LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ

ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿತದ ಪರಿಣಾಮ, ಓರ್ವ ಕಾರ್ಮಿಕ ಸಾವನ್ನಪ್ಪಿದ್ದು,ಮತ್ತೋರ್ವ ಕಾರ್ಮಿಕ ಅವಶೇಷಗಳ ಅಡಿಯಲ್ಲಿ ಸಿಲುಕಿದ ಘಟನೆಯೊಂದು ನಡೆದಿದೆ.

ಬಿಹಾರ ರಾಜ್ಯದ ಸೋಮ್ ಪುರ್ ಮೂಲದ ರಂಜನ್ ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಸುದ್ದಗುಂಟೆ ಪಾಳ್ಯದಲ್ಲಿರುವಂತ ನಿರ್ಮಾಣ ಹಂತದ ಕಟ್ಟಡವೊಂದು ಕುಸಿತಗೊಂಡಿದ್ದು .ಕಟ್ಟಡದ ಅಡಿ ಭಾಗದಲ್ಲಿ ಸಿಲುಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಬಿರಾಹ ಮೂಲಕ ಕಾರ್ಮಿಕನನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

ಕೆಲವು ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರೋದಾಗಿ ಹೇಳಲಾಗುತ್ತಿದೆ.

ಕಟ್ಟಡ ಕುಸಿತ ಘಟನೆ ಬಗ್ಗೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಅವರು, ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಿರ್ಮಾಣ ಮಾಡ್ಬೇಕು ಅಂತಾ ಜೆಸಿಬಿ ಮೂಲಕ ಅಡಿಪಾಯ ಅಗೆಯಲಾಗ್ತಿತ್ತು. ಜೆಸಿಬಿ ಜೊತೆಗೆ ಮೂರ್ನಾಲ್ಕು ಜನ ಕಾರ್ಮಿಕರನ್ನ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಈ ವೇಳೆ ಪಕ್ಕದಲ್ಲಿ ಮೂರು ಅಂತಸ್ಥಿನ ಬಿಲ್ಡಿಂಗ್ ಕಟ್ಟಡಕ್ಕೆ ಜೆಸಿಬಿ ತಾಗಿ ಘಟನೆ ನಡೆದಿದೆ.

ಆ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಮೇಲೆ ಬಿದ್ದಿದೆ. ಘಟನೆಯಲ್ಲಿ ಬಿಹಾರ ಮೂಲದ ಓರ್ವ ಸಾವನ್ನಪ್ಪಿದ್ದಾನೆ. ಈಗಾಗಲೇ ಮಾಲೀಕ, ಕಾಂಟ್ರಾಕ್ಟರ್ ಯಾರು? ಅನ್ನೋ ಮಾಹಿತಿ ಪಡೆಯಲಾಗ್ತಿದೆ. ಸಂಬಂಧಪಟ್ಟವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ಎಸ್.ವೈ ಧೃತರಾಷ್ಟ್ರ ಪ್ರೇಮಕ್ಕೆ ನಾಶದತ್ತ ಬಿಜೆಪಿ.! ಕೆ.ಮುಕುಡಪ್ಪಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ‌ ಸಾಮೂಹಿಕ ವಿವಾಹ- 123 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ'ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ'- ವೀರಪ್ಪ ಮೊಯ್ಲಿಲೈಂಗಿಕ ದೌರ್ಜನ್ಯ ಕೇಸ್‌: ಪ್ರಜ್ವಲ್‌ ವಿರುದ್ಧ ಮತ್ತೊಂದು ದೂರು ದಾಖಲುಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೆಳಗಿಳಿಯಲಿ, ಪ್ರಜ್ವಲ್‌ನನ್ನ 24 ಗಂಟೆಗಳಲ್ಲೇ ಬಂಧಿಸುತ್ತೇವೆ: ಅಶೋಕ್ ಸವಾಲುಅಮೆರಿಕ ವಿ.ವಿಯಲ್ಲಿ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ- ಹಲವು ವಿದ್ಯಾರ್ಥಿಗಳು ಅರೆಸ್ಟ್‌ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ ನಿಧನಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿಶಾಲಾ-ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಬಳಸುತ್ತಿದ್ದ ಐಷಾರಾಮಿ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಅದೀಗ ಎಲ್ಲಿದೆ ಗೊತ್ತಾ?ಅಗತ್ಯ ಆಚರಣೆಗಳಿಲ್ಲದ, ವಿಧಿಬದ್ಧವಲ್ಲದ ಹಿಂದೂ ವಿವಾಹಗಳು ಅಸಿಂಧು: ಸುಪ್ರೀಂ ಕೋರ್ಟ್