ಬೆಂಗಳೂರು : ಆಟವಾಡಲು ತೆರಳಿದ ಸಹೋದರರು ಕೃಷಿಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ.ಅತ್ತಿಬೆಲೆ ಗ್ರಾಮದ ಬಳಿ ಶಿವಂ (9) ಸುಶಾಂತ್ (6) ಮೃತಪಟ್ಟವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ.
ನೇಪಾಳ ಮೂಲದ ಲಲಿತ್ ಜಾನಕಿ ದಂಪತಿ ಮಕ್ಕಳಾದ ಶಿವಂ ಸುಶಾಂತ್ ಹೆದ್ದಾರಿ ಬಳಿ ಇರುವ ಹೋಟೆಲ್ನಲ್ಲಿ ತಂದೆ-ತಾಯಿ ಕೆಲಸ ಮಾಡಿಕೊಂಡು ಇದ್ದರು ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದಾಗ ಕಾಣೆಯಾದ ಮಕ್ಕಳನ್ನು ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ. ಮಕ್ಕಳು ಕಾಣಿಸುತ್ತಿದ್ದಾಗ ಸುತ್ತಮುತ್ತಲು ಹುಡುಕಿದ್ದಾರೆ ಶಿವ ಮತ್ತು ಸುಶಾಂತ್ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಈ ಗುರುತು ಪ್ರಕರಣ ದಾಖಲಾಗಿದೆ.