LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಾಕಿಸ್ತಾನಕ್ಕೆ ಭೇಟಿ ನೀಡಿದ ಜಾಕ್ ಮಾ..!

ಇಸ್ಲಾಮಾಬಾದ್‌ :ಚೀನಾದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್‌ನ ಸಹ-ಸಂಸ್ಥಾಪಕ ಜಾಕ್ ಮಾ ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಈ ಕುರಿತು ಪಾಕಿಸ್ತಾನ ಮೂಲದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಜಾಕ್ ಮಾ ಅವರು ಜೂನ್ 29 ರಂದು ಲಾಹೋರ್‌ಗೆ ಆಗಮಿಸಿ ಸುಮಾರು 23 ಗಂಟೆಗಳ ಕಾಲ ಅಲ್ಲಿದ್ದರು ಎಂದು ಬೋರ್ಡ್ ಆಫ್ ಇನ್ವೆಸ್ಟ್‌ಮೆಂಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಅಜ್ಫರ್ ಅಹ್ಸನ್ ಹೇಳಿರುವುದಾಗಿ ಪತ್ರಿಕಾ ವರದಿ ತಿಳಿಸಿದೆ. ಜಾಕ್ ಮಾ ಭೇಟಿ ನೀಡಿ ಖಾಸಗಿ ಸ್ಥಳದಲ್ಲಿ ನೆಲೆಸಿದ್ದರು ಎನ್ನಲಾಗುತ್ತಿದೆ.

https://bcsuddi.com/%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf-%e0%b2%95%e0%b2%9a%e0%b3%87%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%87-%e0%b2%ae%e0%b3%81%e0%b2%96%e0%b2%82%e0%b2%a1/

ಮಾ ಅವರ ಅನಿರೀಕ್ಷಿತ ಭೇಟಿಯ ಉದ್ದೇಶವು ಗೌಪ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಪಾಕಿಸ್ತಾನಕ್ಕೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಅಹ್ಸಾನ್ ಭರವಸೆ ವ್ಯಕ್ತಪಡಿಸಿದ್ದಾರೆ. ಐದು ಚೀನೀಯರು , ಒಬ್ಬ ಡ್ಯಾನಿಶ್ ವ್ಯಕ್ತಿ ಮತ್ತು ಒಬ್ಬ ಯುಎಸ್ ಪ್ರಜೆಯನ್ನು ಒಳಗೊಂಡ ಏಳು ಉದ್ಯಮಿಗಳ ನಿಯೋಗದೊಂದಿಗೆ ಮಾ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

ಜಾಕ್ ಮಾ ಮತ್ತು ಅವರ ತಂಡ ಭೇಟಿ ನೀಡಿದ ನಂತರ ಪಾಕಿಸ್ತಾನದಲ್ಲಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಅವರು ವ್ಯಾಪಾರ ಕೇಂದ್ರಗಳಿಗೆ ಭೇಟಿನ ನೀಡಿ, ವಿವಿಧ ವಾಣಿಜ್ಯ ಮಂಡಳಿಗಳ ಪ್ರಮುಖ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಯಾವುದೇ ನಿರ್ದಿಷ್ಟ ವ್ಯಾಪಾರ ವ್ಯವಹಾರಗಳು ಅಥವಾ ಸಭೆಗಳ ಬಗ್ಗೆ ಯಾವುದೇ ದೃಢೀಕೃತ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ ಮಾ ಅವರ ಭೇಟಿ ವೈಯಕ್ತಿಕ ಉದ್ದೇಶಗಳಿಗಾಗಿತ್ತು ಎಂದು ಅಹ್ಸಾನ್ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ , ಸುನಾಮಿ ಎಚ್ಚರಿಕೆನಾನು ಅಮ್ಮನಾಗುತ್ತಿದ್ದೇನೆ - ಗುಡ್​ ನ್ಯೂಸ್ ನೀಡಿದ ನಟಿ ಅದಿತಿ ಪ್ರಭುದೇವ'ರಾಮ ಮಂದಿರಕ್ಕೆ ನಮ್ಮ ಸರ್ಕಾರ, ಪಕ್ಷದ ಸಂಪೂರ್ಣ ಬೆಂಬಲವಿದೆ' - ಸಿಎಂ ಸಿದ್ದರಾಮಯ್ಯಅಯೋಧ್ಯೆ ರಾಮಮಂದಿರ ಉದ್ಘಾಟನೆ - ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಮಂತ್ರ ಪಠಿಸಲು ಕರೆ5500 ದೈಹಿಕ ಶಿಕ್ಷಕರು ಸೇರಿದಂತೆ 40,000 ಶಿಕ್ಷಕರನ್ನು ನೇಮಕಕ್ಕೆ ನಿರ್ಧಾರ..!ರೈತರ ಸಾಲಮನ್ನಾ ಯೋಜನೆಯ ಫಲನುಭವಿಗಳ ಪಟ್ಟಿ ಬಿಡುಗಡೆ..!ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆಸೌರ ಮೇಲ್ಛಾವಣಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ..!ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎ