LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಮಿಕ್ಸಿಯಲ್ಲಿ ರುಬ್ಬಿದ ಪಾಪಿ ಪತಿ..!

ಸ್ವಿಟ್ಜರ್ಲೆಂಡ್‌ನ ಮಾಡೆಲ್ ಹಾಗೂ ಮಿಸ್ ಫೈನಲಿಸ್ಟ್‌ ಆಗಿದ್ದ ಸುಂದರಿಯನ್ನು ಆಕೆಯ ಪತಿಯೇ ಕತ್ತು ಹಿಸುಕಿ ಕೊಂದು ಬಳಿಕ ಆಕೆಯ ದೇಹವನ್ನು ಫೀಸ್‌ ಫೀಸ್‌ ಮಾಡಿ ಮಿಕ್ಸಿಯಲ್ಲಿ ರುಬ್ಬಿದ ಘಟನೆ ನಡೆದಿದೆ. ಹೌದು ಕ್ರಿಶ್ಟಿನಾ ಜೊಕ್ಸಿಮೊವಿಕ್‌ ಕೊಲೆಯಾದ ಮಹಿಳೆ. 38 ವರ್ಷದ ಈ ಮಾಡೆಲ್‌ ಕ್ರಿಶ್ಟಿನಾ ಜೊಕ್ಸಿಮೊವಿಕ್ ಅವರ ಶವವು ಸ್ವಿಟ್ಚರ್ಲೆಂಡ್‌ನ ಬಿನ್ನಿನ್ಗೆನ್‌ನಲ್ಲಿರುವ ಅವರ ಮನೆಯ ಲ್ಯಾಂಡ್ರಿ ರೂಮ್‌ನಲ್ಲಿ ಫೆಬ್ರವರಿ 13 ರಂದು ಪತ್ತೆಯಾಗಿತ್ತು. ಪತ್ನಿಯನ್ನು ಕೊಲೆ ಮಾಡಿದ ಪತಿ ಥಾಮಸ್‌ ಬಳಿಕ ಶವವನ್ನು ಕತ್ತರಿಸಿ ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ಹುಡಿ ಮಾಡಿ ಅದಕ್ಕೆ ರಾಸಾಯನಿಕ ಸುರಿದು ಶವ ಪೂರ್ತಿಯಾಗಿ ಕರಗಿ ಹೋಗುವಂತೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಕ್ರಿಶ್ಟಿನಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಖಚಿತವಾಗಿತ್ತು. ಆಕೆಯ 41 ವರ್ಷದ ಪತಿ ಥಾಮಸ್‌ನನ್ನು ನಂತರ ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದ. ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇನ್ನು ಆರೋಪಿ ಪತಿ ಆಕೆ ನನ್ನ ಮೇಲೆ ಚಾಕುವಿನಿಂದ ದಾಳಿಗೆ ಮುಂದಾದಳು ಈ ವೇಳೆ ನನ್ನನ್ನು ನಾನು ರಕ್ಷಿಸಿಕೊಳ್ಳುವ ವೇಳೆ ಆಕೆಯ ಹತ್ಯೆಯಾಗಿದೆ. ಆಕೆಯ ಸಾವಿನ ನಂತರ ಭಯಗೊಂಡ ನಾನು ಆಕೆಯ ದೇಹವನ್ನು ಛಿದ್ರಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಕ್ರಿಶ್ಟಿನಾ 2003ರಲ್ಲಿ ಮಿಸ್ ವಾಯುವ್ಯ ಸ್ವಿಟ್ಜರ್ಲೆಂಡ್‌ನ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದು ಮಿಸ್ ಸ್ವಿಟ್ಜರ್ಲೆಂಡ್‌ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇದಾದ ನಂತರ ಉದಯೋನ್ಮುಖ ಮಾಡೆಲ್‌ಗಳಿಗೆ ತರಬೇತಿ ನೀಡುವ ತರಬೇತುದಾರೆಯಾಗಿ ಫೇಮಸ್ ಆಗಿದ್ದರು. ಐಟಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದ ಈಕೆ ಯಶಸ್ವಿಯಾಗಿ ಕೋಚಿಂಗ್ ಸೆಂಟರೊಂದನ್ನು ಮುನ್ನಡೆಸುತ್ತಿದ್ದರು.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ..!ಬೆಂಗಳೂರು : 'ವ್ಯಾಲೆಂಟೈನ್ಸ್‌ ಡೇ'ಗೆ ಬಾಯ್ ಫ್ರೆಂಡ್ ಬೇಕಾ..? - ಬಾಡಿಗೆಗೆ ಸಿಕ್ತಾರೆ ಬಾಯ್ ಫ್ರೆಂಡ್!ಐಪಿಎಸ್ ಮಂಜರಿ ಜರೂರ್ ಯಶಸ್ಸಿನ ಕಥನಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಮೂರು ಬಗೆಯ ಸೊಪ್ಪುಗಳುಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆದೇಶ ಜಾರಿ.! ಮುಖ್ಯಾಂಶಗಳುಚಿತ್ರದುರ್ಗ: ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ.!ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಿದರೆ ಮಾಂಗಲ್ಯದೋಷ ಕಂಕಣ ದೋಷಕ್ಕೆ ಈಡಾಗುತ್ತೀರಿ ಎಚ್ಚರ!-ಅಲ್ಲಮಪ್ರಭುದೇವರು ಅವರ ವಚನ…ಅಮೆರಿಕ ಪ್ರವಾಸದಲ್ಲಿ ತುಳಸಿ ಗಬ್ಬಾರ್ಡ್‌ರನ್ನು ಭೇಟಿಯಾದ ಪ್ರಧಾನಿ ಮೋದಿಹೆಂಡತಿಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತ ಅಟ್ಟಹಾಸ ಮೆರೆದ ಪತಿ ಮಹಾಶಯ