LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ'- ಪ್ರಧಾನಿ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ಕೋಲಾರ: ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿರುವ ಅವರು, ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಜೂ.4 ಕ್ಕೆ ನಾವು ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು . ದೇವರಲ್ಲಿ ಕೈ ಮುಗಿದು ಬೇಡಿಕೊಂಡಿದ್ದೇವೆ. ಇಂದಿರಾ ಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ. ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಆದರೆ ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ಪ್ರಧಾನಿ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದ್ದಾರೆ.

ದೇವೇಗೌಡರ ನೆರಳಿಗೆ ಹೋಗಿ ಬದುಕಿ ಚೆನ್ನಾಗಿ ಆದವರು ಯಾರೂ ಇಲ್ಲ. ಚೆನ್ನಾಗಿ ಬದುಕಿದವರಿಗೇನು ಈ ಗತಿ ಬಂತು ಎಂದು ನನಗೆ ದುಃಖವಾಗುತ್ತಿದೆ. ರೈತನ ಮಗ ಎಂದು ಪ್ರಧಾನಿ ಮಾಡಿದ್ದೆವು. ಆತನ ಮಗ ಮುಖ್ಯಮಂತ್ರಿಯಾಗಿದ್ದರು. ಇವರು ಸೇರಿದ್ದು ಬಿಜೆಪಿ ಜೊತೆಗೆ. ಒಬ್ಬ ಪ್ರಧಾನ ಮಂತ್ರಿ, ಒಬ್ಬ ಮುಖ್ಯಮಂತ್ರಿ ಮೂರು ಸೀಟುಗಳನ್ನ ತೆಗೆದುಕೊಂಡಿದ್ದಾರೆ ಈ ಬಾರಿ. ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ ಎಂದು ವ್ಯಂಗ್ಯವಾಡಿದ್ದಾರೆ.

ಅಳಿಯನನ್ನು ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ರು. ಹಣೆಬರಹಕ್ಕೆ ಅವರ ಹತ್ತಿರ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ದೇವೇಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST