LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನವದೆಹಲಿ: ಲೋಕಸಭೆ ಚುನಾವಣೆ ಗೆಲ್ಲಲ್ಲು ರಾಜ್ಯ ನಾಯಕರೊಂದಿಗೆ ಕೈ ಹೈಕಮಾಂಡ್ ಮೀಟಿಂಗ್

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಿದ್ಧತೆ ದೃಷ್ಟಿಯಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ದೆಹಲಿಯಲ್ಲಿ ಮೊದಲ ಹಂತದ ಸಭೆಯನ್ನು ಬುಧವಾರ ನಡೆಸಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, 2024ರ ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಸೂತ್ರವೊಂದನ್ನು ಎಐಸಿಸಿ ಪಕ್ಷದ ನಾಯಕರ ಮುಂದಿಟ್ಟಿದೆ.

5 ಉಚಿತ ಗ್ಯಾರಂಟಿಗಳು ಸರಿಯಾಗಿ ಜಾರಿಯಾಗಬೇಕು. ಅದಕ್ಕಾಗಿ ಫಲಾನುಭವಿಗಳ ಸಭೆ ನಡೆಸಬೇಕು. ಫಲಾನುಭವಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಪರ್ಕ ಮಾಡಬೇಕು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತಡವಾಗಬಾರದು. ಸೂಕ್ತವಾದ ಅಭ್ಯರ್ಥಿಗಳನ್ನು ಗುರುತಿಸಿ ಆದಷ್ಟು ಬೇಗ ಅಖಾಡಕ್ಕೆ ಬಿಡಬೇಕು. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯಕ್ರಮ ರೂಪಿಸಬೇಕು. ಬಿಜೆಪಿಯ ಹಿಂದೂ ಮುಸ್ಲಿಂ ವಿಭಜನೆ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು. ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಬೇಕು ಎಂದು ರಾಜ್ಯ ಕಾಂಗ್ರೆಸ್​ನ ಹಿರಿಯ ನಾಯಕರಿಗೆ ಎಐಸಿಸಿ ನಾಯಕರು ಸೂಚನೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ರಮ ಮರ ಕಡಿತ ಪ್ರಕರಣ – ಬಿಜೆಸಿ ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರುರಾಮಜನ್ಮಭೂಮಿ ಮತ ಪಡೆಯುವ ವಿಚಾರವಲ್ಲ, ಇದು ಸಾಂಸ್ಕೃತಿಕ ವಿಷಯವಾಗಿದೆ - ರಾಜನಾಥ್ ಸಿಂಗ್ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರನಿಂದ ಪತಿಯ ಹತ್ಯೆಡಿಸಿಎಂ ಡಿಕೆಶಿ ಹೂಡಿಕೆ ಮಾಡಿದ ಕೇರಳದ ಜೈಹಿಂದ್ ಚಾನಲ್​ಗೆ ಸಿಬಿಐ ನೋಟಿಸ್ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನೂಕುನುಗ್ಗಲು - ಮಹಿಳೆ ಅಸ್ವಸ್ಥ, ಯುವತಿಗೆ ಕಿರುಕುಳತಿಳಿಸಾರು ಮಾಡುವ ವಿಧಾನ..!ಪೈನಾಪಲ್‌ ಹಣ್ಣಿನ ಆರೋಗ್ಯ ಪ್ರಯೋಜನಗಳುಭಕ್ತರೆ ಎಚ್ಚರ: ರಾಮಮಂದಿರ ಹೆಸರಿನಲ್ಲಿ ಕ್ಯೂಆರ್ ಕೋಡ್ ವಂಚನೆ..!ಒಂದು ಕಪ್ಪು ದಾರದಲ್ಲಿ 9 ಗಂಟುಗಳನ್ನು ಕಟ್ಟಿ ಯಾವತ್ತು ಧರಿಸುವಿರೋ, ನೀವು ಬಯಸುವವರು ನಿಮ್ಮವರಾಗುತ್ತಾರೆಎಕ್ಸ್‌ಪೊಸ್ಯಾಟ್‌ ಉಪಗ್ರಹ ನಭಕ್ಕೆ, ಹೊಸ ಭಾಷ್ಯ ಬರೆದ ಇಸ್ರೋ: ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ.!