LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪತ್ನಿ, ಸೋದರಳಿಯನಿಗೆ ಗುಂಡಿಕ್ಕಿ ಆತ್ಮಹತ್ಯೆಗೆ ಶರಣಾದ ಎಸಿಪಿ

ಮಹಾರಾಷ್ಟ್ರ:ಹಿರಿಯ ಪೊಲೀಸ್ ಅಧಿಕಾರಿ ತನ್ನ ಪತ್ನಿ ಮತ್ತು ಸೋದರಳಿಯನನ್ನು ತನ್ನ ರಿವಾಲ್ವರ್‌ನಿಂದ ಗುಂಡಿಕ್ಕಿ ಬಳಿಕ ತಾನೂ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಮೃತರನ್ನು ಎಸಿಪಿ ಭರತ್ ಗಾಯಕ್ವಾಡ್, ಅವರ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ.ಬಾನೇರ್ ಪ್ರದೇಶದ ಅವರ ಬಂಗಲೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಹಿಂದಿರುವ ಕಾರಣ ತಿಳಿದುಬಂದಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಮತ್ತು ಸೋದರಳಿಯನೊಂದಿಗೆ ಪುಣೆಯ ಬನೇರ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಸೋಮವಾರ ಬೆಳಗಿನ ಜಾವ ಎಸಿಪಿ, ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿ ಅವರ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲು ತೆರೆದಿದ್ದಾರೆ  ಅವರು ಬಾಗಿಲು ತೆರೆದ ಕೂಡಲೆ ಸೋದರಳಿಯನ ಮೇಲೆ ಗುಂಡು ಹಾರಿಸಿ ಬಳಿಕ ತಾನು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ': ಸಿಎಂ ವ್ಯಂಗ್ಯ'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿ..!ಇಂದೇ ಅರ್ಜಿಯನ್ನು ಸಲ್ಲಿಸಿಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯಮನೆಯಲ್ಲೇ ತಯಾರಿಸಿ ಇನ್ ಸ್ಟಂಟ್ ‘ಜಿಲೇಬಿ’ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!