LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರೀತಿಗೆ ವಿರೋಧಿಸಿದ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

ವಾರಣಾಸಿ: ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದಿರುವುದಾಗಿ ಒಪ್ಪಿಕೊಂಡ 15 ವರ್ಷದ ಬಾಲಕನನ್ನು ಗಾಜಿಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜುಲೈ 7 ಮತ್ತು 8 ರ ಮಧ್ಯರಾತ್ರಿ ಘಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮವನ್ನು ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ಪ್ರಕರಣದ ಬೆನ್ನುಹಚ್ಚಿದ ಪೊಲೀಸರು ಇದೀಗ ಬಾಲಾಪರಾಧಿಯನ್ನು ಬಂಧಿಸಿದ್ದಾರೆ. ತನ್ನ ಸ್ವಂತ ತಂದೆ ತಾಯಿ ಹಾಗೂ ಸಹೋದರ ಕತ್ತು ಸೀಳಲು ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ . ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್(40) ಮತ್ತು ಸಹೋದರನ ಹತ್ಯೆ ಮಾಡಿದ್ದಾನೆ.

ಕೆಲ ದಿನಗಳ ಹಿಒಂದೆಯೇ ಮೂವರನ್ನು ಕೊಲ್ಲಲು ನಿರ್ಧರಿಸಿದ್ದೆ, ಆದರೆ ಸಾಧ್ಯವಾಗಲಿಲ್ಲ. ಭಾನುವಾರ ರಾತ್ರಿ, ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದಾಗ ಮದ್ಯ ಸೇವಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಂದ ಬಾಲಕ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿದ್ದಾನೆ. ಅಪರಾಧ ಮಾಡಿದ ನಂತರ, ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ಚಾಕುವನ್ನು ಬಚ್ಚಿಟ್ಟು ಹತ್ತಿರದ ಮದುವೆಯ ಪೂರ್ವ ಸಮಾರಂಭದಲ್ಲಿಆರ್ಕೆಸ್ಟ್ರಾ ಪ್ರದರ್ಶನವನ್ನು ನೋಡಲು ಹೋಗಿದ್ದಾನೆ. ಬಳಿಕ ಬೆಳಗಿನ ಜಾವ 1.45 ರ ಸುಮಾರಿಗೆ ಮನೆಗೆ ಹಿಂದಿರುಗಿದ ಬಾಲಕ ಮನೆಯವರನ್ನು ಯಾರೋ ಕೊಂದು ಹೋಗಿರುವುದಾಗಿ ಗ್ರಾಮಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ಪೊಲೀಸ್​​ ವಿಚಾರಣೆ ವೇಳೆ ಬಾಲಕ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ – ಹುಬ್ಬಳ್ಳಿ ಜಂಕ್ಷನ್‌ಗೆ ಗಿನ್ನೆಸ್ ದಾಖಲೆ ಗೌರವ!ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನ; ಕೊಲೆ ಆರೋಪಿಯ ಕಾಲಿಗೆ ಗುಂಡೇಟು'ವಂದೇ ಭಾರತ್ ಮೇಲ್ದರ್ಜೆಗೆ ಕ್ರಮ; 1,300 ರೈಲು ನಿಲ್ದಾಣಗಳ ಪುನರ್ನಿರ್ಮಾಣ'- ಸಚಿವ ಅಶ್ವಿನಿ ವೈಷ್ಣವ್ಆರೋಗ್ಯ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಜ್ಯೂಸ್ಇಷ್ಟು ಕಡಿಮೆ ಬಟ್ಟೆ ಹಾಕಿದ್ರೆ ಅತ್ಯಾಚಾರ ಮಾಡ್ತೀನಿ: ಮಹಿಳೆಗೆ ಆಟೋ ಚಾಲಕನ ಬೆದರಿಕೆ!ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಜೇಮ್ಸ್ ವಾಟ್ಸನ್ ವಿಧಿವಶಶಾಂತಿ ಮಾತುಕತೆ ವಿಫಲ: 'ನಾವು ಯುದ್ಧಕ್ಕೆ ಸಿದ್ಧ'- ಪಾಕ್‌ಗೆ ಅಫ್ಘಾನ್ ಖಡಕ್ ವಾರ್ನಿಂಗ್ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: 'ಉಸ್ತುವಾರಿ ವಿರುದ್ಧ ಕ್ರಮ'- ಪರಮೇಶ್ವರ್ ಕಿಡಿಹೆಲ್ಮೆಟ್ ಧರಿಸದೆ ಹೋದ ಸ್ಕೂಟರ್ ಸವಾರ: 20 ಲಕ್ಷ ದಂಡ – ರಶೀದಿ ನೋಡಿ ಸವಾರ ಶಾಕ್4ನೇ ಬಾರಿಗೆ ಯುಪಿಎಸ್‌ಸಿ ಬರೆದು 18ನೇ ರ‍್ಯಾಂಕ್ ಪಡೆದ ಐಎಎಸ್ ರವಿ ಕುಮಾರ್ ಸಿಹಾಗ್