LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಚಿವ ಸ್ಥಾನದಿಂದ ವಜಾಕ್ಕೆ ಎಐಸಿಸಿ ಸೂಚನೆ'- ಸಿಎಂ

ಬೆಂಗಳೂರು:  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮಾತಮಾಡಿದ ಅವರು, ಸಚಿವರಿಗೆ ಎಚ್ಚರಿಕೆ ಕೊಟ್ಟರು. ನನ್ನ ಮತ್ತು ಶಿವಕುಮಾರ್‌ ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ ಮಾತನಾಡಿದ್ದಾರೆ. ನೀವ್ಯಾರು ಇನ್ನುಮುಂದೆ ಸಭೆ ಸೇರುವುದು, ಮಾತನಾಡುವುದು, ಮಾಡಬಾರದು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ನೀವೆ ಜವಾಬ್ದಾರರು ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷರು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಯಾವ ಸಚಿವರು ಸಭೆ ಮಾಡ್ತಾರೆ? ಬಹಿರಂಗವಾಗಿ ಮಾತಾಡ್ತಾರೆ ಅವರಿಗೆ ಎಐಸಿಸಿಯಿಂದ ನೀವೆ ನೋಟಿಸ್ ನೀಡಿ. ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸಾಬೀತಾದರೆ ಸಚಿವ ಸ್ಥಾನದಿಂದ ವಜಾ ಮಾಡಿ. ಇವಿಷ್ಟು ನಿರ್ದೇಶನವು ಎಐಸಿಸಿ ಅಧ್ಯಕ್ಷರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಬಂದಿದೆ.

ಇದನ್ನ ಕೆ.ಸಿ ವೇಣುಗೋಪಾಲ್‌ ಹಾಗೂ ಸುರ್ಜೆವಾಲ ಇಬ್ಬರೂ ನನ್ನ ಗಮನಕ್ಕೆ ತಂದಿದ್ದಾರೆ. ನಿಮ್ಮ ಸಭೆ, ನಿಮ್ಮ ಮಾತು, ನಿಮ್ಮ ಜವಬ್ದಾರಿ. ಈ ವಿಚಾರದಲ್ಲಿ ಯಾವುದೂ ನನ್ನ ಕೈಯಲ್ಲಿ ಇಲ್ಲ ಎಂದು ನೇರವಾಗಿ ಸಿಎಂ ಹೇಳಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳೆಯರಿಗೆ ಇಲ್ಲಿದೆ ಟಿಪ್ಸ್ .! 31 ದಿನಕ್ಕೆ ಒಂದು ಒಂದೊಂದು ರೀತಿಯ ಪಲ್ಯದ ವಿವರ.!ಅಡಮಾನ ಇಟ್ಟ ಆಭರಣ ಮರಳಿ ಪಡೆಯಲು, ಈ ಪರಿಹಾರ ಮಾಡಿ..!ವಚನ.: - ಅವಸರದ ರೇಕಣ್ಣ .!ಭಾರತ-ಪಾಕ್ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶ ಏಕೆ? ಕದನ ವಿರಾಮದಿಂದ ಭಯೋತ್ಪಾದನೆ ದಾಳಿ ನಿಲ್ಲಬಹುದ?ಕದನ ವಿರಾಮಕ್ಕೆ ಸಹಿ ಭಾರತ-ಪಾಕ್‌ ಒಪ್ಪಿಗೆ-ಸರ್ಕಾರದಿಂದ ಅಧಿಕೃತ ಘೋಷಣೆಕದನ ವಿರಾಮಕ್ಕೆ ಒಪ್ಪಿದ ಭಾರತ- ಪಾಕ್: ಟ್ರಂಪ್ ಘೋಷಣೆಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೀರಸೈನಿಕರಿಗೆ ಆತ್ಮಸ್ಥೈರ್ಯ ಸಿಗಲಿ ಎಂದು ಮೃತ್ಯುಂಜಯ ಹೋಮ.!ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದಭವಿಷ್ಯದಲ್ಲಿನ ಭಯೋತ್ಪಾದಕ ಕೃತ್ಯವನ್ನು ಯುದ್ಧ ಕೃತ್ಯವೆಂದು ಪರಿಗಣಿಸಲಾಗುತ್ತದೆ - ಭಾರತ ಎಚ್ಚರಿಕೆಭಾರತೀಯ ಮಹಿಳಾ ಪೈಲಟ್ ಪಾಕ್‌ನಲ್ಲಿ ಸೆರೆ- ಇಲ್ಲಿದೆ ವೈರಲ್‌ ಸುದ್ದಿಯ ಅಸಲಿಯತ್ತು