LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತೆ ʼಕೂದಲುʼ ಉದುರುವ ಸಮಸ್ಯೆ- ಹೀಗೆ ಮಾಡಿ

ಚಳಿಗಾಲ ಶುರುವಾಗ್ತಿದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚರ್ಮದ ಆರೈಕೆ ಜೊತೆಗೆ ಕೂದಲಿನ ಆರೈಕೆ ಬಹಳ ಮುಖ್ಯವಾಗುತ್ತದೆ.

ಚಳಿಗಾಲದಲ್ಲಿ ತಲೆ ಹೊಟ್ಟು, ತಲೆಯಲ್ಲಿ ಗುಳ್ಳೆ, ಕೂದಲು ಎಣ್ಣೆಯುಕ್ತವಾಗುವುದು ಸಾಮಾನ್ಯ. ಕೂದಲು ಉದುರುತ್ತಿದ್ದಂತೆ ಮಾರುಕಟ್ಟೆಗೆ ಓಡುವ ಜನರು ಅಲ್ಲಿ ಸಿಗುವ ಬಗೆ ಬಗೆಯ ರಾಸಾಯನಿಕ ಉತ್ಪನ್ನಗಳನ್ನು ಬಳಸಲು ಶುರುಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಚಳಿಗಾಲದಲ್ಲಿ ಕೂದಲು ಆರೈಕೆ ಮಾಡಿಕೊಂಡಲ್ಲಿ ಅಡ್ಡ ಪರಿಣಾಮವಿಲ್ಲದೆ ಕೂದಲುದುರುವ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

ಈರುಳ್ಳಿ ರಸ : ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ 15 ನಿಮಿಷ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಕೂದಲು ಸ್ವಚ್ಛಗೊಳಿಸಿ. ವಾರದಲ್ಲಿ 2 ಬಾರಿ ಹೀಗೆ ಮಾಡುವುದ್ರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ರಸ : ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸ ಸೇವನೆ ಮಾಡುವುದ್ರಿಂದಲೂ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ವಿಟಮಿನ್ ಇ : ರಾತ್ರಿ ಮಲಗುವ ಮೊದಲು ತೆಂಗಿನ ಎಣ್ಣೆಗೆ ವಿಟಮಿನ್ ಇ ಮಾತ್ರೆಯನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ವಾರಕ್ಕೆ ನಾಲ್ಕು ದಿನ ಸತತವಾಗಿ ಹೀಗೆ ಮಾಡಿದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.

ದಾಲ್ಚಿನಿ : ದಾಲ್ಚಿನಿಗೆ ಜೇನು ತುಪ್ಪ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಈ ಮಿಶ್ರಣವನ್ನು ತಲೆಗೆ ಹಚ್ಚಿ 20-25 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ 2 ದಿನ ಹೀಗೆ ಮಾಡಿದ್ರೆ ಪರಿಣಾಮ ಕಾಣಲು ಶುರುವಾಗುತ್ತದೆ,

ಪಪ್ಪಾಯ : ಪಪ್ಪಾಯ ಕಾಯಿಯನ್ನು ರುಬ್ಬಿ ತಲೆಗೆ ಹಚ್ಚಿ 10-15 ನಿಮಿಷ ಹಾಗೆ ಬಿಡಿ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರುಚಿಕರವಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನಹುರುಳಿಕಾಳಿನ ಆರೋಗ್ಯ ಪ್ರಯೋಜನಮನೆಯ ಬಳಿ ಇಂತಹ ಗಿಡಗಳಿದ್ದರೆ ದರಿದ್ರತನ ಶುರುವಾಗಿ ಕೌಟುಂಬಿಕ ಕಲಹ ಮಾನಸಿಕ ನೆಮ್ಮದಿ ಹಾಳಾಗುವುದು ಗ್ಯಾರಂಟಿ ಆದಷ್ಟು ಬೇಗ ಕಿತ್ತು ಹಾಕಿ?ಇನ್ಫೋಸಿಸ್ ನಲ್ಲಿ 2000 ಹೊಸ ಉದ್ಯೋಗಿಗಳಿಗೆ ಕೆಲಸದ ಪ್ರಕ್ರಿಯೆ ಚಾಲನೆ.!.!ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿ ಬೆಲೆ ಇಷ್ಟು.!ಗ್ರಾಮೀಣ ಭಾಗದ ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಪಕರಣಗಳ ನೀಡಿಕೆ . ! ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಸೆ.2 ಮತ್ತು 3 ಗೌರಸಮುದ್ರ ಮಾರಮ್ಮನ ಜಾತ್ರೆ: ಪ್ರಾಣಿ ಬಲಿ ನಿಷೇಧರಾತ್ರಿ ಸಮಯದಲ್ಲಿ ಮಲಗುವಾಗ ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ*ಕೆಎಎಸ್ ಪರೀಕ್ಷೆ, ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಸ್ತ್ರೀ ಕುಲದ ಮೇಲೆ ದಾಳಿ ಮಾಡುವವರಿಗೆ ಕಠೋರ ಶಿಕ್ಷೆಯಾಗಲಿ :  ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ.!