Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನ್ಯಾಯದಾನ ನೀಡುವ ಸ್ಥಾನದಿಂದ ಅನ್ಯಾಯವಾಗಬಾರದು: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : "ಜನಸಾಮಾನ್ಯರು ಸರ್ಕಾರಿ ಕಚೇರಿಗಳು ಅಥವಾ ನ್ಯಾಯಾಲಯದ ಕದ ಕಟ್ಟಿದಾಗ ದೇವರನ್ನೇ ಕೇಳುತ್ತಿದ್ದೇವೆ ಎಂಬ ಮನೋಭಾವವಿರುತ್ತದೆ.  ಜನರಿಗೆ ನ್ಯಾಯ ಒದಗಿಸುವುದು ಬಹಳ ಮುಖ್ಯ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಭಾನುವಾರ ನಡೆದ 'ದಕ್ಷಿಣ ವಲಯದ ಕಾನ್ಸುಲೇಷನ್ ಆಫ್ ಸ್ಟಾಕ್ ಸಾಕ್ಷಿಗಳ ಸುಧಾರಣಾ ಸಮಿತಿ 2026'ರ ಸಮಾರೋಪ  ಕಾರ್ಯಕ್ರಮವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.  

ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ಫ್ ಕಮಿಟಿ ಅಗತ್ಯತೆಯ ಬಗ್ಗೆ ಪರಿಶೀಲನೆ: ಮುನ್ನಡೆ ಸಾಧಿಸುವ ಭರವಸೆಯಿದೆ

"ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ಫ್ ಕಮಿಟಿ ನಮಗೆ ಏಕೆ ಅಗತ್ಯವಿದೆ ಎಂದು ಪರಿಶೀಲಿಸಿ ಈ ಕ್ಷೇತ್ರದಲ್ಲಿಯೂ ಕರ್ನಾಟಕ ಮುನ್ನಡೆ ಸಾಧಿಸಲಿದೆ" ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

"ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸಾಕ್ಷಿದಾರನಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಒಬ್ಬನೇ ವ್ಯಕ್ತಿ  ಹಲವಾರು ಪ್ರಕರಣಗಳಲ್ಲಿ ಸಾಕ್ಷಿಯಾಗಿ ಬಂದರೆ ನ್ಯಾಯಯುತ ಪ್ರಶ್ನೆಗಳನ್ನು ಕೇಳುತ್ತಾರೆ. ನಿಜವಾಗಿಯೂ ಒಬ್ಬ ವ್ಯಕ್ತಿ ಸಾಕ್ಷಿದಾರನಾದರೆ ನಮ್ಮ ತನಿಖೆಯ ಪ್ರಕ್ರಿಯೆ ಬೇರೆಯ ಮಾರ್ಗವನ್ನು ಹಿಡಿಯಬಹುದು. ಸಾಕ್ಷಿ ಎಂದರೆ ಪ್ರಕರಣದ ಕಡತಲ್ಲಿನ ಹೆಸರು ಮಾತ್ರವಲ್ಲ, ಅವರು ದಾಖಲೆಯಾಗುತ್ತಾರೆ"ಎಂದರು. 

ಅನುಭವ ಮನುಷ್ಯನನ್ನು ಪರಿಪೂರ್ಣಗೊಳಿಸುತ್ತದೆ

"ವಿಧಾನಸಭೆಗೆ 8 ಅವಧಿಗಳಿಂದ ಸತತವಾಗಿ ಆಯ್ಕೆಯಾಗಿದ್ದೇನೆ. ಸುದೀರ್ಘ ಸಾರ್ವಜನಿಕ ಜೀವನದ ಪಯಣ ನನ್ನದು. 47ನೇ ವಯಸ್ಸಿನಲ್ಲಿ ಪದವೀಧರನಾದೆ. ಜ್ಞಾನ, ಶಿಕ್ಷಣದ ಶಕ್ತಿ ಏನೆಂದು ಅರಿತಿದ್ದೇನೆ" ಎಂದರು. 

"ಮನುಷ್ಯನಿಗೆ ಗಡಿಗಳಿವೆ. ಆದರೆ ಜ್ಞಾನಕ್ಕೆ  ಗಡಿಗಳಿಲ್ಲ. ನ್ಯಾಯಮೂರ್ತಿಗಳ ಜ್ಞಾನದ ಹರಿವು ವಿಸ್ತಾರವಾದ್ದುದು. ಅಧಿಕಾರಿಗಳಿಂದಲೂ ನಾನು ಕಲಿಯುತ್ತೇನೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಅನುಭವದ ಆಧಾರದ ಮೇಲೆ ಕೈಗೊಳ್ಳುತ್ತೇವೆ" ಎಂದರು.
 
ಕರ್ನಾಟಕದ ನ್ಯಾಯ ವ್ಯವಸ್ಥೆಯ ಬಗ್ಗೆ  ದೇಶದೆಲ್ಲೆಡೆ ಮೆಚ್ಚುಗೆ

"ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯವನ್ನು ಎರಡು ವರ್ಷಗಳೊಳಗೆ ನೀಡಿದ ಕರ್ನಾಟಕದ ನ್ಯಾಯಾಲಯದ ತೀರ್ಪಿನ ಬಗ್ಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ" ಎಂದು ಸಿಎಂ ಉಲ್ಲೇಖಿಸಿದರು. 

"ಕರ್ನಾಟಕದ ಕಾರ್ಯಾಂಗ ಮತ್ತು ನ್ಯಾಯಾಂಗದ ಗುಣಮಟ್ಟ ಅತ್ಯುತ್ತಮವಾದದ್ದು. ಅದಕ್ಕಾಗಿಯೇ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವಿದ್ದು,  ದೇಶದೆಲ್ಲೆಡೆಯಿಂದ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ" ಎಂದರು. 

ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷಿದಾರನ ವಿಶ್ವಾಸಾರ್ಹತೆ ಮುಖ್ಯ

"ಆಧುನಿಕ ತಂತ್ರಜ್ಞಾನದ ನೆರವಿನಿಂದ ಹಿಂದೆಂದಿಗಿಂತಲೂ  ಈಗ ತನಿಖೆ ನಡೆಸುವುದು ಸುಲಭವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕ್ಷಿದಾರನ ವಿಶ್ವಾಸಾರ್ಹತೆ ಅತಿ ಮುಖ್ಯವಾಗುತ್ತದೆ. ಡಿಜಿಟಲ್ ಯುಗದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವಾಗ ನಾವು ಜಾಗೃತಿ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳಬೇಕು" ಎಂದರು. 

ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ಫ್ ಸಮಿತಿಗೆ ಅಗತ್ಯ ನೆರವು ಒದಗಿಸಲಾಗುವುದು

"ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು,ಕೇರಳ  ತೆಲಂಗಾಣ ಮತ್ತಿತರೆ ರಾಜ್ಯಗಳಿಂದ ಸಮಿತಿ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಅಗತ್ಯವಿರುವ ಸಂಪೂರ್ಣ ನೆರವನ್ನು ಒದಗಿಸಲಿದೆ" ಎಂದು ಭರವಸೆ ನೀಡಿದರು. 

ಅಭಿಪ್ರಾಯ ಮೂಡಿಸುವ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗದಿರಿ: ಸಿಎಂ ಸಲಹೆ

"ಕರ್ನಾಟಕದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಎದುರು ಬದುರಾಗಿದೆ.  ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳು ಒಬ್ಬರನ್ನೊಬ್ಬರು ಗಮನಿಸುತ್ತಿರುತ್ತೇವೆ. ನಾವು ತಪ್ಪು ಮಾಡಿದರೆ, ಕಾರ್ಯಾಂಗ ಮಾರ್ಗದರ್ಶನ ಮಾಡುತ್ತದೆ. ಮೂರು ಸ್ತಂಭಗಳು ತಪ್ಪು ಮಾಡಿದರೆ ಮಾಧ್ಯಮ ನಮ್ಮ ತಪ್ಪುಗಳನ್ನು ತಿದ್ದುತ್ತದೆ. ಇತ್ತೀಚೆಗೆ ಮಾಧ್ಯಮಗಳು ಕೂಡ  ನ್ಯಾಯಾಂಗದ ರೀತಿಯಲ್ಲಿ ವಿಚಾರಣೆ ಕೈಗೊಂಡು ಎಲ್ಲರಲ್ಲಿಯೂ ಅಭಿಪ್ರಾಯ ಮೂಡಿಸುವ ಕೆಲಸವನ್ನು ಮಾಡುತ್ತಿವೆ. ಇಂತಹ ಪ್ರಭಾವಗಳಿಗೆ ಯಾರು ಒಳಗಾಗಬಾರದು" ಎಂದು ಸಲಹೆ ನೀಡಿದರು. 
 
ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು

"ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ  ಅಧಿಕಾರವು ಸಂವಿಧಾನದ ಕಾರಣದಿಂದ ಪ್ರತ್ಯೇಕವಾಗಿದ್ದರೂ ಸಂವಿಧಾನವನ್ನು ರಕ್ಷಿಸಬೇಕು. ನ್ಯಾಯಾಂಗ ಪ್ರತ್ಯೇಕವಾಗಿದ್ದರೂ ಸಂವಿಧಾನದ ಮೂಲಭೂತ ಔಪಚಾರಿಕತೆ ಮಾತ್ರವಲ್ಲ. ಆದರೆ ಸಂವಿಧಾನದ ರಕ್ಷಣೆಗೆ ಅಗತ್ಯವೂ ಹೌದು. ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಕ್ಕಿಂತ ಮುಖ್ಯವೂ ಆಗಿರಬೇಕು" ಎಂದರು. 

ಜನ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು

"ನಾವು ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸಿದರೂ ಜನರ ಕಲ್ಯಾಣಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯಸ್ಥೆಯನ್ನು ಕಾಪಾಡಬೇಕು ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವ ಗುರುತುರ ಜವಾಬ್ದಾರಿ ನಮ್ಮ ಮೇಲಿದೆ" ಎಂದರು. 

ನ್ಯಾಯವು ಸದಾ ಮೇಲುಗೈ ಸಾಧಿಸಲಿ

"ನ್ಯಾಯಾಂಗದಲ್ಲಿಯೂ ಎಐ ಬಳಕೆಯಾಗುತ್ತಿದೆ. ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಸ್ಟಾಕ್ ವಿಟ್ನೆಸ್  ರಿಫಾರ್ಮ್ಸ ಕಮಿಟಿಯ ಸಭೆಯು ನ್ಯಾಯ ಸದಾ ಮೇಲುಗೈ ಸಾಧಿಸಲು ಹೊಸ ದಾರಿಗಳನ್ನು ರೂಪಿಸಲಿ"  ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯಾಯದಾನ ನೀಡುವ ಸ್ಥಾನದಿಂದ ಅನ್ಯಾಯವಾಗಬಾರದು: ಸಿಎಂ ಡಿ ಕೆ ಶಿವಕುಮಾರ್GOOD NEWS: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆಹುಬ್ಬಳ್ಳಿಯ ನೂತನ ಪೊಲೀಸ್ ಕಮಿಷನರ್‌ಗೆ ಕ್ರಿಮಿನಲ್ ಆರೋಪಿಗಳಿಂದ ಸನ್ಮಾನ: ಪೋಟೋ ವೈರಲ್!BIG NEWS: ರಾಜ್ಯದ ದೇವಾಲಯಗಳ ಆಸ್ತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ: ಹೈಕೋರ್ಟ್ ಆದೇಶಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ₹61 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆBREAKING: ವಚನಾನಂದ ಸ್ವಾಮೀಜಿ ಜಾಮೀನು ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಪೋಕ್ಸೋ ಕೋರ್ಟ್!ವಿಪಕ್ಷಗಳಿಗೆ ನಮ್ಮ ಗುಪ್ತನಿಧಿಯಲ್ಲಿ ಏನಿದೆ ಎಂದು ಗೊತ್ತಿಲ್ಲ: ಸಿಎಂ ಡಿ ಕೆ ಶಿವಕುಮಾರ್ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ: ವಿದ್ಯಾರ್ಥಿಗಳಿಗೆ ಮದ್ದೂರು ಶಾಸಕ ಕೆ.ಎಂ.ಉದಯ್ ಕಿವಿಮಾತುಬೆಂಗಳೂರಲ್ಲಿ ಅಮೆಜಾನ್ ಅಕ್ರಮ ಗೋದಾಮುಗಳ ಮೇಲೆ FDA ದಾಳಿ: ₹4 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧ ಜಪ್ತಿ!ಇದು ಗರ್ಭದಲ್ಲಿರುವ ಭ್ರೂಣವನ್ನು ರಕ್ಷಿಸುವ ಶ್ರೀ ಗರ್ಭರಕ್ಷಾಂಬಿಕಾ ದೇವಿ ಕ್ಷೇತ್ರ: ಇರುವುದಾದರೂ ಎಲ್ಲಿ? ಇಲ್ಲಿದೆ ಓದಿ!