LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ನೇಪಾಳಿ ಗ್ಯಾಂಗ್ ನಿಂದ ಅನ್ನ ಹಾಕಿದ ಮನೆಗೆ ಕನ್ನ : 15 ಕೋಟಿ ಚಿನ್ನಾಭರಣ ಕಳ್ಳತನ

ಬೆಂಗಳೂರು: ನೇಪಾಳಿಗಳನ್ನ ಮನೆಕೆಲಸಕ್ಕೆ ಇಟ್ಟುಕೊಳ್ಳಬೇಡಿ ಪದೇ ಪದೇ ಹೇಳಿದ್ರು ಈ ಸಿರಿವಂತರಿಗೆ ಅರ್ಥ ಆಗಲ್ಲ. ಸದ್ಯ ಅಂತಹದ್ದೆ ಒಂದು ನೇಪಾಳಿ ಗ್ಯಾಂಗ್ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆಗೆ ಕನ್ನ ಹಾಕಿದ್ದಾರೆ.

ಕೆಲಸ ಕೊಟ್ಟ ಮಾಲೀಕನ ಮನೆಯನ್ನ ಗುಡಿಸಿ ಗುಂಡಾಂತರ ಮಾಡಿದ ಘಟನೆ ನಗರ ವಿಜಯನಗರ ಠಾಣವ್ಯಾಪ್ತಿಯಲ್ಲಿ ನಡೆದಿದೆ. ಅರಿಹಂತ್ ಜ್ಯುವೆಲ್ಲರಿ ಮಾಲೀಕರ ಮನೆಯಲ್ಲಿ ಬರೋಬ್ಬರಿ 18 ಕೆಜಿ ಚಿನ್ನಾಭರಣ, 40 ಲಕ್ಷ ನಗದು ಸೇರಿ ಬರೋಬ್ಬರಿ 15 ಕೋಟಿ ಮೌಲ್ಯದ ಚಿನ್ನಾಭರಣ, ಕದ್ದು ಎಸ್ಕೇಪ್ ಆಗಿದ್ದಾರೆ.

ವಿಜಯನಗರ ಪೈಪ್ ಲೇನ್ ನ ಅರಿಹಂತ್ ಜ್ಯುವೆಲರ್ಸ್ ಮಾಲೀಕರ ಮನೆಯಲ್ಲಿ ಕಳ್ಳತನವಾಗಿದ್ದು ಅರಿಹಂತ್ ಜ್ಯುವೆಲರ್ಸ್ ಮಾಲೀಕ ಸುರೇಂದ್ರಕುಮಾರ್ ಜೈನ್ ಜ್ಯುವೆಲರ್ಸ್ ನಲ್ಲಿ ಸೆಕ್ಯುರಿಟಿ ಕೆಲಸ ಮಾಡ್ತಿದ್ದ ನೇಪಾಳ ಮೂಲದ ನ್ಯಾಮರಾಜ್ ಎಂಬಾತನಿಂದ ಕೃತ್ಯ ನಡೆದಿದೆ. ಇದೇ ತಿಂಗಳ 1 ನೇ ತಾರಿಕು ಗುಜರಾತ್ ನ ಗಿರ್ ನಾರ್ ಗೆ ದೇವರ ಜಾತ್ರೆಗೆ ಸುರೇಂದ್ರಕುಮಾರ್ ಫ್ಯಾಮಿಲಿ ಹೋಗಿದ್ರು.

ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ ನ್ಯಾಮ ರಾಜ್ ದಂಪತಿಗೆ ಉಳಿದುಕೊಳ್ಳಲು ಸೆಕ್ಯುರಿಟಿ ರೂಂ ನೀಡಿದ್ರು. ಮಾಲೀಕರು ಗುಜರಾತ್ ಗೆ ಹೋಗಿದ್ದಾಗ ಇಡೀ ಮನೆಯನ್ನ ಗುಡಿಸಿ ಗುಂಡಾಂತರ ಮಾಡಿದ್ದಾರೆ. ಸುರೇಂದರ್ ಕುಮಾರ್ ಜೈನ್ ,ಅವ್ರ ಹೆಂಡತಿ , ಮಕ್ಕಳು, 6 ಮಂದಿ ಅಕ್ಕಂದಿರು , ಮನಯಲ್ಲಿಟ್ಟ ಮಳಿಗೆಯ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. 7 ನೇ ತಾರೀಖು ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಈ ಹಿಂದೆ ಕೂಡ ನೇಪಾಳಿ ಸೆಕ್ಯೂರಿಟಿಗಳು ಇದೇ ರೀತಿ ಹಲವು ಶ್ರೀಮಂತರ ಮನೆಯಲ್ಲಿ ಕೋಟಿ ಕೋಟಿ ಹಣ ಚಿನ್ನ ಕದ್ದು ಎಸ್ಕೇಪ್ ಆಗಿರೋ ಘಟನೆ ಇನ್ನೂ ಹಸಿಯಾಗಿವೆ. ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡಾನೆ ಜತೆ ಸೆಲ್ಫೀ ವ್ಯಕ್ತಿಗೆ 25 ಸಾವಿರ ರೂ. ದಂಡ.!ಚಿನ್ನದ ಕಳ್ಳಸಾಗಣೆಕೆ ಕೇಸ್ ನಟಿ ರನ್ಯಾ ರಾವ್ : ಕೆ. ರಾಮಚಂದ್ರ ರಾವ್ ಮಹಾನಿರ್ದೇಶಕರಾಗಿ ನೇಮಕ.!ಬಂಗಾಳಕೊಲ್ಲಿಯಲ್ಲಿ  ವಾಯುಭಾರ ಕುಸಿತ ನಾಳೆಯಿಂದ ಮಳೆ.!ಶನಿ ಚಲನೆಯಿಂದ ತ್ರಿಕೇದಶ ಯೋಗ: ಹಣ, ಮನೆ, ಕೌಟುಂಬಿಕ ಸಮಸ್ಯೆ ದೂರ! ಯಾರಿಗೆಲ್ಲಾ ನೋಡಿ!ಕರ್ನಾಟಕ ಸಾರಿಗೆ ನಿಗಮದ ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ರೆಡಿ.!ಬಳ್ಳಾರಿ: ಕಿತ್ತೂರುರಾಣಿ ಚೆನ್ನಮ್ಮ ಪದವಿಪೂರ್ವ ಕಾಲೇಜಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ.!12-08-2025 ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ..!ವಚನ: -ಸಿದ್ಧರಾಮೇಶ್ವರ .!ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಅಂಬೇಡ್ಕರ್.! ಹೆಚ್. ಆಂಜನೇಯಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿ ಒಟ್ಟು 257 ಹುದ್ದೆಗಳಿಗೆ ಅರ್ಜಿ ಆಹ್ವಾನ.!