ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ತಂದೆ ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿದ್ದ ವ್ಯಕ್ತಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ (60) ನಾಪತ್ತೆಯಾದ ವ್ಯಕ್ತಿ.
https://bcsuddi.com/%e0%b2%87%e0%b2%82%e0%b2%a6%e0%b3%81-%e0%b2%aa%e0%b3%8d%e0%b2%b0%e0%b2%a7%e0%b2%be%e0%b2%a8%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%a8%e0%b3%87%e0%b2%a4%e0%b3%83%e0%b2%a4%e0%b3%8d/
ಸಂಪ್ಯ ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿಕೊಟ್ಟ ಘಟನೆ ನಡೆದಿದೆ. ಪಿ ಎಸ್ ಐ ಧನಂಜಯ ಬಿ.ಸಿ ಮಾರ್ಗದರ್ಶನದಂತೆ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ಮುನಿಯ ನಾಯ್ಕ , ಅದ್ರಾಮ್, ಪ್ರಶಾಂತ ಅವರು ಉಮ್ಮರ್‌ರನ್ನು ಸಂಬಂಧಿಕರ ಸಹಕಾರದೊಂದಿಗೆ ಮಂಗಳೂರಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ಮಗನಾದ ಆಸೀಫ್ ರವರೊಂದಿಗೆ ಕಳುಹಿಸಿಕೊಟ್ಟರು.