ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರುಪೇರು.! ಭಾಷಣ ಮಾಡುವಾಗ ಪ್ರಜ್ಞೆ ತಪ್ಪಿದರು.!
ನವದೆಹಲಿ: ಬುಧವಾರ ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (BJP) ಹಿರಿಯ ಮುಖಂಡ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರುಪೇರಾಗಿದ್ದು, ವೇದಿಕೆಯ ಮೇಲೆ ಪ್ರಜ್ಞೆ ತಪ್ಪಿದ್ದಾರೆ.
ಮೂಲಗಳು ಮತ್ತು ದೃಶ್ಯಗಳ ಪ್ರಕಾರ, ಯವತ್ಮಾಲ್ನ ಪುಸಾದ್ನಲ್ಲಿ ಭಾಷಣ ಮಾಡುವಾಗ ಗಡ್ಕರಿಯವ್ರಿಗೆ ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿದ್ದು, ಕೆಳಗೆ ಬಿದ್ದಿದ್ದಾರೆ.
ಅವರ ಪಕ್ಷದ ಕಾರ್ಯಕರ್ತರು ಅವರ ಮುಖದ ಮೇಲೆ ನೀರು ಚಿಮುಕಿಸಿ ವೇದಿಕೆಯಿಂದ ಕರೆದೊಯ್ದರು. ನಂತರ ವೈದ್ಯಕೀಯ ನೆರವು ನೀಡಲು ಕರೆದೊಯಲಾಗಿದೆ ಎಂದು ತಿಳಿದುಬಂದಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.