LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ'- ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು : ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರನ್ನ ಭೇಟಿ ಮಾಡಿದ್ದಾರೆ.

ಹೆಚ್‌ಡಿಕೆ ಹಾಗೂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ, ಮುಡಾ ಪ್ರಕರಣ ಸೇರಿ ಕೆಲವು ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.ಬಳಿಕ ಮಾಧ್ಯಮಕ್ಕೆ ಮಾತನಾಡಿದ ಗೃಹ ಸಚಿವರು, ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲು ತಾಕೀತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನಾಗಲೀ ಸತೀಶ್ ಜಾರಕಿಜೊಳಿ ಆಗಲೀ, ಮಹಾದೇಪ್ಪ ಆಗಲೀ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ನಾವು ಹೇಳಿದ್ದೀವಿ. ಇದು ಬಿಟ್ಟು ಸಿಎಂ ಅವರನ್ನ ಬದಲಾಯಿಸಿ, ಬೇರೆಯವರನ್ನು ಮಾಡಿ, ನಮಗೆ ಮಾಡಿ ಅಂತ ಮಾತಾಡಿಲ್ಲ. ಇನ್ಮುಂದೆ ನಾನು ಸಿಎಂ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ನಾವು ಅನವಶ್ಯಕವಾಗಿ ಡಿನ್ನರ್ ಮೀಟಿಂಗ್ , ರಾಜಕೀಯ ಮೀಟಿಂಗ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಮುಂದೆಯೂ ಅನವಶ್ಯಕ ಭೇಟಿಗಳನ್ನು ಮಾಡಲ್ಲ. ಇದು ನನ್ನ ಸ್ಪಷ್ಟ ಹೇಳಿಕೆ. ಏನೂ ಇಲ್ಲದೇ ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ? ನಾವೆಲ್ಲ ಜವಾಬ್ದಾರಿ ಇರೋರು, ಹುಡುಗಾಟಿಕೆ ಮಾಡೋರಲ್ಲ, ನಾವು ಪಕ್ಷದಲ್ಲಿ ಹಿರಿಯರು, ನಮಗೂ ಜವಾಬ್ದಾರಿ ಇದೆ ಎಂದು ಕಿಡಿಕಾರಿದರು

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊರ್ಲಕುಂಟೆ ಎಸ್.ದಯಾನಂದ್ ಅವರ ಕುಂಚದಲ್ಲಿ ಅರಳಿದ ಕಾರ್ಟೂನ್.!ಮಹಿಳೆಯರಿಗೆ ಇಲ್ಲಿದೆ ಟಿಪ್ಸ್ .! 31 ದಿನಕ್ಕೆ ಒಂದು ಒಂದೊಂದು ರೀತಿಯ ಪಲ್ಯದ ವಿವರ.!ಅಡಮಾನ ಇಟ್ಟ ಆಭರಣ ಮರಳಿ ಪಡೆಯಲು, ಈ ಪರಿಹಾರ ಮಾಡಿ..!ವಚನ.: - ಅವಸರದ ರೇಕಣ್ಣ .!ಭಾರತ-ಪಾಕ್ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶ ಏಕೆ? ಕದನ ವಿರಾಮದಿಂದ ಭಯೋತ್ಪಾದನೆ ದಾಳಿ ನಿಲ್ಲಬಹುದ?ಕದನ ವಿರಾಮಕ್ಕೆ ಸಹಿ ಭಾರತ-ಪಾಕ್‌ ಒಪ್ಪಿಗೆ-ಸರ್ಕಾರದಿಂದ ಅಧಿಕೃತ ಘೋಷಣೆಕದನ ವಿರಾಮಕ್ಕೆ ಒಪ್ಪಿದ ಭಾರತ- ಪಾಕ್: ಟ್ರಂಪ್ ಘೋಷಣೆಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೀರಸೈನಿಕರಿಗೆ ಆತ್ಮಸ್ಥೈರ್ಯ ಸಿಗಲಿ ಎಂದು ಮೃತ್ಯುಂಜಯ ಹೋಮ.!ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದಭವಿಷ್ಯದಲ್ಲಿನ ಭಯೋತ್ಪಾದಕ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲಾಗುತ್ತದೆ - ಭಾರತ ಎಚ್ಚರಿಕೆ