LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

' ನನ್ನ ರುಂಡವೂ ಕಾಂಗ್ರೇಸ್‌ ಪಕ್ಷಕ್ಕೆ ಹೋಗುವುದಿಲ್ಲ'- ರಮೇಶ್‌ ಜಾರಕಿಹೊಳಿ

ಬೆಳಗಾವಿ : ನನ್ನ ರುಂಡವೂ ಸಹ ಕಾಂಗ್ರೇಸ್‌ಗೆ ಹೋಗುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಆಪರೇಷನ್ ಹಸ್ತ ಎಂಬುದು ಮೂರ್ಖತನದ ಮಾತು. ಆಪರೇಷನ್ ಗೆ ಒಳಗಾಗುವರು ಸಹ ಮೂರ್ಖರು ಎಂದ ಅವರು ನಾವು ಆಪರೇಷನ್ ಮಾಡಿದಾಗ ಅದಕ್ಕೊಂದು ಅರ್ಥ ಇತ್ತು. ಆಗ ಅಂತಹ ಪರಿಸ್ಥಿತಿ ಹಾಗಿತ್ತು. ಈಗ ಹಾಗಿಲ್ಲ’ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸೇರುವ ಕುರಿತು ಕೇಳಿದ ಎಂಬ ಪ್ರಶ್ನೆಗೆ ‘ನನ್ನ ರುಂಡವೂ ಸಹ ಅಲ್ಲಿಗೆ ಹೋಗುವುದಿಲ್ಲ ಎಂದರು.

25 ರಿಂದ 30 ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರೊಬ್ಬರ ವಿರುದ್ದ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಪತ್ರ ಬರೆದು ಹೋಟೆಲ್ ವೊಂದರಲ್ಲಿ ಸಭೆ ಮಾಡುವವರಿದ್ದರು. ಇದು ಗೊತ್ತಾಗಿ ವಿಷಯ ಮರೆಮಾಚಲು ಮಹಾ ನಾಯಕ ಆಪರೇಷನ್ ಹಸ್ತದ ನಾಟಕ ಆಡಿದ್ದಾರೆ’ ಎಂದು ಡಿ ಕೆ ಶಿವಕುಮಾರ ವಿರುದ್ಧ  ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಜತೆಗೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೆ ಈಗ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿಲ್ಲ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST