LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರೇಗ್ ವಿಶ್ವವಿದ್ಯಾನಿಲಯದಲ್ಲಿ ಗುಂಡಿನ ದಾಳಿ: 15 ಮಂದಿ ಸಾವು

ಪ್ರೇಗ್‌: ಜೆಕ್ ಗಣರಾಜ್ಯದ ಪ್ರೇಗ್‌ನ ಚಾರ್ಲ್ಸ್​​ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಡೇವಿಡ್ ಕೊಜಾಕ್ ತನ್ನ ಸಹಪಾಠಿಗಳನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆಗೂ ಮೊದಲೇ ಸ್ವಂತ ತಂದೆಯನ್ನು ಮನೆಯಲ್ಲಿಯೇ ಹತ್ಯೆ ಮಾಡಿ ಬಳಿಕ ವಿಶ್ವವಿದ್ಯಾಲಯದಲ್ಲಿ15 ಮಂದಿಯನ್ನು ಹತ್ಯೆ ಮಾಡಿದ್ದಾನೆ.

ಪ್ರೇಗ್ ವಿಶ್ವವಿದ್ಯಾನಿಲಯದಲ್ಲಿ ಡೇವಿಡ್ ಕೋಜಾಕ್ ತನ್ನ ಸಹ ವಿದ್ಯಾರ್ಥಿಗಳ ಮೇಲೆ ಏಕೆ ಗುಂಡು ಹಾರಿಸಲು ಯತ್ನಿಸಿದನು ಎಂಬುದು ತಿಳಿದಿಲ್ಲ. ಅದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ, ಡೇವಿಡ್‌ಗೆ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧವಿದೆ ಎಂಬುದಕ್ಕೆ ಯಾವುದೇ ಲಕ್ಷಣಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಗ್ ​ನ ಸ್ಥಳೀಯ ಮಾಧ್ಯಮಗಳ ಪ್ರಕಾರ ಆರೋಪಿ ಡೇವಿಡ್ ಕೋಜಾಕ್​ನ ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ಆತನ ವ್ಯತಿರಿಕ್ತ ವರ್ತನೆಗೆ ಸುಳಿವು ನೀಡುವಂತಿವೆ. ದಾಳಿಗೆ ಮುನ್ನ ಆತ ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಸಾಮೂಹಿಕ ಹತ್ಯೆ ಮಾಡುವ ರೀತಿಯ ವಿಚಾರಗಳನ್ನು ಪ್ರಸ್ತಾಪಿಸಿದ್ದನೆನ್ನಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ನಿರುದ್ಯೋಗಿ ಯುವಕ -ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿ ಪ್ರಧಾನಿಯೇ ಆಗಬೇಕಿತ್ತಾ'- ಸಿ.ಎಂನೇಹಾ ಹತ್ಯೆ ಖಂಡಿಸಿ ಏಪ್ರಿಲ್ 22ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ.!ಈ ದಿನಗಳಲ್ಲಿ ಮದ್ಯ ಮಾರಾಟ ನಿಷೇಧ23 ರಂದು ಚುನಾವಣಾ ಹಿನ್ನೆಲೆ ಪ್ರಿಯಾOಕಾ ಗಾಂಧಿ ದುರ್ಗಕ್ಕೆಬೆಂಗಳೂರು: ಸ್ಟಾರ್ ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟನೇಹಾ ಕೊಲೆ ಪ್ರಕರಣ: ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ- ಬಾಯಿಬಿಟ್ಟ ಫಯಾಜ್'ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ'- ಪ್ರಧಾನಿ ವಿರುದ್ಧ ರಮೇಶ್‌ ಕುಮಾರ್‌ ಕಿಡಿ5 ವರ್ಷಗಳಲ್ಲೇ ಅಮಿತ್ ಶಾ ಆಸ್ತಿ ದ್ವಿಗುಣ.! - ಅಫಿಡವಿಟ್‌ನಲ್ಲಿ ಬಹಿರಂಗಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ- 9 ಮಂದಿ ಸಾವು