LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು  ಆ.31 ಅಂತಿಮ ದಿನಾಂಕ.!

 

ಚಿತ್ರದುರ್ಗ: ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದ್ದು, ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಪಡಿತರ ಚೀಟಿದಾರರ ಇ.ಕೆ.ವೈ.ಸಿ ಸಂಗ್ರಹಣೆಯನ್ನು 2017ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಇ-ಕೆ.ವೈ.ಸಿ ಸಂಗ್ರಹಣೆಯ ಪ್ರಗತಿಯನ್ನು ಪರಾಮರ್ಶೆ ಮಾಡಲಾಗಿ, ಇದುವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಒಟ್ಟು ಶೇ.97.07ರಷ್ಟು ಇ-ಕೆ.ವೈ.ಸಿ ಸಂಗ್ರಹಣೆ ಮಾಡಲಾಗಿದೆ.

ಪಡಿತರ ಚೀಟಿಯಲ್ಲಿನ ಸದಸ್ಯರ ಇ-ಕೆ.ವೈ.ಸಿ ಸಂಗ್ರಹಣೆಯಾಗದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಹ ಪಡಿತರ ಚೀಟಿಗಳು, ಸದಸ್ಯರುಗಳ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಇ-ಕೆ.ವೈ.ಸಿ ಸಂಗ್ರಹಣೆಯಾಗಿಲ್ಲದ್ದ ಪಡಿತರ ಚೀಟಿದಾರರು, ಸದಸ್ಯರು ಇದೇ ಆಗಸ್ಟ್ 31ರೊಳಗೆ ತಾವು ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಯ, ತಾವು ಇರುವ ಸ್ಥಳದಲ್ಲಿಯೇ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಜೀವಮಾಪನ ನೀಡಿ ಇ-ಕೆ.ವೈ.ಸಿ ಸಂಗ್ರಹಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಅಂತಿಮ ಗಡುವು ನೀಡಿದ್ದು, ತಪ್ಪದೇ ಇ.ಕೆ.ವೈ.ಸಿ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎರಡು ರೈಲಿನ ನಡುವೆ ಭೀಕರ ಅಪಘಾತ: 6 ಸಾವು, ಹಲವರಿಗೆ ಗಾಯಸಮುದ್ರದ ತೀರಕ್ಕೆ ಬಂದ ಲಕ್ಷಾಂತರ ಮೀನುಗಳು!ಬೆಚ್ಚಿಬೀಳಿಸುತ್ತಿದೆ ದಾಖಲೆಯ ಪ್ರಮಾಣದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆ..! ಲೈಂಗಿಕ ಶಿಕ್ಷಣದ ಅರಿವು ನೀಡಲು ತಯಾರಿ!ಬ್ಲೂಫಿಲಂ ನಿಷೇಧಿಸಿದ್ರೆ ನೇಪಾಳ ರೀತಿ ದಂಗೆ ಆದೀತು : ಸುಪ್ರೀಂ ಕೋರ್ಟ್ಸೇನೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆಯ ನಾಲ್ವರು ಉಗ್ರರು ಮೃತ್ಯುಕಾಂಗ್ರೆಸ್ ಮಾಜಿ ಸಚಿವ ಹೆಚ್‌.ವೈ ಮೇಟಿ ನಿಧನಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಆಹಾರಗಳು ಇವು…!ಕೊಲ್ಲೂರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಖಾತೆ ತೆರೆದು ವಂಚನೆಭಾರತೀಯ ರೈಲ್ವೆಯ ವಾಯುವ್ಯ ರೈಲ್ವೆ ಇಲಾಖೆಯಲ್ಲಿ 898 ಹುದ್ದೆಗಳಿಗೆ ಅರ್ಜಿ ಆಹ್ವಾನ!ಅಕ್ಕ ಪಡೆ ಯೋಜನೆಗೆ sslc or ಪಿಯುಸಿ ಆಗಿದ್ದವರು ಅರ್ಜಿ ಸಲ್ಲಿಸಿಬಹುದು