LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

‘ಪ್ಲಾಸ್ಟಿಕ್ ಸರ್ಜರಿ’ ಎಫೆಕ್ಟ್ : ದುರಂತ ಅಂತ್ಯ ಕಂಡ 43 ವರ್ಷದ ಖ್ಯಾತ ನಟಿ

ಅರ್ಜೆಂಟೀನಾದ ರೂಪದರ್ಶಿ ಮತ್ತು ನಟಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಅಡ್ಡಪರಿಣಾಮದಿಂದ 43 ವರ್ಷಕ್ಕೆ ಮೃತಪಟ್ಟಿದ್ದಾರೆ. ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿರುವ ಪಾಲಿಮಿಥೈಲ್ಮೆಥಾಕ್ರಿಲೇಟ್ ಚುಚ್ಚು ಮದ್ದನ್ನು ಸರ್ಜರಿ ಸಮಯದಲ್ಲಿ ನಟಿಗೆ ನೀಡಲಾಗಿತ್ತು. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ಲೂನಾ ಸಾಯುವ ಕೆಲವು ವಾರಗಳ ಮೊದಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಆದಾಗ್ಯೂ, ಶಸ್ತ್ರಚಿಕಿತ್ಸೆಯು ಅಪಾಯಕಾರಿ ತಿರುವು ಪಡೆದುಕೊಂಡಿತು. ಇದು ಮೂತ್ರಪಿಂಡ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಅವರನ್ನು ಉಳಿಸಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಆಗಲಿಲ್ಲ. ಇದಲ್ಲದೇ ಲೂನಾಗೆ 2015ರಲ್ಲಿ ಅವರಿಗೆ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಮೂತ್ರಪಿಂಡದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿ ಅವರು ಚಿಕಿತ್ಸೆ ಪಡೆದಿದ್ದರು. ನಂತರ ವೈದ್ಯರು ಆಕೆಗೆ ಮೂತ್ರಪಿಂಡದ ಕೊರತೆ ಮತ್ತು ಹೈಪರ್ಕಾಲ್ಸೆಮಿಯಾ ಇದೆ ಎಂದು ಪತ್ತೆಹಚ್ಚಿದರು ಮತ್ತು ಮೂತ್ರಪಿಂಡ ಕಸಿ ಪಡೆಯುವವರೆಗೆ ಸಾಪ್ತಾಹಿಕ ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ನಿಧನನಾಡಿದ್ದು, ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಸಭೆ- ಬಿ.ವೈ.ವಿಜಯೇಂದ್ರಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? - ಇನ್ನು ಮುಂದೆ ಇರಲಿ ಎಚ್ಚರ..!ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಬಿದ್ದ 400 ಕೆ ಜಿ ತೂಕದ ಬೃಹತ್ ಮೀನುಉಡುಪಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ ಲೈನ್‌ಮ್ಯಾನ್ ಸಾವುಕೇರಳದ ನಾಪತ್ತೆಯಾಗಿದ್ದ 21 ಮಂದಿ ಐಎಸ್‌ಗೆ ಸೇರ್ಪಡೆ..!ಉಗ್ರರ ಗುಂಡಿಗೆ ನಿವೃತ್ತ ಪೊಲೀಸ್ ಅಧಿಕಾರಿ ಬಲಿಉಪನ್ಯಾಸ ನೀಡುತ್ತಿರುವ ವೇಳೆ ಹೃದಯಾಘಾತ- ಕುಸಿದು ಬಿದ್ದು ಪ್ರಾಧ್ಯಾಪಕ ಸಾವು