಬಹುದೆ ಅದರಿಂದಲೇ ಅವರು ನನ್ನ ಮೇಲೆ ಈ ರೀತಿಯಾದ ಸುಳ್ಳಿನ ಆರೋಪವನ್ನು ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ನಾನು ನೀಡುತ್ತೇನೆ ಇದರ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮ್ಮೆಯನ್ನು ಹಾಕುವುದರ ಮೂಲಕ ಅವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ಅತಿ ಶೀಘ್ರದಲ್ಲಿಯೇ ದಾಖಲಿಸಲಾಗುವುದು ಎಂದ ಸಚಿವರು, ಸ್ವಾಮಿಗಳಾದವರು ಖಾವಿಯನ್ನು ಬಿಚ್ಚಿ ಬಂದರೆ ಅವರು ಅವರ ವೃತ್ತಾಂತವನ್ನು ಹೇಳುತ್ತೇನೆ ನನಗೆ ಖಾವಿಯ ಬಗ್ಗೆ ಆಪಾರವಾದ ಗೌರವ ಇದೆ, ಅದೇ ರೀತಿ ನಂಬಿಕೆ ಇದೆ. ಸ್ವಾಮಿಗಳಾದವರು ತಮ್ಮ ಸಮುದಾಯದ ಅಭೀವೃದ್ದಿಗೆ ಸರ್ಕಾರದಿಂದ ಬೇಕಾದ ಸಹಾಯವನ್ನು ಪಡೆಯಬೇಕಿದೆ ಅದು ಬಿಟ್ಟು ಈ ರೀತಿಯಾದ ಆರೋಪ ಮಾಡುವುದು ಸರಿಯಲ್ಲ ಎಂದು  ಶಿವರಾಜ್ ತಗಂಡಗಿ ಸ್ವಾಮಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಆಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್, ಖುದ್ದುಸ್ ಪ್ರಕಾಶ್ ರಾಮನಾಯ್ಕ್, ಮಧುಗೌಡ, ಕಣ್ಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026