LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ'- ಶಾಸಕ ಮುನಿರತ್ನ

ಬೆಂಗಳೂರು : ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ ಎಂದು ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಆರ್ ಆರ್ ನಗರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಕಾಲಭೈರವನ ಮೇಲೆ ಅಣೆ ಮಾಡ್ತೇನೆ. ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಏನಾದ್ರು ತಪ್ಪು ಮಾಡಿದ್ರೆ ಹಾಗೆ ಸಾಯಬಾರದು. ರಕ್ತ ಕಾರಿ ಸಾಯಬೇಕು. ಸುಳ್ಳು ದೂರು ಕೊಡಬಾರದು. ಸತ್ಯ ಮಲಗಿರಬಹುದು. ಆದರೆ ಸಾಯಲ್ಲ. ಇವರ ಸ್ವಾರ್ಥಕ್ಕೋಸ್ಕರ ಅಷ್ಟರ ಮಟ್ಟಿಗೆ ಹೋಗಿದ್ದಾರೆ. ನನ್ನ ಬಳಿ ಯಾರೇ ಬಂದ್ರೂ ಏನಮ್ಮ, ತಾಯಿ ಅಂತೇನೆ. ಈ ಎರಡು ಪದ ಬಿಟ್ಟು ಬೇರೆ ಪದ ಉಪಯೋಗಿಸಲ್ಲ ಎಂದಿದ್ದಾರೆ.

ನೀವು ಕೊಟ್ಟ ಭಿಕ್ಷೆ ಶಾಸಕ ಸ್ಥಾನವನ್ನು ನಾನು ಬಿಟ್ಟುಕೊಡಲ್ಲ. ಅವರಿಗೆ ಬಿಟ್ಟು ಕೊಡುವ ಮೂರ್ಖತನದ ಕೆಲಸ ಮಾಡಲ್ಲ. ನನ್ನನ್ನು ಕಳಿಸಿ ನೀವು ಏನಪ್ಪಾ ಬಾಳ್ತೀರಿ ಇಲ್ಲಿ? ಶಾಸಕ ಆಗಬೇಕು ಅಷ್ಟೇ ತಾನೇ? ನೇರವಾಗಿ ಬಂದು ಕೇಳಬೇಕಿತ್ತು. ನನ್ನ ಮುಂದೆ ಬಂದು ರಾಜೀನಾಮೆ ಕೊಡು ಅನ್ನಿ, ಕೊಡ್ತೇನೆ. ಆದ್ರೆ, ಒಂದು ಹೆಣ್ಣುಮಗಳು ಇನ್ನೊಂದು ಹೆಣ್ಣು ಮಗಳ ಬಗ್ಗೆ ಆ ರೀತಿ ಎಲ್ಲಾ ಸುಳ್ಳು ದೂರು ಕೊಡಲು ಹೋಗಬಾರದು. ನಾಳೆ ಅವರ ಮಕ್ಕಳ ಭವಿಷ್ಯ ಏನು? ನಿಮ್ಮ ಸ್ವಾರ್ಥಕ್ಕೆ, ನೀವು ಎಂಎಲ್‌ಎ ಆಗಬೇಕೆಂಬ ಹುಚ್ಚಿಗೆ ಯಾಕೆ ಇನ್ನೊಬ್ಬರ ಮನೆ ಹಾಳು ಮಾಡುತ್ತೀರಿ. ನಮ್ಮ ಮೇಲೆ ಕೆಸರು ಎರಚಿದರೆ ಮುಂದೆ ನಿಮ್ಮ ಮೇಲೆ ಬೀಳುತ್ತೆ. ಮುಂದೊಂದು ದಿನ ಆ ಕೆಸರು ನಿಮ್ಮ ಮೇಲೆಯೇ ಬೀಳುತ್ತೆ. ನನಗೆ ಕೆಟ್ಟದ್ದು ಬಯಸಿ ಆನಂದಪಡುವAತಿದ್ದರೆ ಆನಂದ ಪಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಂದೇ ಭಾರತ್ ಎಕ್ಸ್‍ಪ್ರೆಸ್‍ನಿಂದ ಶಿಕ್ಷಣ, ಅರೋಗ್ಯ, ವ್ಯಾಪಾರ ವಹಿವಾಟಿಗೆ ಅನುಕೂಲ; ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ: ಸಚಿವ ಎಂ ಬಿ ಪಾಟೀಲ್.!ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ : ಸಂತೋಷ್ ಲಾಡ್.!ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ.!ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ.!ಹೃದಯಘಾತದಿಂದ 15 ವರ್ಷ ಬಾಲಕ ಸಾವು.!ಆಗಸ್ಟ್ 15 ರಿಂದ ಮತ್ತೆ ಮಳೆಯ ಅಬ್ಬರ: ಹವಾಮಾನ ಇಲಾಖೆ.!ಶಿಕ್ಷಕರಿಗೆ ಮಾಹಿತಿ.! ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ.!ಚಿತ್ರದುರ್ಗ : ಮಹಾನಗರ ಪಾಲಿಕೆಯನ್ನಾಗಿಸಲು ನಕಾಶೆ ತಯಾರಿ: ಶಾಸಕ ಕೆ. ಸಿ ವೀರೇಂದ್ರ ಪಪ್ಪಿ.!