LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪೈಪ್ ನಲ್ಲಿ ಅಮೋನಿಯಾ ಗ್ಯಾಸ್‌ ಸೋರಿಕೆ- ಆರು ಮಂದಿ ಅಸ್ವಸ್ಥ

ಚೆನ್ನೈ: ತಮಿಳುನಾಡು ಸಮೀಪದ ಎನ್ನೋ ರ್ ನಲ್ಲಿ ರಸಗೊಬ್ಬರ ತಯಾರಿಕಾ ಘಟಕದ ಪೈಪ್ ನಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ ಆರು ಮಂದಿ ಅಸ್ವಸ್ಥಗೊಂಡ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಅಸ್ವಸ್ಥಗೊಂಡ ಆರು ಮಂದಿ ಚಿಕಿತ್ಸೆಯ ಬಳಿಕ ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ. ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಸಮುದ್ರ ಸಮೀಪ ಹಾದು ಹೋಗಿದ್ದ ಪೈಪ್ ನಿಂದ ಅಮೋನಿಯಾ ಗ್ಯಾಸ್‌ ಸೋರಿಕೆ ಆಗಿದ್ದು, ಈ ಸಂದರ್ಭದಲ್ಲಿ ಸಮೀಪದಲ್ಲಿ ವಾಸವಾಗಿದ್ದ ನಿವಾಸಿಗಳು ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆ ಒಳಗಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳೀಯರ ದೂರನ್ನು ಆಲಿಸಿದ ನಂತರ ಅಮೋನಿಯಾ ಗ್ಯಾಸ್ ಪೈಪ್ ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ, ಅದನ್ನು ಸರಿಪಡಿಸಲಾಗಿದೆ ಎಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ಹೇಳಿದೆ.

ಆವಡಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಅವರು ಎಕ್ಸ್ ನಲ್ಲಿ ಮಾಹಿತಿ ನೀಡಿ, ಯಾರೂ ಕೂಡಾ ಗಾಬರಿಯಾಗಬೇಕಾಗಿಲ್ಲ. ಎನ್ನೋ ರ್ ನಲ್ಲಿನ ಅಮೋನಿಯಾ ಗ್ಯಾಸ್ ಸೋರಿಕೆ ನಿಂತಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದಾಗಿದೆ . ಅಲ್ಲದೇ ತುರ್ತು ಸೇವೆಗಾಗಿ ಸ್ಥಳದಲ್ಲಿ ಮೆಡಿಕಲ್ ಮತ್ತು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಆವಡಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಅವರು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ ಗಳ ಸಾಮೂಹಿಕ ರಜೆ; 78 ವಿಮಾನಗಳು ರದ್ದುಡಬಲ್ ಮರ್ಡರ್ : ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರಕೋವಿಶೀಲ್ಡ್ ಲಸಿಕೆಗಳನ್ನು ಹಿಂಪಡೆಯಲು ಅಸ್ಟ್ರಾಜೆನೆಕಾ ನಿರ್ಧಾರಪಾದದ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯಉತ್ತರಾಣಿ ಗಿಡದ ಬೇರಿನಿಂದ ನೀವು ಕುಬೇರರಾಗಬಹುದು ಸಕಲ ಸಮಸ್ಯೆಗಳಿಗೂ ಈ ವನಸ್ಪತಿಯಿಂದ ಪರಿಹಾರ ಶತಸಿದ್ಧ!ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಮಹತ್ವ ಸುದ್ದಿ.!ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪ್ರಮಾಣ ಮತದಾನವಾಗಿದೆ.?ಎರಡನೇ ಹಂತದ ಚುನಾವಣೆಯಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ.?ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ.!ಕೈಮಗ್ಗ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ