E-PAPER
17 Nov 2026, 12:24:03 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರಕೃತಿಯನ್ನು ಪ್ರೀತಿಸಿದ ಜನಪದಕ್ಕೂ ಶರಣತತ್ವಕ್ಕೂ ಸಾಮ್ಯತೆಯಿದೆ : ಡಾ.ರಾಜೇಶ್ವರಿ ಹಿರೇಮಠ

ಬೆಳಗಾವಿ-05: ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಲಿಂಗಾಯತ ಸಂಘಟನೆಯಿಂದ ರವಿವಾರ ದಿ.04-10-2026 ರಂದು ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜೇಶ್ವರಿ ಹಿರೇಮಠ ಅವರು ʼಜಾನಪದ ಸಿರಿʼ ಎಂಬ ವಿಷಯ ಕುರಿತು ಉಪನ್ಯಾಸ ಮಂಡಿಸಿದರು.

ಮಾನವ ಜನಾಂಗದ ಹುಟ್ಟಿನಿಂದಲೇ ಜನಪದ ಹುಟ್ಟಿದ್ದು, ಜನರಿಂದ ಜನರಿಗೆ ಬಾಯಿಂದ ಬಾಯಿಗೆ ಹರಿದು ಬಂದಿದೆ. ಈ ರೀತಿ ಸಾಮಾನ್ಯ ಜನರಿಂದ ಜನರಿಗೆ ಹರಿದು ಬಂದುದೇ ʼಜನಪದʼ ಸಾಹಿತ್ಯವಾಗಿದೆ. ಈ ಜನಪದರ ಸಂಸ್ಕೃತಿ, ಜೀವನ ಪದ್ಧತಿ, ಆಚಾರ, ವಿಚಾರಗಳನ್ನು ಅಧ್ಯಯನ ಮಾಡುವುದೇ “ಜಾನಪದ” ಸಾಹಿತ್ಯವೆಂದು ಅವುಗಳ ನಡುವಿನ ವ್ಯತ್ಯಾಸವನ್ನು ಉಪನ್ಯಾಸಕರು ತಿಳಿಸಿದರು. ಜನಪದರು ದೇವರನ್ನು ಅತಿಯಾಗಿ ನಂಬಿದವರು ಆದರೆ ಅವರು ಗುಡಿಗಳನ್ನು ಕಟ್ಟಲಿಲ್ಲ, ಬಸವಾದಿ ಶರಣರಂತೆ ನಿಸರ್ಗವನ್ನೇ ದೇವರೆಂದು ಕಂಡವರು. ಅವರು ತಮ್ಮ ಜೀವನದ ಅನುಭವಗಳನ್ನು ಸರಳವಾಗಿ ನೇರವಾಗಿ ಪದಗಳನ್ನಾಗಿಸಿದರು. ಅದರಿಂದ ಮೂಡಿಬಂದ ನಂಬಿಕೆಗಳನ್ನು ಸಾರಿದರೇ ವಿನಾ: ಮೂಢನಂಬಿಕೆಗಳನ್ನು ಭಿತ್ತಲಿಲ್ಲ. ಎಲ್ಲಿಯೂ ಎಂದಿಗೂ ಜನಪದರು ತಮ್ಮ ಹೆಸರನ್ನು ಉಲ್ಲೇಖಿಸದೇ ಯಾವುದೇ ಪ್ರತಿಫಲ ಬಯಸದೇ ಅದ್ಭುತ ತತ್ವಸಂದೇಶಗಳನ್ನು ಕೊಟ್ಟಿದ್ದಾರೆ. ಅಂತಹ ಹಲವಾರು ಜನಪದ ಗೀತೆಗಳನ್ನು ಗಾದೆಮಾತುಗಳನ್ನು ಹಾಸ್ಯರೂಪದಲ್ಲಿ ಮನಮುಟ್ಟುವಂತೆ ವಿವರಿಸಿ, ಡಾ.ರಾಜೇಶ್ವರಿ ಹಿರೇಮಠ ಅವರು ನೆರೆದಿದ್ದ ಶರಣರನ್ನು ರಂಜಿಸಿದರು.
ಸುರೇಶ ನರಗುoದ ಅವರ ಪ್ರಾಥ೯ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೂರೆಯಿತು. ಆರಂಭದಲ್ಲಿ ಶoಕರ ಗುಡಸ, ಆನoದ ಕರಕಿ, ದ್ರಾಕ್ಷಾಯಣಿ ಪೂಜಾರ, ಜಯಶ್ರೀ ಚವಲಗಿ ವಚನ ವಿಶ್ಲೇಷನೆ ಮಾಡಿದರು. ಶಿವಕುಮಾರ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು.
ಕಾರ್ಯಕ್ರಮದ ವಿಶೇಷ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಜೋತಿ೯ಲಿoಗ ಹೊನಕಟ್ಟಿ ಪೊಲೀಸ್ ಇಲಾಖೆ ಅವರು ಜನಪದ ಗೀತೆಯನ್ನು ಹಾಡಿ ಎಲ್ಲರ ಮನ ಸೊರೆಗೂಂಡರು.
ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ಸ್ವಾಗತಿಸಿದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ.ಶಾಂತಾ ಚಿನಿವಾಲರ ದಾಸೋಹ ಸೇವೆಗೈದರು.
ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಶಿವಾನoದ ನಾಯಕ, ಶಿವಪುತ್ರಯ್ಯ ಪೂಜಾರ, ಪ. ಬ. ಕರಿಕಟ್ಟಿ, ಶೇಖರ ವಾಲಿ ಇಟಗಿ, ಶ್ರೀದೇವಿ ನರಗುoದ, ಸುವಣಾ೯ ಗುಡಸ, ನoದಾ ಬಗಲಿ, ಶಿವಲೀಲಾ ಗೌಡರ, ಸುದೀರ ರಘಶೆಟ್ಟಿ, ಗುರಸಿದ್ದ ರೇವಣ್ಣವರ, ಬಾಬಣ್ಣ ತಿಗಡಿ, ಮಹದೇವ ಕೆoಪಿಗೌಡರ ದoಪತಿ, ಮುಂತಾದ ಶರಣ ಶರಣೆಯರು ಕನ್ನಡಾಭಿಮಾನಿಗಳು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.