LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

ನಾಗಾಲ್ಯಾಂಡ್‌: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಶುರುವಾಗಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಆದರೆ ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಶೂನ್ಯ ಮತದಾನ ವರದಿಯಾಗಿದೆ.

ಹೆಚ್ಚಿನ ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ ಈಸ್ಟರ್ನ್‌ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‌ಪಿಒ) 'ಸಾರ್ವಜನಿಕ ತುರ್ತು ಪರಿಸ್ಥಿತಿ' ಘೋಷಿಸಿ, ಈ ಚುನಾವಣೆಯನ್ನು ಬಹಿಷ್ಕರಿಸುವಂತೆ ಸ್ಥಳೀಯರಿಗೆ ಕರೆ ನೀಡಿತ್ತು. ಇದಕ್ಕೆ ಜನರು ಅಭೂತಪೂರ್ವವಾಗಿ ಸ್ಪಂದಿಸಿದ್ದು, ಮತದಾನದಿಂದ ದೂರ ಉಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಾದ ಸೋನ್, ಟ್ಯೂನ್ಸಾಂಗ್, ಲಾಂಗ್ಲೆಂಗ್, ಕಿಫಿರ್, ಶಮಾಟರ್ ಮತ್ತು ನೋಕ್ಲಾಕ್​ನಲ್ಲಿ ಇಂದು ಬಹುತೇಕ ಶೂನ್ಯ ಮತದಾನ ಕಂಡಿದೆ.

ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಕ್ಕಾಗಿ ಈಶಾನ್ಯ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ENPO ಗೆ ನೋಟಿಸ್ ನೀಡಿದ್ದಾರೆ. ನಾಗಾಲ್ಯಾಂಡ್ ಒಂದು ಲೋಕಸಭಾ ಸ್ಥಾನವನ್ನು ಹೊಂದಿದ್ದು, 2018ರ ಉಪಚುನಾವಣೆಯಿಂದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಟೋಖೆಹೋ ಯೆಪ್ಥೋಮಿ ಇದನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಬಿಜೆಪಿಯ ಮಿತ್ರಪಕ್ಷವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರ ಧ್ವಜವನ್ನು ನೆಲಕ್ಕೆ ಹಾಸಿ ಇಸ್ಪೀಟ್ ಆಡಿದ ಕಿಡಿಗೇಡಿಗಳುಹಾವೇರಿ: ಭಾರತದಲ್ಲಿರುವ ಎಲ್ಲರೂ ಹಿಂದೂಗಳು ಎಂದ ವಚನಾನಂದ ಶ್ರೀಬೆಂಗಳೂರು: ಕೆಫೆ ನಂತರ ಥಿಯೇಟರ್ ನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಕೃತಿಇಂತಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ ₹1500 ರೂಪಾಯಿ ಸ್ಕಾಲರ್ಶಿಪ್! ಇಲ್ಲಿದೆ ಸಂಪೂರ್ಣ ಮಾಹಿತಿದಶಕಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿ ಘೋಷಣೆ ‘ಕಾಂತಾರ’ ಸಿನಿಮಾ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿಉಚಿತ ಹೊಲಿಗೆ ಯಂತ್ರ ವಿತರಣೆ..! ಈಗಾಗಲೇ ಅರ್ಜಿ ಸಲ್ಲಿಸಿ, ಆಗಸ್ಟ್ 31 ಕೊನೆಯ ದಿನಾಂಕಕೋಲ್ಕತ್ತಾ ವೈದ್ಯೆಯ ರೇಪ್ ಕೇಸ್: 19 ಮಂದಿಯನ್ನು ಬಂಧಿಸಿದ ಪೊಲೀಸರುವಯನಾಡು ದುರಂತದಿಂದ ದಾಖಲೆ ಕಳೆದುಕೊಂಡವರಿಗೆ ವಿಶೇಷ ಅದಾಲತ್ ಯೋಜನೆತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಮೊದಲ ಯತ್ನ ವಿಫಲ; ತಜ್ಞರಿಂದ 2ನೇ ಪ್ಲಾನ್ಜಮ್ಮುವಿನಲ್ಲಿ ವೇದ ಪಾಠಶಾಲೆ ಪ್ರಾರಂಭ : "ವೇದ-ಭಜನೆಗಳಿಂದ ವಿಭಜನೆ ತಪ್ಪುತ್ತದೆ" : ಡಾ. ಗೋಪಾಲಾಚಾರ್ಯ...!!