E-PAPER
17 Nov 2026, 12:23:38 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಸವಣ್ಣನವರ ಸಿದ್ಧಾಂತಗಳು ವಿಶ್ವ ಮಾನವ ಕುಲಕ್ಕೆ ದಾರಿ ದೀಪ: ಶ್ರೀ ಸಿದ್ಧಬಸವ ದೇವರು

ಬೋರಗಲ್ಲ ಗ್ರಾಮದಲ್ಲಿ ಶ್ರೀಗಳಿಂದ ಐದು ದಿನ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ

 

ಹುಕ್ಕೇರಿ-೨೦: ಬಸವಣ್ಣನವರ ಸಿದ್ಧಾಂತಗಳು ವಿಶ್ವ ಮಾನವ ಕುಲಕ್ಕೆ ದಾರಿ ದೀಪವಾಗಿದ್ದು, ಶರಣರ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ. ದೇಶ ಅಭಿವೃದ್ಧಿಯತ್ತ ಸಾಗಲು ಸಹಕಾರಿ ಆಗಲಿದೆ ಎಂದು ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ಹೇಳಿದರು.

ತಾಲೂಕಿನ ಬೋರಗಲ್ಲ ಗ್ರಾಮದ ಸುಪುತ್ರರಾದ ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಜಗದ್ಗುರು ಶೂನ್ಯ ಸಂಪಾದನ ಶ್ರೀ ಸಿದ್ಧಬಸವ ದೇವರು ಪುರಪ್ರವೇಶ ನಿಮಿತ್ತವಾಗಿ ಬೋರಗಲ್ಲ ಗ್ರಾಮದಲ್ಲಿ ಆಯೋಜಿಸಿದ್ದ ಐದು ದಿನಗಳ ʻʻಜೀವನ ದರ್ಶನ ಆಧ್ಯಾತ್ಮಿಕ ಪ್ರವಚನʼʼ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದರು.

'ಭಗವಂತನ ಸಾಕ್ಷಾತ್ಕಾರ ದೊರಕಬೇಕೆಂದರೆ ಭಕ್ತಿ ಮಾರ್ಗವೊಂದೇ ಸೂಕ್ತವಾದ ಆಯ್ಕೆ. ಶರಣರ ಸನ್ಮಾರ್ಗದಲ್ಲಿ ಸಾಗಿ ಉತ್ತಮವಾದ ಸಂಸ್ಕಾರದಿಂದ ನೆಮ್ಮದಿಯನ್ನು ಪಡೆದುಕೊಳ್ಳಿ. ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಆಧ್ಯಾತ್ಮಿಕ ಭಕ್ತಿ ಮಾರ್ಗವನ್ನು ಅನುಸರಿಸಬೇಕು. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಜಾತೀಯತೆಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಮೊಳಗಿಸಿದ ಭಕ್ತಿ ಭಂಡಾರಿ ಬಸವಣ್ಣನವರು, ಸಮ-ಸಮಾಜಕ್ಕೆ ಶ್ರಮಿಸಿದವರು. ಇಂತಹ ಶರಣರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ,' ಎಂದು ಸಲಹೆ ನೀಡಿದರು.

ದಾನಧರ್ಮವನ್ನು ಮನುಷ್ಯ ಎಲ್ಲಿಯವರೆಗೂ ನಡೆಸಿಕೊಂಡು ಹೋಗುತ್ತಾನೋ? ಅಲ್ಲಿಯವರೆಗೂ ಧರೆಯಲ್ಲಿ ಮಳೆಬೆಳೆ ಸಮೃದ್ಧಿಯಾಗಿರುತ್ತದೆ. ಅನ್ನ ಹಾಕಿದ ಮನೆ, ಗೊಬ್ಬರ ಹಾಕಿದ ಹೊಲ ಎಂದಿಗೂ ಕೆಡುವುದಿಲ್ಲ ಎಂಬ ಸಂದೇಶವನ್ನು ಮನುಷ್ಯ ಅರಿತು ನಡೆದುಕೊಂಡಿದ್ದೆ ಆದರೆ ಆತನ ಬದುಕು ದಿನದಿಂದ ದಿನಕ್ಕೆ ಉನ್ನತಿ ಕಾಣುತ್ತದೆ. ಅಧಿಕಾರವಿದ್ದಾಗ ಜನಪರ ಸೇವೆ-ಸಂಪತ್ತು ಇದ್ದಾಗ ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸುವ ಔದರ್ಯ ಗುಣ ಮನುಷ್ಯನ ಬದುಕಿಗೆ ಗೌರವ ತಂದುಕೊಂಡುತ್ತದೆ ಎಂದರು.
ನಾವೆಲ್ಲರೂ ಬಸವಾದಿ ಶರಣ ಮಾರ್ಗದಲ್ಲಿ ಸಾಗೋಣ, ನಮಗೆ ಕಾಯಕ ವಂದೆ ಜೀವನ, ವಚನಗಳ ಮೂಲಕ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರ ಸಂದೇಶ ತಿಳಿಸಿದವರು ಬಸವಾದಿ ಶರಣರು, ಯುವ ಪೀಳಿಗೆಯ ಅವರ ಹಾಕಿಕೊಟ್ಟ ದಾರಿ ಸಾಗಬೇಕು ಎಂದು ಹೇಳಿದರು.

ಮನೆ ಮನೆಗೆ ತೆರಳಿ ಕಂತಿ ಭಿಕ್ಷಾಟನೆ ನಡೆಸಿದ ಶ್ರೀ ಸಿದ್ಧಬಸವ ದೇವರು: ತಾಲೂಕಿನ ಸುಕ್ಷೇತ್ರ ನಿಡಸೋಶಿ ವ್ಯಾಪ್ತಿಯ ಬೋರಗಲ್ಲ ಗ್ರಾಮಕ್ಕೆ ಕಾಲನಡಿಗೆ ಮೂಲಕ ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ಐದು ದಿನಗಳ ಕಾಲ ಮಠದ ಪದ್ಧತಿಯಂತೆ ಬೊರಗಲ್ಲ ಗ್ರಾಮದ ಮನೆ-ಮನೆಗೆ ತೆರಳಿ ಕಂತಿ ಭಿಕ್ಷಾಟನೆ ಮಾಡಿ, ಭಕ್ತಾಧಿಗಳಿಗೆ ಆಶೀರ್ವಚನ ನುಡಿಗಳನ್ನು ಹೇಳಿದರು.

ಭಿಕ್ಷಾಟನೆಗೆ ಬರುವ ಸಂಪ್ರದಾಯ ಅರಿತಿದ್ದ ಬೋರಗಲ್ಲ ಗ್ರಾಮಸ್ಥರು ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು, ಶ್ರೀಗಳ ಜೋಳಿಗೆಗೆ ಅಕ್ಕಿಯನ್ನು ನೀಡುವ ಮೂಲಕ ಶ್ರೀ ಸಿದ್ಧಬಸವ ದೇವರ ಸ್ವಾಮೀಗಳ ಆಶೀರ್ವಾದ ಪಡೆದರು.

ಸ್ವಾಮೀಜಿ ಭಿಕ್ಷಾಟನೆಗೆ ಬರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ರಸ್ತೆಗಳನ್ನೆಲ್ಲ ಯುವಕರು ತಳಿರು-ತೋರಣ ಗಳಿಂದ ಶೃಂಗರಿಸಿದರೆ ಇನ್ನೂ ಮಹಿಳೆಯರು ಸ್ವಾಮೀಜಿ ಸಾಗುವ ಮಾರ್ಗದುದ್ದಕ್ಕೂ ನೀರು ಹಾಕಿ ರಂಗೋಲಿ ಬಿಡಿಸಿ ಸ್ವಾಗತಿಸಿದರು.

ಚಿಂತಕರು ವೀರೇಶ ಪಾಟೀಲ ಮಾತನಾಡಿ, ಸಂಸ್ಕೃತಿ, ಸಂಸ್ಕಾರದಿಂದಲೇ ಭಾರತ ಶ್ರೀಮಂತ ರಾಷ್ಟ್ರವಾಗಿದೆ. ಇಲ್ಲಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯನ್ನು ನಾಶ ಮಾಡಲು ದುಷ್ಟರು ಬಂದು.. ಹೋದರೂ... ಆದರೆ, ಭಾರತ ಎಂದೆಂದಿಗೂ ಶ್ರೇಷ್ಠವಾಗಿದೆ ಉಳಿದಿದೆ. ಆದರೆ, ಈಗಿನ ದಿನಗಳಲ್ಲಿ ದರೊಡೆ, ಕೊಲೆಗಳು ನಡೆಯುತ್ತಿವೆ. ಬುದ್ದ ಬಸವ ಮಹಾವೀರ ಹುಟ್ಟಿದ ನಾಡಿನಲ್ಲಿ ದುಷ್ಕೃತ್ಯ ನಡೆಯುತ್ತಿರುವ ವಿಷಾದವಾಗಿದೆ. ನಾವು ಹಿರಿಯರಿಗೆ ಗೌರವ ನೀಡಬೇಕು, ನಮ್ಮ ಸಂಸ್ಕಾರ ಉಳಿಸಿಕೊಳ್ಳೊಣ. ಸಮಾಜಕ್ಕೆ ಸಮರ್ಥ ಸಂತ ನೀಡಿರುವ ತಂದೆ - ತಾಯಿಗೆ ಅಭಿನಂದನೆ ತಿಳಿಸಿದರು.

ಬಸವ ಕಲ್ಯಾಣದ ಯೋಗ ಗುರುಗಳಾದ ಲೋಕೇಶ ಗುರುಜೀ ಅವರು ಮಾತನಾಡಿ, ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ನೂರಾರು ತಾಯಂದಿರ ಕಣ್ಣಿರು ಒರೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಇದರ ಶ್ರೇಷ್ಠತೆ ಹೆತ್ತ ತಂದೆ- ತಾಯಿಗೆ ಸಲ್ಲುತ್ತದೆ. ಸಮ- ಸಮಾಜಕ್ಕೆ ಏನಾದರೂ ನೀಡಬೇಕು ಎಂದು ಶ್ರೀಗಳು ಪಣ ತೊಟ್ಟಿದ್ದಾರೆ. ಸಮಾಜಕ್ಕೆ ಯುವತರುಣ ಶ್ರೀಗಳನ್ನು ನೀಡಿರುವ ಬೋರಗಲ್ಲ ಪುಣ್ಯದ ಭೂಮಿ, ಹೃದಯವಂತ ಸಂತರ ಮನೆ ಜವಾಬ್ದಾರಿ ಊರಿನ ಮೇಲೆ ಇದೆ. ನಿತ್ಯವೂ ನಿಮ್ಮ ಸಹಾಯ-ಸಹಕಾರ ಅಗತ್ಯವಾಗಿದೆ. ಪ್ರತಿವರ್ಷವೂ ಪ್ರವಚನ ಆಯೋಜಿಸಬೇಕು. ಶ್ರೀಗಳಿಂದ ಆಶೀರ್ವಚನ ಪಡೆಯಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮಲೇಕ್ಕಾಧಿಕಾರಿಗಳು ಆರ್‌ ಎಂ, ಪಾಟೀಲ, ಗ್ರಾಮಸ್ಥರು, ಗುರು ಹಿರಿಯರು, ಭಕ್ತಾಧಿಗಳು ಹಾಗೂ ಇನ್ನಿತರರು ಉಪಸ್ಥಿತಿರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.