LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾಪತ್ತೆಯಾಗಿದ್ದ ಜೈನ ಮುನಿಯ ಬರ್ಬರ ಹತ್ಯೆ

ಚಿಕ್ಕೋಡಿ :ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ‌ಮುನಿ ಕಾಮಕುಮಾರ ನಂದಿ ಮಹಾರಾಜರ  ಬರ್ಬರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಮೃತದೇಹದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಸುಮಾರು 15 ವರ್ಷಗಳಿಂದ ಹಿರೇಕೋಡಿಯ ನಂದಿ ಪರ್ವತದಲ್ಲಿ ನೆಲೆಸಿರುವ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸ್ವಾಮೀಜಿಗಳು ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ‌ ಕಿರಾತಕರು ಹತ್ಯೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರನ್ನು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಶವ ಹುಡುಕಾಟಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹತ್ಯೆ ಮಾಡಿ  ಶವವನ್ನು ಎಲ್ಲಿ ಹಾಕಿದ್ದಾರೆ ಸ್ಪಷ್ಟವಾಗಿ ತಿಳಿಸದೆ ಪೊಲೀಸರನ್ನು ಗೊಂದಲಕ್ಕೀಡು ಮಾಡಿದರು.

https://bcsuddi.com/%e0%b2%b8%e0%b3%81%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%a3%e0%b3%8d%e0%b2%af-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95/

ಕಟಕಬಾವಿ ಗ್ರಾಮದ ತೆರೆದ ಕೊಳವೆ ಬಾವಿ ಬಳಿ ಎಸೆದಿದ್ದೇವೆ ಎಂದರೆ ಮತ್ತೊಂದು ಸಲ ಬಟ್ಟೆಯಲ್ಲಿ ಕಟ್ಟಿ ನದಿಗೆ ಎಸೆದಿದ್ದೇವೆ. ಹೀಗೆ ದ್ವಂದ್ವ ಹೇಳಿಕೆ ನೀಡಿ ಪೊಲೀಸರಿಗೆ ಗೊಂದಲ ಮೂಡಿಸಿದ್ದಾರೆ.

ಪೊಲೀಸರು ಕಟಕಬಾವಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುನಿಗಳನ್ನು ಆಶ್ರಮದಿಂದಲೇ ಅಪಹರಿಸಿ ಕೊಲೆ ಮಾಡಿರುವ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಜೈನಮುನಿ ಶವ ಕಟಕಬಾವಿ ಕೊಳವೆ ಬಾವಿಯಲ್ಲಿ ಎಸೆಯಲಾಗಿದೆ ಎಂಬುದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇನ್ನೊಂದೆಡೆ ಅಹಿತಕರ ಘಟನೆ ನಡೆಯದಂತೆ ಚಿಕ್ಕೋಡಿ ತಾಲೂಕು ಮತ್ತು ರಾಯಬಾಗ ತಾಲೂಕಿನಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೊಟೇಲ್ ವೇಟರ್ ಆದ ಉರ್ಫಿ ಜಾವೇದ್.!ವಿಜ್ಞಾನ ಕೇಂದ್ರಗಳು, ತಾರಾಲಯಗಳಿಗೆ ಏಕರೂಪದ ವಿನ್ಯಾಸ ರಚನೆ: ಸಚಿವ ಭೋಸರಾಜುಬಹಳ ದಿನಗಳಿಂದ ಕಾಯುತ್ತಿದ್ದರು ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ- ಓರ್ವ ಸಾವು, ಹಲವು ಮಂದಿಗೆ ಗಾಯದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಸ್ಫೋಟಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆಮಾರ್ಚ್‌ 11ರಿಂದ 5, 8 ಮತ್ತು 9ನೇ ತರಗತಿಯ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ‘ಗೃಹಲಕ್ಷ್ಮಿ ಸಮಸ್ಯೆ ನಿವಾರಣೆ’ಗೆ ಇಂದಿನಿಂದ ‘ಮೂರುದಿನ ‘ವಿಶೇಷ ಕ್ಯಾಂಪ್‌’ ಆರಂಭಯೋಗಿ ಆದಿತ್ಯನಾಥ್ ಭಯ - ಪೊಲೀಸರಿಗೆ ಶರಣಾದ 74 ರೌಡಿಶೀಟರ್‌ಗಳು