ಬಂಟ್ವಾಳ: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಫ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
https://bcsuddi.com/%e0%b2%97%e0%b3%83%e0%b2%b9%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86%e0%b2%97%e0%b3%86-%e0%b2%85%e0%b2%b0%e0%b3%8d%e0%b2%9c%e0%b2%bf/
ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದೆ. ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ.ಮೌಲ್ಯದ ಮೆಷಿನರಿಗಳು ಇದ್ದು, ಬೆಂಕಿ ಹಚ್ಚಿಕೊಂಡಿದೆ. ಇದರ ಜೊತೆಗೆ ಲಕ್ಷಾಂತರ ರೂ ಗಳ ತಲೆದಿಂಬು ಹಾಗೂ ಹಾಸಿಗೆಗಳು ದಸ್ತಾನು ಇದ್ದವು. ಸದ್ಯ ದಾಸ್ತಾನು ಕೊಠಡಿಗೆ ಬೆಂಕಿ ಹಚ್ಚಿಕೊಂಡಿದೆಯಾದರೂ ದೊಡ್ಡ ಮಟ್ಟದಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ನೀರು ಹಾಯಿಸಿ ತಡೆಯಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು , ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.