LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ಓಡಿಸ್ತೀರಾ.? - ಲಾಯರ್ ಜಗದೀಶ್ ಆವಾಜ್

ಕನ್ನಡ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್‌ಬಾಸ್‌' ಆರಂಭವಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಈ ಮಧ್ಯೆ ಸ್ಪರ್ಧಿ ಲಾಯರ್ ಜಗದೀಶ್ ಬಿಗ್‌ಬಾಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಹೌದು. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮನೆ ತೊರೆಯುವ ನಿರ್ಧಾರ ತೆಗೆದುಕೊಂಡಿರುವ ಜಗದೀಶ್, ‘ನನಗೆ ಇಲ್ಲಿ ಇರಲು ಇಷ್ಟವಾಗುತ್ತಿಲ್ಲ. ನಾನು ಇಲ್ಲಿಂದ ಹೊರಗೆ ಹೋಗಬೇಕಷ್ಟೇ. ನಾನು ಮನಸ್ಸು ಮಾಡಿದರೆ ಹೆಲಿಕಾಪ್ಟರ್ ಅನ್ನು ಇಲ್ಲಿಗೆ ತರಿಸುತ್ತೇನೆ. ಆ ಕೆಪ್ಯಾಸಿಟಿ ನನಗೆ ಇದೆ. ಐ ಶೇಕ್‌ ದಿ ಗರ್ನಮೆಂಟ್, ಈ ಡೋರ್‌ನ್ನೇ ಉಡಾಯಿಸುವೆ. ಹೊರಗೆ ಹೋದರೆ ಬಿಗ್‌ಬಾಸ್‌ ಹೆಸರನ್ನೇ ಹಾಕು ಮಾಡುವೆ. ಯಾವನೂ ಇಲ್ಲಿ ಕಾಲು ಇಡಬಾರ್ದು ಹಾಗೆ ಮಾಡ್ತೇನಿ. ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್ ಹೇಗೆ ಓಡಿಸ್ತೀರಾ?. ಓಡಿಸಿ ನೋಡೋಣ' ಎಂದು ಆವಾಜ್ ಹಾಕಿದ್ದಾರೆ. ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳ ಆಹಾರ ಕೊಡುವುದು, ಬಿಸಿ ನೀರು ಕಾಯಿಸಿಕೊಡುವುದು, ನರಕ ನಿವಾಸಿಗಳು ಮಾಡಬೇಕಾದ ಕೆಲಸಗಳನ್ನು ತಾವೇ ಮಾಡುವುದು ಹೀಗೆ ಅನೇಕ ವಿಚಾರಕ್ಕೆ ಜಗದೀಶ ಮನೆಯವರ ಕಂಗಣ್ಣಿಗೆ ಗುರಿಯಾಗಿದ್ದರು. ಹೀಗಿದ್ದರೂ ಲಾಯರ್ ಜಗದೀಶ್ ಅವರ ವರ್ತನೆ ಮಾತ್ರ ಕಮ್ಮಿ ಆಗಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST