LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನವದೆಹಲಿ: ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ:ಸಹಿಸಲು ಸಾಧ್ಯವೇ ಇಲ್ಲ ಎಂದ ರಾಹುಲ್ ಗಾಂಧಿ

ನವದೆಹಲಿ: ‘ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ 40% ಸರ್ಕಾರ ಎಂದು ಭ್ರಷ್ಟಾಚಾರದ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಆದರೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಂಡತುಂಡವಾಗಿ ಹೇಳಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ರಾಜ್ಯ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ವಿರುದ್ಧ ನಾವು ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ಈಗ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ಹೇಗೆ? ನಾವು ಭ್ರಷ್ಟಾಚಾರದ ಆರೋಪವನ್ನು ಸಹಿಸಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ಆರೋಪವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಂತಾ ಕ್ಲಾಸ್ ಉಡುಪಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ...!ನ್ಯಾಯಕ್ಕಾಗಿ ಠಾಣೆಗೆ ಬಂದ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ - ಪಿಎಸ್ಐ ಅಮಾನತುSSLC, PUC ಹಾಗೂ Diploma ವನ್ನು ಓದಿದವರಿಗೆ ನ್ಯಾಯಾಲಯದಲ್ಲಿ ಹುದ್ದೆಗಳು..! ಇಂದೇ ಅರ್ಜಿಯನ್ನು ಸಲ್ಲಿಸಿಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಪಾಪಿ ಪುತ್ರಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗಿ ಶ್ರೀಮಂತರಾಗುವ ಯೋಗ ಬರುತ್ತದೆ!ಸರ್ಕಾರ ಜಾತಿ ಗಣತಿಯ ಅಂಕಿ-ಅಂಶ ಬಿಡುಗಡೆ ಮಾಡಬಾರದು: ಶಾಮನೂರು ಶಿವಶಂಕರಪ್ಪ.!ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ : ಜಗದೀಶ್ ಶೆಟ್ಟರ್.!ರಾಜ್ಯಾಧ್ಯಂತ ಮುಂದಿನ ಎರಡು ದಿನಗಳಲ್ಲಿ ಭಯಂಕರ ಚಳಿ: ಹವಾಮಾನ ಇಲಾಖೆ.!ಕ್ರಿಸ್​ಮಸ್ ಹಬ್ಬ ಹಿನ್ನೆಲೆ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ.!