E-PAPER
17 Nov 2026, 12:22:40 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ನಾಗನೂರ ಶ್ರೀ ಶಿವಬಸವ ಸ್ವಾಮೀಜಿ ಟ್ರಸ್ಟ್ , ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮಕ್ಕೆ ದೇಣಿಗೆ

ಬೆಳಗಾವಿ-೦೬:ಧಾರವಾಡದ ಕೈವಾ. ಜಯಪ್ರಕಾಶ್ ಚನ್ನಬಸಪ್ಪ ಕಲಕೋಟಿ, ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ, ಜಿಲ್ಲಾ ಖಜಾನೆ ಧಾರವಾಡ ಇವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಅವರ ಮಾತೋಶ್ರೀ ಲೀಲಾ ಕಲಕೋಟಿ ಮತ್ತು ಕುಟುಂಬ ವರ್ಗದವರು ದಿನಾಂಕ : ೦೪-೦೯-೨೦೨೪ ರಂದು ಬೆಳಗಾವಿಯ ಬಸವನಕುಡಚಿಯ ದೇವರಾಜ್ ಅರಸು ಕಾಲೋನಿಯಲ್ಲಿರುವ ನಾಗನೂರು ಶ್ರೀ ಶಿವಬಸವ ಸ್ವಾಮೀಜಿ ಟ್ರಸ್ಟ್ ದ ಶ್ರೀಮತಿ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದ ನಿವಾಸಿಗಳಿಗೆ ಅವಶ್ಯಕತೆ ಇರುವ ಸುಮಾರು ಹತ್ತು ಸಾವಿರ ರೂಪಾಯಿ ಮೌಲ್ಯದ ಸ್ಟೀಲ್ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿ,ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ವೇದಿಕೆಯ ಮೇಲಿರುವ ಎಲ್ಲಾ ಗಣ್ಯರು ಶ್ರೀ ‌ಬಸವಣ್ಣವರ ಹಾಗೂ ಕೈವಾ. ಜಯಪ್ರಕಾಶ್ ಚೆನಬಸಪ್ಪ ಕಲಕೋಟಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ಸಮಾರಂಭದಲ್ಲಿ ವಿಶ್ರಾಂತ ಉಪ ನಿರ್ದೇಶಕರಾದ ಆರ್. ಬಿ. ಬನಶಂಕರಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೈವಾ. ಜಯಪ್ರಕಾಶ ಚನ್ನಬಸಪ್ಪ ಕಲಕೋಟಿ ಅವರ ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆಯನ್ನು ಕೊಂಡಾಡಿದರು. ಅವರ ಮಾತೋಶ್ರೀ ಲೀಲಾ ಕಲಕೋಟಿ ಅವರು ಕೈವಾ. ಜಯಪ್ರಕಾಶ್ ಅವರ ಮೃದು ಗುಣ, ಮಕ್ಕಳ ಬಗ್ಗೆ ಅನುಕಂಪ ಮಹಿಳೆಯರ ಬಗ್ಗೆ ಇರುವ ಗೌರವ ದಾನ, ಧರ್ಮಗಳ ಬಗ್ಗೆ ಹೇಳುತ್ತ ಭಾವುಕರಾದರು. ಲೀಲಾ ಕಲಕೋಟಿ ಅವರ ಸೋದರಿ ಸುರೇಖಾ ದೇಸಾಯಿ ಅವರು ಕೈವಾ.ಜಯಪ್ರಕಾಶ್ ಅವರ ಉದಾರ ಗುಣಗಳ ಬಗ್ಗೆ ಮತ್ತು ಅವರಲ್ಲಿರುವ ಸಹಾಯ ಸಹಕಾರ ಸೌಹಾರ್ದ ಮನೋಭಾವನೆಗಳ ಕುರಿತು ತಿಳಿಸಿದರು. ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಎಂ.ವಾಯ್. ‌ಮೆಣಸಿನಕಾಯಿ ಅವರು ಲೀಲಾ ಕಲಕೋಟಿ ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಬಗ್ಗೆ ಕಥೆಯನ್ನು ಉದಾಹರಣೆಯಾಗಿ ಹೇಳುತ್ತ ಇಂತಹ ಒಂದು ವೃದ್ಧಾಶ್ರಮದಲ್ಲಿ ತಮ್ಮ ಸುಪುತ್ರನ ಪ್ರಥಮ ಪುಣ್ಯಸ್ಮರಣೆ ಆಚರಿಸುವದು ತುಂಬಾ ಸ್ತುತ್ಯವಾದದ್ದು ಎಂದರು. ಬಿ.ಎಸ್. ದೊಡಬಂಗಿ ಅವರು ಕೈವಾ ಚೆನ್ನಬಸಪ್ಪ ಕಲಕೋಟಿ ಅವರು ಅಥಣಿ ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಅವರು ಸಾರ್ವಜನಿಕರಿಗೆ ಹಾಗೂ ಅಧೀನ ಸಿಬ್ಬಂದಿಗಳಿಗೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಿಗೆ ನೀಡಿದ ಪ್ರಾಮಾಣಿಕ ಸೇವೆಯನ್ನು ಸ್ಮರಿಸುತ್ತಾ. ಕೈವಾ.ಜಯಪ್ರಕಾಶ ಅವರ ಪವಿತ್ರ ದಿವ್ಯಾತ್ಮಕ್ಕೆ ಶಾಂತಿಯನ್ನು ಕೋರಿದರು. ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಚೌಗಲಾ ಅವರು ಲೀಲಾ ಕಲಕೋಟಿ ಅವರು ಮತ್ತು ಅವರ ಕುಟುಂಬದ ಸದಸ್ಯರು ಧಾರವಾಡದಿಂದ ಬೆಳಗಾವಿಯ ಈ ವೃದ್ಧಾಶ್ರಮಕ್ಕೆ ಬಂದು ನಿವಾಸಿಗಳನ್ನು ಭೆಟ್ಟಿ ಮಾಡಿ ಅವರಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ನೀಡಿ, ಅನ್ನ ದಾಸೋಹ ಮಾಡಿದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಎಮ್.ಎಸ್.ಚೌಗಲಾ, ಸಂಚಾಲಕರಾದ ಎಂ. ಎಂ. ಗಡಗಲಿ, ಡಾ ಶೋಭಾ ಆರ್ ಬನಶಂಕರಿ, ಶಾಯಿನ್ ಹೊಂಬಳ, ಜಾನಕಿ ಎಲ್. ಮಹಾದೇವಿ ಹರಿಜನ, ಅಲ್ಲಾಭಕ್ಷೆ ಪೀರಜಾದೆ, ಹಾಗೂ ನಿವಾಸಿಗಳೆಲ್ಲರು ಉಪಸ್ಥಿತರಿದ್ದರು. ಸುಗಂಧಾ ಅಳ್ಳಟ್ಟಿ ಅವರು ಸಭೀಕರನ್ನೆಲ್ಲ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಗೆ ಎಲ್ಲರಿಗೆ ವಂದನೆಗಳನ್ನು ಸಲ್ಲಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.