LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬರೋಬ್ಬರಿ 28 ಕೋಟಿಗೆ ಬಿಡ್ ಆದ ರಕ್ತ ಚಂದನ….!!

ಮಂಗಳೂರು: ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್‌ಲೈನ್‌ನಲ್ಲಿ ಮೂರು ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರು.ಗೆ ಬಿಡ್‌ನಲ್ಲಿ ಖರೀದಿಸಿವೆ.

4 ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ರಕ್ತ ಚಂದನ ವಶಪಡಿಸಿಕೊಂಡಿದ್ದರು. ಇದರಲ್ಲಿ ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು. ಮಂಗಳೂರು ಬ೦ದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನ ಇದಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್‌ ಲೈನ್ ಮೂಲಕ ಹರಾಜು ಹಾಕಿದೆ.



2014 ಆ.21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿದ್ದರು. 2020ರ ಜ.10ರಂದು ಥಾಯ್ಲೆಂಡ್‌ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರು. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. 2022ರ ಜೂ.3ರಂದು ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ವಿಂಗಡಣೆ ಯತ್ನಿಸುತ್ತಿದ್ದ 4.14 ಕೋಟಿ ರು. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು.

ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ 10 ಲಾಟ್‌ಗೆ 14.5 ಕೋಟಿ ರು. ಬಿಡ್ ಹಾಗೂ ಯಮಾ ರಿಬನ್ಸ್ ಏಜೆನ್ಸಿ ಲಾಟ್‌ಗೆ 4.2 ಕೋಟಿ ರು. ಬಿಡ್ ಜತೆಗೆ ಅಕ್ಷಾ 3 ಲಾಟ್‌ 1.6 ಕೋಟಿ ರು. ಬಿಡ್‌ಗೆ ಖರೀದಿ ಮಾಡಿದೆ.


ಮೂರು ಬಿಡ್‌ಗಳ ಒಟ್ಟು ಮೊತ್ತ ತೆರಿಗೆ ಸೇರಿ 28 ಕೋಟಿ ರು ಆಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಯೋಧ್ಯೆ ರಾಮ ಮಂದಿರ ಮತ್ತು ಯೋಗಿ ಆದಿತ್ಯನಾಥ್​ಗೆ ಬಾಂಬ್ ದಾಳಿ ಬೆದರಿಕೆ..!ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ , ಸುನಾಮಿ ಎಚ್ಚರಿಕೆನಾನು ಅಮ್ಮನಾಗುತ್ತಿದ್ದೇನೆ - ಗುಡ್​ ನ್ಯೂಸ್ ನೀಡಿದ ನಟಿ ಅದಿತಿ ಪ್ರಭುದೇವ'ರಾಮ ಮಂದಿರಕ್ಕೆ ನಮ್ಮ ಸರ್ಕಾರ, ಪಕ್ಷದ ಸಂಪೂರ್ಣ ಬೆಂಬಲವಿದೆ' - ಸಿಎಂ ಸಿದ್ದರಾಮಯ್ಯಅಯೋಧ್ಯೆ ರಾಮಮಂದಿರ ಉದ್ಘಾಟನೆ - ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಮಂತ್ರ ಪಠಿಸಲು ಕರೆ5500 ದೈಹಿಕ ಶಿಕ್ಷಕರು ಸೇರಿದಂತೆ 40,000 ಶಿಕ್ಷಕರನ್ನು ನೇಮಕಕ್ಕೆ ನಿರ್ಧಾರ..!ರೈತರ ಸಾಲಮನ್ನಾ ಯೋಜನೆಯ ಫಲನುಭವಿಗಳ ಪಟ್ಟಿ ಬಿಡುಗಡೆ..!ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆಸೌರ ಮೇಲ್ಛಾವಣಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ..!ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ